ETV Bharat / entertainment

ಡ್ಯಾರೆನ್ ಅರೋನೊಫ್ಸ್ಕಿ ಕೈ ಚಳಕದಲ್ಲಿ ಮೂಡಿಬರಲಿದೆ ಮಸ್ಕ್​ ಬಯೋಪಿಕ್​ - ಟೆಸ್ಲಾ ಸಿಇಒ

A biopic on Tesla CEO Elon Musk: ಟೆಸ್ಲಾ ಸಿಇಒ ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ಜೀವನಚರಿತ್ರೆಯನ್ನು ಬಯೋಪಿಕ್ ಮಾಡಲಾಗುತ್ತಿದೆ.

Elon Musk biopic coming soon  Elon Musk  Telsa head Elon Musk  Tesla CEO Elon Musk  film production company A24  Biopic on Elon Musk  written by an American writer Walter Isaacson  ಬರದಲಿದೆ ಮಸ್ಕ್​ ಬಯೋಪಿಕ್​ ಡ್ಯಾರೆನ್ ಅರೋನೊಫ್ಸ್ಕಿ ಕೈ ಚಳಕ  ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್  ಎಲೋನ್ ಮಸ್ಕ್ ಅವರ ಜೀವನಚರಿತ್ರೆ  ಪ್ರಸಿದ್ಧ ವ್ಯಕ್ತಿಗಳ ಜೀವನಾಧಾರಿತ ಬಯೋಪಿಕ್‌  ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ ಎಂಬುದನ್ನು ಪುಸ್ತಕ  10ನೇ ವಯಸ್ಸಿನಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್
ಡ್ಯಾರೆನ್ ಅರೋನೊಫ್ಸ್ಕಿ ಕೈ ಚಳಕದಲ್ಲಿ ಮೂಡಿ ಬರದಲಿದೆ ಮಸ್ಕ್​ ಬಯೋಪಿಕ್​
author img

By ETV Bharat Karnataka Team

Published : Nov 14, 2023, 8:27 AM IST

ಹೈದರಾಬಾದ್: ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳ ಜೀವನಾಧಾರಿತ ಬಯೋಪಿಕ್‌ಗಳು ತಯಾರಾಗುತ್ತಿವೆ. ಬೆಳ್ಳಿತೆರೆಯಲ್ಲಿ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮತ್ತು ರಾಜಕೀಯ ನಾಯಕರ ಜೀವನ ಬಹಿರಂಗವಾಗಿದೆ. ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಜೀವನ ಶೀಘ್ರದಲ್ಲೇ ಸಿನಿಮಾ ಆಗಲಿದೆ. ಎರಡು ತಿಂಗಳ ಹಿಂದೆ ಅವರ ಜೀವನಗಾಥೆಯನ್ನು ‘ಎಲಾನ್ ಮಸ್ಕ್’ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಇದನ್ನು ಅಮೆರಿಕದ ಬರಹಗಾರ ವಾಲ್ಟರ್ ಐಸಾಕ್ಸನ್ ಬರೆದಿದ್ದಾರೆ. ದಕ್ಷಿಣ ಆಫ್ರಿಕಾದ ಕುಟುಂಬದಲ್ಲಿ ಜನಿಸಿದ ಮಸ್ಕ್, ಕೋಟ್ಯಾಧಿಪತಿಯಾಗಿ ಬೆಳೆದರು. ಅವರು ಜೀವನದಲ್ಲಿ ಹೇಗೆ ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ ಎಂಬುದನ್ನು ತಮ್ಮ ಪುಸ್ತಕದಲ್ಲಿ ವಿವರಿಸಲಾಗಿದೆ.

ಈ ಪುಸ್ತಕವನ್ನು ಆಧರಿಸಿ ಪ್ರಸ್ತುತ ಮಸ್ಕ್​ ಬಯೋಪಿಕ್ ಅನ್ನು ನಿರ್ಮಿಸಲಾಗುತ್ತಿದೆ. ಅಷ್ಟರ ಮಟ್ಟಿಗೆ ಮಸ್ಕ್​ ಅವರ ಬಯೋಪಿಕ್ ತೆರೆಗೆ ತರಲು ಚಿತ್ರ ನಿರ್ಮಾಣ ಸಂಸ್ಥೆ ಏ24 ಸಿದ್ಧವಾಗುತ್ತಿದೆ. ಇದಕ್ಕಾಗಿ ನಿರ್ಮಾಣ ಸಂಸ್ಥೆಯು ಪುಸ್ತಕದ ಲೇಖಕರಿಂದ ಹಕ್ಕುಗಳನ್ನು ಪಡೆದುಕೊಂಡಿದೆ. ಹಾಲಿವುಡ್​ನ ಖ್ಯಾತ ನಿರ್ದೇಶಕ ಡಾರೆನ್ ಅರೋನೊಫ್ ಸ್ಕಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಹಿಂದೆ ‘ಬ್ಲ್ಯಾಕ್ ಸ್ವಾನ್’, ‘ಪೈ’, ‘ದಿ ವೇಲ್’ ಚಿತ್ರಗಳನ್ನು ನಿರ್ದೇಶಿಸಿದ್ದರು. ಈ ಬಯೋಪಿಕ್‌ನಲ್ಲಿ ಮಸ್ಕ್ ಅವರ ವೃತ್ತಿಪರ ಜೀವನದ ಜೊತೆಗೆ ವೈಯಕ್ತಿಕ ಜೀವನವನ್ನೂ ತೋರಿಸಲಾಗುತ್ತದೆ. ಆದರೆ, ಮಸ್ಕ್​ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ವಿವರಗಳು ಬಹಿರಂಗವಾಗಿಲ್ಲ.

ಮಸ್ಕ್ 10ನೇ ವಯಸ್ಸಿನಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿತು, 12ನೇ ವಯಸ್ಸಿನಲ್ಲಿ ‘ಬ್ಲಾಸ್ಟರ್’ ಎಂಬ ವಿಡಿಯೋ ಗೇಮ್ ಸೃಷ್ಟಿಸಿದ. ಸ್ಥಳೀಯ ನಿಯತಕಾಲಿಕವೊಂದು ಆತನಿಂದ ಐನೂರು ಯುಎಸ್ ಡಾಲರ್‌ಗೆ ಖರೀದಿಸಿತು. ಇದನ್ನು ಮಸ್ಕ್​ ಅವರ ಮೊದಲ ‘ವ್ಯಾಪಾರ ಸಾಧನೆ’ ಎನ್ನಬಹುದು. 1995 ರಲ್ಲಿ, ಅವರು ವೆಬ್ ಸಾಫ್ಟ್‌ವೇರ್ ಕಂಪನಿ Zip-2 ಅನ್ನು ಸ್ಥಾಪಿಸಿದರು. ಕಾಂಪ್ಯಾಕ್ ಈ ಕಂಪನಿಯನ್ನು 1999 ರಲ್ಲಿ $307 ಮಿಲಿಯನ್​ಗೆ ಖರೀದಿಸಿತು. ಈ ಒಪ್ಪಂದದಿಂದ ಮಸ್ಕ್ ಕಂಪನಿಯಲ್ಲಿ 7% ಪಾಲನ್ನು ವಿನಿಮಯವಾಗಿ $22 ಮಿಲಿಯನ್ ಪಡೆದರು. ಇಲ್ಲಿ ಎಲಾನ್ ಮಸ್ಕ್ ಅವರ ವ್ಯವಹಾರವು ನಿಜವಾಗಿಯೂ ಪ್ರಾರಂಭವಾಯಿತು.

ಎಲಾನ್ ಮಸ್ಕ್ 2002 ರಲ್ಲಿ ಸ್ಪೇಸ್ ಎಕ್ಸ್ ಅನ್ನು ಬಾಹ್ಯಾಕಾಶ ಪ್ರಯೋಗಗಳಿಗಾಗಿ ಸ್ಥಾಪಿಸಿದರು ಮತ್ತು 2003 ರಲ್ಲಿ ಎಲೆಕ್ಟ್ರಿಕ್ ಕಾರ್ ತಯಾರಕ ಕಂಪನಿ ಟೆಸ್ಲಾವನ್ನು ಸ್ಥಾಪಿಸಿದರು. ಅದರ ನಂತರ, ಅವರು ದಿ ಬೋರಿಂಗ್, ನ್ಯೂರಾಲಿಂಕ್ ಮತ್ತು ಸೋಲಾರ್ ಸಿಟಿಯಂತಹ ಕಂಪನಿಗಳನ್ನು ಸ್ಥಾಪಿಸಿದರು. ಈ ಕ್ರಮದಲ್ಲಿ ಸೋಷಿಯಲ್ ಮೀಡಿಯಾ ಕಂಪನಿ ಟ್ವಿಟರ್ ಅನ್ನು ಕೂಡ ಕಳೆದ ವರ್ಷ ಖರೀದಿಸಿದ್ದು, ಅದರ ಹೆಸರನ್ನು ಎಕ್ಸ್ ಎಂದು ಬದಲಾಯಿಸಲಾಗಿದೆ. ಶೀಘ್ರದಲ್ಲೇ ಸೂಪರ್ ಆಪ್ ಆಗಿ ಪರಿವರ್ತನೆಯಾಗಲಿದೆ ಎಂದರು. ಈ ವರ್ಷ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮಸ್ಕ್ ಅಗ್ರಸ್ಥಾನ ಪಡೆದಿದ್ದಾರೆ.

ಓದಿ: ಜನವರಿ 2024ರೊಳಗೆ ಟೆಸ್ಲಾ ಕಾರು ಭಾರತದಲ್ಲಿ ರಸ್ತೆಗಿಳಿಯುವ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.