ETV Bharat / entertainment

ಎತ್ತಿನ ಗಾಡಿ ರೇಸ್​ಗೆ ಬಂದ ಆ್ಯಕ್ಷನ್​ ಪ್ರಿನ್ಸ್​​.. ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು

author img

By

Published : Nov 27, 2022, 6:37 PM IST

Updated : Nov 27, 2022, 8:04 PM IST

ರಾಜ್ಯ ಮಟ್ಟದ ಎತ್ತಿನಗಾಡಿ ಸ್ಪರ್ಧೆಗೆ ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಆಗಮಿಸಿ ಸಾಥ್ ನೀಡಿದರು.

Action prince dhruva sarja came to Hoskote bullock cart race
ಹೊಸಕೋಟೆ ಎತ್ತಿನ ಗಾಡಿ ರೇಸ್​ಗೆ ಬಂದ ಆ್ಯಕ್ಷನ್​ ಪ್ರಿನ್ಸ್

ಹೊಸಕೋಟೆ: ನಗರದ ಹೊರವಲಯದ ಕೊಳತೂರು‌ ಬಳಿ ಕಳೆದ ಮೂರು ದಿನಗಳಿಂದ ರಾಜ್ಯ ಮಟ್ಟದ ಎತ್ತಿನಗಾಡಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವರ್ತೂರಿನ ಹಳ್ಳಿಕಾರ್ ಸಂತೋಷ್ ಈ ಎತ್ತಿನಗಾಡಿ ಹಳ್ಳಿಕಾರ್ ರೇಸ್ ಅನ್ನು ಆಯೋಜನೆ ಮಾಡಿದ್ದರು. ಈ ರೇಸ್​ನಲ್ಲಿ ರಾಜ್ಯ, ಆಂಧ್ರಪ್ರದೇಶ, ತಮಿಳುನಾಡಿನ 200ಕ್ಕೂ ಹೆಚ್ಚು ಹಳ್ಳಿಕಾರ್ ತಳಿಯ ಎತ್ತಿನ ಜೋಡಿಗಳು ಭಾಗವಹಿಸಿದ್ದವು.

ಎತ್ತಿನ ಗಾಡಿ ರೇಸ್​ಗೆ ಬಂದ ಆ್ಯಕ್ಷನ್​ ಪ್ರಿನ್ಸ್

ಇಂದು ಅಂತಿಮ ದಿನದ ಹಿನ್ನೆಲೆ ನಟ ಧ್ರುವ ಸರ್ಜಾ ಕೂಡ ಎತ್ತಿನಗಾಡಿ‌ ರೇಸ್​ಗೆ ಆಗಮಿಸಿದ್ದರು. ನಟನ ಎಂಟ್ರಿ ಅಗ್ತಿದ್ದಂತೆ ಅಭಿಮಾನಿಗಳು ಜೈಕಾರ ಕೂಗಿದರು. ಸ್ಪರ್ಧೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಎತ್ತಿನಗಾಡಿ ಸ್ಪರ್ಧಿಗಳು ಕೂಡ ಧ್ರುವ ಸರ್ಜಾ ನೋಡಿ ಖುಷಿ ಪಟ್ಟರು. ರಾಜ್ಯ ಮಟ್ಟದ ಎತ್ತಿನಗಾಡಿ ಸ್ಪರ್ಧೆಯಲ್ಲಿ ಮಂಡ್ಯ-ಬೇಲೂರಿನ ಎತ್ತುಗಳು‌ ಮೊದಲ ಬಹುಮಾನ ಪಡೆಯಿತು.

ಇದನ್ನೂ ಓದಿ: ನ್ಯೂಜಿಲೆಂಡ್​ನಲ್ಲಿ RC15 ಶೂಟಿಂಗ್.. ​ರಾಮ್ ಚರಣ್ ಸ್ಟೈಲಿಶ್​ ಲುಕ್​ಗೆ ಫ್ಯಾನ್ಸ್ ಫಿದಾ

Last Updated : Nov 27, 2022, 8:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.