ಬಾಲಿವುಡ್ ನಟ ಅಭಿಷೇಕ್ ಬಚ್ಚನ್ 'ಕೇಸ್ ತೋ ಬನ್ತಾ ಹೈ' ಸಂಚಿಕೆಯಲ್ಲಿ ಭಾಗಿಯಾಗಿದ್ದರು. ಆದರೆ ತಂದೆ ಬಗ್ಗೆ ಹಾಸ್ಯ ಮಾಡಿದ್ದಕ್ಕೆ ಕಾರ್ಯಕ್ರಮದ ಸೆಟ್ನಿಂದ ಹೊರಬಂದಿದ್ದಾರೆ.
'ಕೇಸ್ ತೋ ಬನ್ತಾ ಹೈ' ಸಿನಿಮಾ ಸೆಲೆಬ್ರಿಟಿಗಳೊಂದಿಗೆ ಮಾಡುವ ಹಾಸ್ಯಮಯ ಶೋ. ಇದರ ಸೆಟ್ ಕೋರ್ಟ್ನಂತಿರುತ್ತದೆ. ಇಲ್ಲಿ ಸೆಲೆಬ್ರಿಟಿಗಳೊಂದಿಗೆ ನಿರೂಪಕರು ಮಾತುಕತೆ ನಡೆಸುತ್ತಾರೆ. ಹೊಸ ಸಂಚಿಕೆಯ ಚಿತ್ರೀಕರಣದ ವೇಳೆ ಅಭಿಷೇಕ್ ಬಚ್ಚನ್ ತಂದೆ ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ ಕುರಿತು ಕಾಮಿಡಿ ಮಾಡಲಾಗಿದೆ. ಈ ವೇಳೆ ಕೋಪಗೊಂಡ ಅಭಿಷೇಕ್ ಸೆಟ್ನಿಂದ ಹೊರನಡೆದಿದ್ದಾರೆ.
ಹಾಸ್ಯನಟ ಪರಿತೋಷ್ ತ್ರಿಪಾಠಿ ಅವರು ಅಮಿತಾಭ್ ಬಚ್ಚನ್ ಅವರ ಮೇಲೆ ಹಾಸ್ಯ ಚಟಾಕಿ ಹಾರಿಸುತ್ತಿದ್ದಂತೆ ಅಭಿಷೇಕ್ ತಕ್ಷಣವೇ ಶೂಟಿಂಗ್ ನಿಲ್ಲಿಸುವಂತೆ ತಯಾರಕರಲ್ಲಿ ತಿಳಿಸಿದರು. ರಿತೇಶ್ ದೇಶ್‌ಮುಖ್ ಮತ್ತು ಕುಶಾ ಕಪಿಲಾ ಆಶ್ಚರ್ಯಕ್ಕೊಳಗಾದರು. ಇದು ಸ್ವಲ್ಪ ಹೆಚ್ಚು ಆಗುತ್ತಿದೆ. ನನ್ನವರೆಗೆ ಮಾತ್ರ ಹಾಸ್ಯವಿರಲಿ, ತಂದೆವರೆಗೆ ಬರುವುದು ಇಷ್ಟವಿಲ್ಲ, ತಂದೆ ವಿಷಯದಲ್ಲಿ ನಾನು ಬಹಳ ಸೆನ್ಸಿಟಿವ್ ಎಂದು ಅಭಿಷೇಕ್ ಹೇಳಿದರು.
ಹಾಸ್ಯನಟ ಪರಿತೋಷ್ ತ್ರಿಪಾಠಿ ಅಭಿಶೇಕ್ ಬಚ್ಚನ್ ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದು, ಪ್ರಯೋಜನವಾಗಿಲ್ಲ. 'ಸ್ವಲ್ಪವಾದರು ಗೌರವ ಕೊಡಬೇಕು, ಹಾಸ್ಯದ ಹೆಸರಲ್ಲಿ ಇಷ್ಟೊಂದು ಮಾಡಬಾರದು' ಎಂದು ಹೇಳುತ್ತಾ ಶೂಟಿಂಗ್ ಸೆಟ್ನಿಂದ ಹೊರ ಬಂದರು.
ಇದನ್ನೂ ಓದಿ: ರಿಚಾ - ಅಲಿ ವಿವಾಹ ಆರತಕ್ಷತೆ ಸಮಾರಂಭಕ್ಕೆ ಗೆಳತಿಯೊಂದಿಗೆ ಆಗಮಿಸಿದ ನಟ ಹೃತಿಕ್ ರೋಷನ್
AmazonminiTV ಯಲ್ಲಿ ಪ್ರಸಾರವಾಗುವ ಈ 'ಕೇಸ್ ತೋ ಬನ್ತಾ ಹೈ' ಹಾಸ್ಯ ಕಾರ್ಯಕ್ರಮವಾಗಿದ್ದು, ರಿತೇಶ್ ದೇಶ್‌ಮುಖ್ ಅವರು ರಕ್ಷಣಾ ವಕೀಲರಾಗಿ ಮತ್ತು ವರುಣ್ ಶರ್ಮಾ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನಟಿಸಿದ್ದಾರೆ. ಕುಶಾ ಕಪಿಲಾ ನ್ಯಾಯಾಧೀಶರ ಸ್ಥಾನದಲ್ಲಿ ಕೂರುತ್ತಾರೆ. ಹಾಸ್ಯನಟರಾದ ಪರಿತೋಷ್ ತ್ರಿಪಾಠಿ, ಗೋಪಾಲ್ ದತ್, ಸಂಕೇತ್ ಭೋಸ್ಲೆ ಮತ್ತು ಸುಗಂಧ ಮಿಶ್ರಾ ಇತರರು ತಮ್ಮ ವಿಶಿಷ್ಟ ಹಾಸ್ಯದೊಂದಿಗೆ ಮನೋರಂಜನೆ ನೀಡುತ್ತಾರೆ.