ETV Bharat / entertainment

ಉತ್ತರಕಾಂಡ ಸಿನಿಮಾದ ಕ್ಯಾರೆಕ್ಟರ್ ಟೀಸರ್ ರಿಲೀಸ್; ಗಬ್ರು ಸತ್ಯನಾಗಿ ಮಿಂಚಿದ ಡಾಲಿ - ಬಡವ ರಾಸ್ಕಲ್ ಚಿತ್ರತಂಡ

ನಾಳೆ ನಟ ಡಾಲಿ ಧನಂಜಯ್ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಉತ್ತರಕಾಂಡ ಚಿತ್ರತಂಡ ಸ್ಪೆಷಲ್ ಉಡುಗೊರೆ ನೀಡಿದೆ.

ಉತ್ತರಕಾಂಡ ಸಿನಿಮಾ ಪೋಸ್ಟರ್​
ಉತ್ತರಕಾಂಡ ಸಿನಿಮಾ ಪೋಸ್ಟರ್​
author img

By ETV Bharat Karnataka Team

Published : Aug 22, 2023, 10:50 PM IST

Updated : Aug 23, 2023, 5:06 PM IST

ಬೆಂಗಳೂರು: ಕನ್ನಡದ ಜೊತೆಗೆ ಪರಭಾಷೆಗಳ ಸಿಲ್ವರ್ ಸ್ಕ್ರೀನ್ ಮೇಲೆಯೂ ವಿಜೃಂಭಿಸುತ್ತಿರುವ ನಟ ಎಂದರೆ ಧನಂಜಯ್. ಸದ್ಯ ಕನ್ನಡಿಗರ ನೆಚ್ಚಿನ 'ಡಾಲಿ'ಯಾಗಿರೋ‌ ಧನಂಜಯ್, ಕಳೆದ‌‌ ನಾಲ್ಕು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಲ್ಲ. ಆದರೆ ಈ ವರ್ಷ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ನಡುವೆ ಉತ್ತರಕಾಂಡ ಚಿತ್ರತಂಡ ಸ್ಪೆಷಲ್ ಉಡುಗೊರೆ ನೀಡಿದೆ.

ಉತ್ತರಕಾಂಡ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಟೀಸರ್​ನಲ್ಲಿ ಧನಂಜಯ್ ಗಬ್ರು ಸತ್ಯನಾಗಿ ಮಿಂಚಿದ್ದಾರೆ. ಉತ್ತರ ಕರ್ನಾಟಕದ ಉಡಾಳ ಗ್ಯಾಂಗ್​ ಸ್ಟಾರ್ ಪಾತ್ರದಲ್ಲಿ ಡಾಲಿ ಕಾಣಿಸಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಸದ್ಯ ರಿವೀಲ್ ಆಗಿರುವ ಟೀಸರ್​ನಲ್ಲಿ ಗಬ್ರು ಸತ್ಯನ ಲುಕ್​ನ ಪರಿಚಯದ ಜೊತೆಗೆ ವ್ಯಕ್ತಿತ್ವದ ಝಲಕ್ ಅನ್ನು ನಿರ್ದೇಶಕ ರೋಹಿತ್ ಪದಕಿ ತೋರಿಸಿದ್ದಾರೆ. ಟೀಸರ್‌ನ ಆರಂಭದಲ್ಲಿಯೇ ಧನಂಜಯ್ ಅಲಿಯಾಸ್ ಗಬ್ರು ಸತ್ಯ ಪೊಲೀಸ್ ಸ್ಟೇಷನ್​ನಲ್ಲಿ ಹೂವಿನ‌ ಬಣ್ಣದ ಚಡ್ಡಿಯಲ್ಲಿ ಕೂತಿರುತ್ತಾನೆ. ಪೊಲೀಸ್ ಅಧಿಕಾರಿಯೊಬ್ಬರು ಗಬ್ರುಗೆ ಕೆಟ್ಟದಾಗಿ ಬೈಯ್ಯುತ್ತಾ, ವ್ಯಂಗ್ಯ ಮಾಡುತ್ತಾ ಇನ್ನೊಮ್ಮೆ ಹೆಸರು ಕಿವಿಗೆ ಬಿದ್ದರೆ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ ಗಬ್ರು ಸತ್ಯ ಮಾತ್ರ ತೀರ ನಾಟಕೀಯವಾಗಿ ಅಮಾಯಕನಂತೆ ನಟಿಸುತ್ತಾ ಹೊರಬರುತ್ತಾನೆ.

ಆದರೆ, ಹೊರಗೆ ಬೇರೆಯದ್ದೇ ಚಿತ್ರಣ ಇರುತ್ತದೆ. ಗಬ್ರು ಹುಟ್ಟುಹಬ್ಬಕ್ಕಾಗಿ ಗಾನಾ ಬಜಾನ ಆಯೋಜನೆಗೊಂಡಿರುತ್ತದೆ. ಗಬ್ರುನನ್ನು ಸ್ವಾಗತಿಸಲು ಯುವಕರ ಗುಂಪು ಸೇರಿರುತ್ತದೆ. ಠಾಣೆಯಿಂದ ಹೊರಗೆ ಬಂದ ಗಬ್ರು, ಸಿಹಿ ತಿಂಡಿಯ ಪ್ಯಾಕೇಟ್ ಹಿಡಿದು ಮತ್ತೆ ಠಾಣೆಯ ಒಳಹೋಗಿ ತನಗೆ ಬೆದರಿಕೆ ಹಾಕಿದ ಪೊಲೀಸ್ ಅಧಿಕಾರಿಗೆ ಸಿಹಿ ತಿಂಡಿ ಕೊಟ್ಟು ಹೊರಬಂದು ಸ್ಟೈಲ್ ಆಗಿ ಬೈಕ್ ಏರಿ, ಪೊಲೀಸಪ್ಪನಿಂದಲೇ ಕದ್ದ ಸಿಗರೇಟು ಹೊತ್ತಿಸುತ್ತಾನಷ್ಟೇ. ಇದೇ ವೇಳೆ ಗಬ್ರು ಇಟ್ಟು ಬಂದ ಸ್ಪೋಟಕ ತುಂಬಿದ ಸಿಹಿ ತಿನಿಸಿನ ಪ್ಯಾಕೆಟ್ ಬ್ಲಾಸ್ಟ್ ಆಗುತ್ತೆ. ಕರ್ನಾಟಕದ ಮನಿ ಮಗ ಯಾರ್ರಲೇ ಎಂದು ಖಡಕ್ ಡೈಲಾಗ್​ ಹೊಡೆಯುತ್ತಾನೆ ಗಬ್ರು.

ಟೀಸರ್​ನಲ್ಲಿ ಪಕ್ಕಾ ಉಡಾಳ ಬುದ್ಧಿಯ ಗ್ಯಾಂಗ್​ಸ್ಟರ್ ಆಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲೇ ನಡೆಯುವ ಕಥೆ ಆಧರಿಸಿದ ಸಿನಿಮಾವಾದ್ದರಿಂದ ಅಲ್ಲಿನ ಭಾಷೆಯನ್ನೇ ಬಳಸಲಾಗಿದೆ. ಮಾಸ್ ಅವತಾರದಲ್ಲಿ ಡಾಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಧನಂಜಯ್ ಜೊತೆ ರತ್ನನ್ ಪ್ರಪಂಚ ಸಿನಿಮಾ ನಿರ್ದೇಶಿಸಿದ್ದ ರೋಹಿತ್ ಪದಕಿ ‘ಉತ್ತರ ಕಾಂಡ’ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಡೆವ ಗ್ಯಾಂಗ್​ವಾರ್ ಕತೆಯನ್ನು ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಧನಂಜಯ್ ಜೊತೆಗೆ ನಟಿ ರಮ್ಯಾ ಇದ್ದಾರೆ. ಶಿವ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಕೆಆರ್​ಜಿ ಸ್ಟುಡಿಯೋಸ್​ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತವಿದೆ.

ಬಡವ ರಾಸ್ಕಲ್ ಚಿತ್ರತಂಡದಿಂದ ಹೊಸ ಚಿತ್ರದ ಪೋಸ್ಟರ್ ಅನಾವರಣ ಆಗಲಿದೆ. ತೆಲುಗಿನಲ್ಲಿ ಪುಷ್ಪ 2 ಸಿನಿಮಾದ ಭಾಗವಾಗಿರುವ ಧನಂಜಯ್, ‌ಹೆಸರಿಡದ ಕನ್ನಡದ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ‌. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧನಂಜಯ್ ನಂದಿನಿ ಲಿಂಕ್ಸ್ ಮೈದಾನದಲ್ಲಿ ರಾತ್ರಿ 12 ಗಂಟೆಗೆ ಅಭಿಮಾನಿಗಳಿಗೆ ಸಿಗಲಿದ್ದಾರೆ.

ಧನಂಜಯ್ ಯಶಸ್ಸಿಗೆ ಕಾರಣವಾಗಿರುವ ಅಭಿಮಾನಿಗಳನ್ನು ಡಾಲಿ, ಅಭಿಮಾನಿ ದೊರೆಗಳು ಅಂತಾ ಕರೆಯುವ ಮೂಲಕ ಅಭಿಮಾನಿಗಳಿಗೆ ಕೇಕ್, ಸಾವಿರಾರು ರೂಪಾಯಿ ಬೆಲೆ ಬಾಳುವ ಹೂವಿನ ಹಾರ, ತರಬಾರದು ಅಂತಾ ಮನವಿ ಮಾಡಿದ್ದಾರೆ. ರಾತ್ರಿ 12 ಗಂಟೆಯಿಂದ‌ ನಾಳೆ ಮಧ್ಯಾಹ್ನದವರೆಗೂ ಅಭಿಮಾನಿಗಳ ಜೊತೆ ಧನಂಜಯ್ ಕಾಲ ಕಳೆಯುವ ಮುಖಾಂತರ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬಹುಭಾಷಾ ಸುಂದರಿ ಜೊತೆ ಡಾಲಿ ಧನಂಜಯ್ ಲಾಂಗ್ ಡ್ರೈವ್​​.. ತೋತಾಪುರಿ 2 ಮೇಕಿಂಗ್ ವಿಡಿಯೋ ರಿವೀಲ್

Last Updated : Aug 23, 2023, 5:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.