ಹೈದರಾಬಾದ್: ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಅವರನ್ನು ಮದುವೆಯಾಗಿ ನಟಿ ಸ್ವರಾ ಭಾಸ್ಕರ್ ಸುದ್ದಿಯಾಗಿದ್ದರು. ರಿಜಿಸ್ಟರ್ ಕಚೇರಿಯಲ್ಲಿ ಸರಳವಾಗಿ ಮದುವೆಯಾಗಿದ್ದ ಸ್ವರಾ ಇದೀಗ ಅದ್ದೂರಿ ಮದುವೆಯಾಗಲು ಸಜ್ಜಾಗಿದ್ದಾರೆ. ಕುಟುಂಬದ ಸಮ್ಮುಖದಲ್ಲಿ ಇದೇ ಮಾರ್ಚ್ 15 ಮತ್ತು 16ರಂದು ಮತ್ತೆ ಸಪ್ತಪದಿ ತುಳಿಯಲಿದ್ದಾರೆ. ಅದಕ್ಕೂ ಮುನ್ನ ಕುಟುಂಬದ ಪೂರ್ವ ಕಾರ್ಯಕ್ರಮಗಳಲ್ಲಿ ನವ ಮಧುಮಗಳು ಮಿಂಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋ ವೈರಲ್ ಆಗಿದೆ.
ಒಂದೇ ದಿನ ನಡೆದ ಎರಡು ಕಾರ್ಯಕ್ರಮ: ಭಾನುವಾರ ನಟಿ ಸ್ವರಾ ಭಾಸ್ಕರ್ ಅವರ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಗಳು ಒಂದರ ನಂತರ ಒಂದು ನಡೆದಿದೆ. ಸಂಜೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಜನಪತ ಹಾಡುಗಾರ್ತಿ ದೀನೆ ಖಾನ್ ಮೆರಗು ಹೆಚ್ಚಿಸಿದರು. ಕಾರ್ಯಕ್ರಮದ ಸಂಭ್ರಮದ ಚಿತ್ರಣಗಳಲ್ಲಿ ಸ್ವರಾ ಮತ್ತು ಫಹಾದ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. #SwaadAnusaar ಎಂಬ ಹ್ಯಾಷ್ಟ್ಯಾಗ್ನ್ನು ಇಬ್ಬರು ಬಳಸಿರುವುದು ಎಲ್ಲರ ಗಮನ ಸೆಳೆದಿದೆ.
ಯಾವುದೇ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಕೂಡ ಫನ್ ಕಾರ್ಯಕ್ರಮವನ್ನಾಗಿ ರೂಪಿಸುವುದು ಕಾಣಬಹುದು. ಹೋಳಿ ಜೊತೆಯಲ್ಲಿಯೆ ಅರಿಶಿನ ಶಾಸ್ತ್ರವನ್ನು ಕೂಡ ಆಚರಿಸಲಾಗಿದ್ದು, ಮೆಹಂದಿ ಕಾರ್ಯಕ್ರಮದಲ್ಲಿ ಫಹಾದ್, ಸ್ವರಾ ಮಜಾ ಮಾಡಿದ್ದಾರೆ. ಇನ್ನು ಹಳದಿ ಕಾರ್ಯಕ್ರಮದಲ್ಲಿ ಕಿತ್ತಳೆ ಬಣ್ಣದ ಅನಾರ್ಕಲಿ ಯಲ್ಲಿ ಸ್ವರಾ ಮಿಂಚಿದ್ದಾರೆ. ದೊಡ್ಡದಾದ ತಲೆಬೊಟ್ಟು (ಮಂಗ್ ಟಿಕಾ), ದೊಡ್ಡ ಝುಮುಕಿಯಲ್ಲಿ ಅವರು ಎಲ್ಲರ ಕಣ್ಸೆಳೆದಿದ್ದಾರೆ. ಸ್ವರಾ ಭಾಸ್ಕರ್ ಗಂಡ ಫಹಾದ್ ಅವರು, ತಿಳಿ ನೀಲಿ ಕುರ್ತಾ, ಬಿಳಿ ಪೈಜಾಮದಲ್ಲಿ ಮಿಂಚಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸ್ವರಾ ಅವರು, ಮೆಹಂದಿ ಕಾರ್ಯಕ್ರಮದ ಕ್ಯಾಂಡಿಡ್ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ಚಾಟ್ ತಿನ್ನುತ್ತಿರುವುದು ಕಾಣಬಹುದಾಗಿದೆ. ವಿಡಿಯೋದಲ್ಲಿ ಚಾಟ್ ತಿನ್ನುವ ಮೂಲಕ ನಗೆಗಡಲಲ್ಲಿ ತೇಲಿತ್ತಿರುವ ಕಾಣಬಹುದು. ಮೆಹಂದಿ ಕಾರ್ಯಕ್ರಮದ ಕುರಿತು ಇಬ್ಬರು ಹಂಚಿಕೊಂಡಿರುವುದು ಕಾಣಬಹುದಾಗಿದೆ.
ಸಂಜೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸ್ವರಾ ಗಾಢ ಹಸಿರುವ ಬಣ್ಣದ ಲೆಹಾಂಗಾದಲ್ಲಿ ಕಂಡು ಬಂದರು. ಇದೇ ವೇಳೆ, ಈ ಮ್ಯೂಸಿಕಲ್ ನೈಟ್ ಮತ್ತು ಡೆಕೋರೇಷನ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮದುವೆ ಬಳಿಕ ಟೀಕೆಗೆ ಗುರಿ: ಫಹಾದ್ ಅವರನ್ನು ನೋಂದಾಣಿ ಕಚೇರಿಯಲ್ಲಿ ಸರಳವಾಗಿ ಮದುವೆಯಾದ ಬಳಿಕ ನಟಿ ಸ್ವರಾ ಭಾಸ್ಕರ್ ತಮ್ಮ ಮೊದಲ ರಾತ್ರಿಗೆ ಸಿದ್ದವಾಗಿದ್ದ ಮಂಚದ ಚಿತ್ರವನ್ನು ಹಂಚಿಕೊಂಡಿದ್ದರು. ಅವರ ಈ ಚಿತ್ರಕ್ಕೆ ನೆಟ್ಟಿಗರು ಕೆಂಡ ಕಾರಿದರು. ಖಾಸಗಿತನವನ್ನು ಕೊಂಚವಾದರೂ ಕಾಯ್ದುಕೊಳ್ಳಬೇಕು ಎಂಬ ಬುದ್ದಿ ಮಾತುಗಳು ಕೇಳಿ ಬಂದಿದ್ದವು. ಈ ಬೆನ್ನಲ್ಲೇ ಅವರು, ಈ ಫೋಟೋವನ್ನು ತೆಗೆದು ಹಾಕಿದರು.
ವೈರಲ್ ಆದ ಆಮಂತ್ರಣ ಪತ್ರಿಕೆ: ಮಗಳು ಸರಳವಾಗಿ ಮದುವೆಯಾದ ಹಿನ್ನಲೆ ಇದೀಗ ಕುಟುಂಬಸ್ಥರು ಅದ್ದೂರಿಯಾಗಿ ಮದುವೆ ನಡೆಸುತ್ತಿದ್ದು, ಈ ವಿವಾಹದ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆದಿತ್ತು. ವಿನ್ಯಾಸಕಾರ ಪ್ರತೀಕ್ ವಿನ್ಯಾಸದಲ್ಲಿ ಮೂಡಿ ಬಂದಿದ್ದ ಈ ಕಾರ್ಡ್ ಎಲ್ಲರ ಮೆಚ್ಚುಗೆಗೂ ಕೂಡ ಪಾತ್ರವಾಗಿತ್ತು.
ಇದನ್ನೂ ಓದಿ: ಸಿದ್ಧಾರ್ಥ್ ಕಿಯಾರಾ ವಿವಾಹ: ವಧುವಿನ ಕಡೆಯವರಿಗಿಂತ ವರನ ಅತಿಥಿಗಳ ಸಂಖ್ಯೆಯೇ ದುಪ್ಪಟ್ಟು!