ETV Bharat / entertainment

ಭಾವನೆಗಳ ಸುತ್ತ ಸುಂದರ ಪ್ರೀತಿಯ ಪಯಣ: ಇದು ಮೆಲೋಡಿ ಡ್ರಾಮಾ..

author img

By

Published : May 25, 2023, 7:18 PM IST

ಮೆಲೋಡಿ ಡ್ರಾಮಾ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

Melody Drama Film Team
ಮೆಲೋಡಿ ಡ್ರಾಮ ಚಿತ್ರತಂಡ

'ಮೆಲೋಡಿ ಡ್ರಾಮ' ಸ್ಯಾಂಡಲ್​ವುಡ್​ನಲ್ಲಿ ಟೈಟಲ್​ನಿಂದಲೇ ಲೈಟ್ ಆಗಿ ಸೌಂಡ್ ಮಾಡುತ್ತಿರುವ ಸಿನಿಮಾ. ಯುವ ನಟ ಕಾರ್ತಿಕ್ ಹಾಗೂ ಸುಪ್ರೀತಾ ಅಭಿನಯದ ಮೆಲೋಡಿ ಡ್ರಾಮ ಸಿನಿಮಾ ಸದ್ದಿದಲ್ಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಮಂಜು ಕಾರ್ತಿಕ್ ನಿರ್ದೇಶನದ ಮೆಲೋಡಿ ಡ್ರಾಮ ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಮಾಡಲಾಯಿತು.

Melody is the hero and heroine of the drama film
ಮೆಲೋಡಿ ಡ್ರಾಮಾ ಚಿತ್ರದ ನಾಯಕ ಹಾಗೂ ನಾಯಕಿ

ಮೊಲೋಡಿ ಡ್ರಾಮ ಚಿತ್ರದ ವಿಶೇಷತೆ ಬಗ್ಗೆ ಮಾತು ಶುರು ಮಾಡಿದ ನಿರ್ದೇಶಕ ಮಂಜು ಕಾರ್ತಿಕ್, ಪ್ರೀತಿ ಭಾವನೆಗಳ ಜೊತೆಗೆ ಸಂಬಂಧ ಹೇಗೆ ನಡೆದುಕೊಂಡು ಹೋಗಬೇಕು ಹಾಗೂ ಜೀವನದಲ್ಲಿ ಪ್ರತಿಯೊಬ್ಬರು ತಪ್ಪು ಮಾಡುತ್ತಾರೆ. ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಪ್ರತಿಯೊಬ್ಬರಿಗೂ ಇರುತ್ತದೆ. ನಾವು ತಿದ್ದಿಕೊಳ್ಳಬೇಕು ಎಂಬ ವಿಷಯವನ್ನು ಹೇಳ ಹೊರಟ್ಟಿದ್ದೇವೆ. ಮೆಲೋಡಿ ಡ್ರಾಮಾ ಚಿತ್ರಕ್ಕೆ "ನಿನ್ನ ಕಥೆ ನನ್ನ ಜೊತೆ" ಎಂಬ ಅಡಿ ಬರಹವಿದೆ‌. ಚಿತ್ರದಲ್ಲಿ ಏಳು ಸುಮಧುರ ಹಾಡುಗಳಿವೆ. ಸೋನು ನಿಗಮ್, ಕೈಲಾಶ್ ಖೇರ್, ಪಲಾಕ್ ಮುಚ್ವಲ್, ಮುಂತಾದ ಖ್ಯಾತ ಗಾಯಕರು ಹಾಡಿದ್ದಾರೆ.

ಮನು ಡಿ ಬಿ ಹಳ್ಳಿ ಅವರ ಛಾಯಾಗ್ರಹಣ ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. "ದ್ವಿಪಾತ್ರ" ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಸತ್ಯ ಈ ಚಿತ್ರದ ನಾಯಕನಾಗಿ, ಸೀತಾವಲ್ಲಭ ಹಾಗೂ ಸರಸು ಧಾರಾವಾಹಿ ಮೂಲಕ ಮನೆಮಾತಾಗಿರುವ ಸುಪ್ರೀತಾ ಸತ್ಯನಾರಾಯಣ ಅವರು ನಾಯಕಿಯಾಗಿ ನಟಿಸಿದ್ದಾರೆ. ಇದರ ಜೊತೆಗೆ ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ, ಬಾಲು ರಾಜವಾಡಿ, ಲಕ್ಷ್ಮೀ ಸಿದ್ದಯ್ಯ, ಅಶ್ವಿನ್ ಹಾಸನ್, ವೈಭವ್ ನಾಗರಾಜ್, ವಿನೋದ್ ಗೊಬ್ಬರಗಾಲ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದರು.

ಚಿತ್ರದ ನಾಯಕ ನಟ ಸತ್ಯ ಮಾತನಾಡಿ, ಇದೇ ಮೊದಲ ಬಾರಿಗೆ ದ್ವಿಪಾತ್ರಲ್ಲಿ ಅಭಿನಯಿಸಿದ್ದೇನೆ. ಕಾರ್ತಿಕ್ ನನ್ನ ಪಾತ್ರದ ಹೆಸರು. ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ ಎಂದರು. ಇನ್ನು ನಾಯಕಿ ಸುಪ್ರೀತ ಸತ್ಯನಾರಾಯಣ ಮಾತನಾಡಿ, ಈ ಹಿಂದೆ ಕೆಲವು ಜನಪ್ರಿಯ ಧಾರಾವಾಹಿ ಹಾಗೂ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. "ಮೆಲೋಡಿ ಡ್ರಾಮಾ" ದಲ್ಲಿ ಹಿತ ಎಂಬುದು ನನ್ನ ಪಾತ್ರದ ಹೆಸರು. ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪಾತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು.

ನನಗೆ ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹವ್ಯಾಸ. ಮೂವತ್ತೈದು ವರ್ಷಗಳಿಂದ ತಪ್ಪದೇ ವಾರಕ್ಕೊಂದು ಸಿನಿಮಾ ನೋಡಿಕೊಂಡು ಬರುತ್ತಿದ್ದೇನೆ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ಒಳ್ಳೆಯ ಚಿತ್ರ ಮಾಡಿದ ಖುಷಿಯಿದೆ ಎಂದರು ನಿರ್ಮಾಪಕ ನಂಜುಂಡ ರೆಡ್ಡಿ. ಚಿತ್ರದಲ್ಲಿ ಏಳು ಹಾಡುಗಳಿದೆ. ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್, ಧನಂಜಯ್ ರಂಜನ್ ಹಾಡುಗಳನ್ನು ಬರೆದಿದ್ದಾರೆ ಎಂದು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಮಾಹಿತಿ ನೀಡಿದರು‌. ಈ ಚಿತ್ರಕ್ಕೆ ಮನು ಡಿ. ಬಿ ಹಳ್ಳಿ ಛಾಯಾಗ್ರಹಣ ಹಾಗೂ ಆರ್ ಮಂಜು ಸಂಕಲನವಿದೆ. ಸದ್ಯ ಚಿತ್ರವನ್ನು ಸೆನ್ಸಾರ್ ಮಂಡಳಿ ನೋಡಿ ಮೆಚ್ಚುಕೊಂಡಿದ್ದು, ಜೂನ್ ನಲ್ಲಿ ಮೆಲೋಡಿ ಚಿತ್ರವನ್ನ ಬಿಡುಗಡೆ ಮಾಡುವ ಪ್ಲಾನ್​ನಲ್ಲಿದೆ ಚಿತ್ರ ತಂಡ.

ಇದನ್ನೂ ಓದಿ: 'ಮಿಸ್ಟರ್ ಆ್ಯಂಡ್ ಮಿಸಸ್ ರಾಜಾಹುಲಿ' ಚಿತ್ರದ ಮೂಲಕ ನಾಯಕ ನಟರಾದ ಹೊನ್ನರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.