ETV Bharat / entertainment

ಪ್ರಶಾಂತ್​ ನೀಲ್​ ನಿರ್ದೇಶನದ ಜ್ಯೂ. ಎನ್​ಟಿಆರ್​ ಚಿತ್ರದಲ್ಲಿ ನಟ ಅಮೀರ್​ ಖಾನ್​? - ಪ್ರಶಾಂತ್​ ನೀಲ್

ಪ್ರಶಾಂತ್​ ನೀಲ್​ ನಿರ್ದೇಶದನ ಚಿತ್ರದ ಅಮೀರ್​ ಖಾನ್​ - ಎನ್​ಟಿಆರ್​ 31 ಚಿತ್ರದಲ್ಲಿ ಬಾಲಿವುಡ್​ ಪರ್ಫೆಕ್ಷನಿಸ್ಟ್​ - ತಂಡದಿಂದ ಅಧಿಕೃತವಾಗದ ಮಾಹಿತಿ

ಪ್ರಶಾಂತ್​ ನೀಲ್​ ನಿರ್ದೇಶನದ ಜ್ಯೂ. ಎನ್​ಟಿಆರ್​ ಚಿತ್ರದಲ್ಲಿ ನಟ ಅಮೀರ್​ ಖಾನ್​?
aamir khan will play opposite role in prashant neel direction film
author img

By

Published : Dec 31, 2022, 11:14 AM IST

ಬೆಂಗಳೂರು: ಕೆಜಿಎಫ್​ 1 ಮತ್ತು 2ನಂತಹ ಪ್ಯಾನ್​ ಇಂಡಿಯಾ ಹಿಟ್​ ನೀಡಿದ ನಿರ್ದೇಶಕ ಪ್ರಶಾಂತ್​ ನೀಲ್​ ಈಗಾಗಲೇ ಜ್ಯೂ. ಎನ್​ಟಿಆರ್ ಅವರ ಸಿನಿಮಾ ನಿರ್ಮಾಣಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಸಲಾರ್​ ಚಿತ್ರದ ಬಳಿಕ ಈ ಎನ್​ಟಿಆರ್​ 31 ಸೆಟ್ಟೆರುವ ಸಾಧ್ಯತೆ ಇದ್ದು, ಈ ಚಿತ್ರದಲ್ಲಿ ಇದೆ ಮೊದಲ ಬಾರಿಗೆ ನಟ ಅಮೀರ್​ ಖಾನ್​ ನಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಎನ್​ಟಿಆರ್​ 31 ಚಿತ್ರ
ಎನ್​ಟಿಆರ್​ 31 ಚಿತ್ರ

ಕೆಜಿಎಫ್​ನಲ್ಲಿ ಸಂಜಯ್​ ದತ್​​, ರವಿನಾ ಟಂಡನ್​ ಅನ್ನು ಕನ್ನಡಕ್ಕೆ ಕರೆ ತಂದ ಸ್ಟಾರ್​ ಡೈರೆಕ್ಟರ್​ ಜ್ಯೂ ಎನ್​ಟಿಆರ್​ ಸಿನಿಮಾದಲ್ಲಿ ಬಾಲಿವುಡ್​ ಪರ್ಫೆಕ್ಷನಿಸ್ಟ್​ ಅನ್ನು ಕರೆತರಲಿದ್ದಾರೆ ಎನ್ನಲಾಗಿದೆ. ಈ ಪಾತ್ರದಲ್ಲಿ ನಟ ಅಮೀರ್​ ಖಾನ್​ ಖಳನಟದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರ ಅಂದುಕೊಂಡಂತೆ ಆದರೆ ಮುಂದಿನ ವರ್ಷದಿಂದ ಪ್ರಾರಂಭವಾಗಬಹುದು.

ಸದ್ಯ ಪ್ರಶಾಂತ್​ ನೀಲ್​ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್​ ಜೊತೆ ಸಲಾರ್​ ಚಿತ್ರದ ನಿರ್ದೇಶಿಸುತ್ತಿದ್ದಾರೆ. ಮೂಲಗಳ ಪ್ರಕಾರ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ವರ್ಕ್​ ನಡೆಯುತ್ತಿದೆ. ಈ ಚಿತ್ರ ಸಂಪೂರ್ಣ ಮುಗಿದ ಬಳಿಕ ಜ್ಯೂ. ಎನ್​ಟಿಆರ್​ ಜೊತೆ ಕೆಲಸ ಪ್ರಾರಂಭಿಸಲಿದ್ದಾರೆ. ಈ ಚಿತ್ರ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಇರಲಿದೆ.

ಇನ್ನು ಪ್ರಶಾಂತ್​ ನೀಲ್​ ಜ್ಯೂ ಎನ್​ಟಿಆರ್​ಗಾಗಿ ಎರಡು ದಶಕದ ಹಿಂದೆಯೇ ಈ ಕಥೆಯನ್ನು ಸಿದ್ಧವಾಗಿಟ್ಟುಕೊಂಡಿದ್ದರಂತೆ. ಸರಿಯಾದ ಸಮಯದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಲು ಕಾಯುತ್ತಿರುವುದಾಗಿ ಈ ಹಿಂದೆ ಹೇಳಿದ್ದರು. ಈ ಚಿತ್ರದ ಐಡಿಯಾ 20 ವರ್ಷದ ಹಿಂದೆಯೇ ತಮಗೆ ಬಂದಿದ್ದು, ಚಿತ್ರದ ಪರಿಣಾಮ ಅದರ ಮಟ್ಟದಿಂದ ಹಿಂದೆ ಸರಿದಿದ್ದೆ. ಕಡೆಗೂ ನನ್ನ ಕನಸಿನ ಯೋಜನೆಗೆ ಕಾಲ ಕೂಡಿ ಬಂದಿದೆ ಎಂದಿದ್ದಾರೆ.

ಜ್ಯೂ ಎನ್​ಟಿಆರ್​ ಹುಟ್ಟುಹಬ್ಬದಂದು ಇಬ್ಬರು ಒಟ್ಟಿಗೆ ಫೋಟೋ ಹಂಚಿಕೊಳ್ಳುವ ಮೂಲಕ ಕೆಲಸ ಮಾಡುವುದಾಗಿ ಘೋಷಿಸಿದ್ದರು. ಮೈತ್ರಿ ಮೂವಿ ಮೇಕರ್​ ಈ ಚಿತ್ರದ ನಿರ್ಮಾಣ ಮಾಡಲಿದ್ದು, ಏಪ್ರಿಲ್​ 2023ರಿಂದ ಎನ್​ಟಿಆರ್​ 31 ಕೆಲಸ ಆರಂಭಿಸುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು.

ಇದನ್ನೂ ಓದಿ: ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ಸಿರಿ ಜೊತೆ ರಾಜ್ ಬಿ ಶೆಟ್ಟಿ ರೊಮ್ಯಾನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.