ETV Bharat / entertainment

ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಕಥೆ '800': ಬೆಂಗಳೂರಿಗೆ ಬಂದ ಶ್ರೀಲಂಕಾ ಕ್ರಿಕೆಟಿಗ

ಶ್ರೀಲಂಕಾದ ಮಾಜಿ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಸಿನಿಮಾ '800' ಅನ್ನು ಪ್ರಚಾರ ಮಾಡಲು ಮುತ್ತಯ್ಯ ಮುರಳೀಧರನ್ ಸೇರಿದಂತೆ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು.

Muttiah Muralitharan
ಮುತ್ತಯ್ಯ ಮುರಳೀಧರನ್
author img

By ETV Bharat Karnataka Team

Published : Dec 1, 2023, 7:11 PM IST

ಮುತ್ತಯ್ಯ ಮುರಳೀಧರನ್.....

ಎಂ.ಎಸ್ ಧೋನಿ ಬಯೋಪಿಕ್ ಹಾಗೂ ಕ್ರಿಕೆಟಿಗ ಕಪಿಲ್ ದೇವ್ ನಾಯಕತ್ವದಲ್ಲಿ ವರ್ಲ್ಡ್ ಕಪ್ ಗೆದ್ದ ಬಗ್ಗೆ ಈಗಾಗಲೇ ಸಿನಿಮಾ ಮಾಡಲಾಗಿದೆ. ಇದೀಗ ಶ್ರೀಲಂಕಾದ ಮಾಜಿ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ '800' ಎಂದು ಶೀರ್ಷಿಕೆ ಇಡಲಾಗಿದೆ.

ವಿಶೇಷ ಶೈಲಿಯ ಬೌಲರ್‌ ಎನಿಸಿಕೊಂಡ ಮುತ್ತಯ್ಯ ಮುರಳೀಧರನ್ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದಿದ್ದಾರೆ. ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವು ಅವಮಾನಗಳನ್ನು ಅನುಭವಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಒಂಗೊಂಡು ನಿರ್ದೇಶಕ ಎಂ.ಎಸ್ ಶ್ರೀಪತಿ ಸಿನಿಮಾ ಮಾಡಿದ್ದಾರೆ. ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ಮಧು ಮಿತ್ತಲ್‌ ಬಹಳ ಅದ್ಭುವಾಗಿ ಅಭಿನಯಿಸಿದ್ದಾರೆ. 800 ಚಿತ್ರ ಒಟಿಟಿ ವೇದಿಕೆ ಜಿಯೋ ಸಿನಿಮಾದಲ್ಲಿ ಡಿಸೆಂಬರ್ 2 ರಂದು ಅಂದರೆ ನಾಳೆ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ನಿರ್ದೇಶಕ ಶ್ರೀಪತಿ, ನಾಯಕ ನಟ ಮಧು ಮಿತ್ತಲ್‌ ಹಾಗೂ ಮುತ್ತಯ್ಯ ಮುರಳೀಧರನ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

ನಿರ್ದೇಶಕ ಎಂ.ಎಸ್ ಶ್ರೀಪತಿ ಮಾತನಾಡಿ, ಈ ಸಿನಿಮಾ ಮಾಡಲು ಮುಖ್ಯ ಕಾರಣ 'ಮೂವಿ ಟ್ರೈನ್ ಮೋಷನ್ ಪಿಚ್ಚರ್' ನಿರ್ಮಾಣ ಸಂಸ್ಥೆ. ಅವರು ಮುರಳೀಧರನ್ ಬಳಿ ಬಯೋಗ್ರಾಫಿ ಮಾಡಲು ಅನುಮತಿ ಪಡೆದು ನೀವು ನಿರ್ದೇಶನ ಮಾಡಿ ಅಂತಾ ಕೇಳಿಕೊಂಡರು. ಹಾಗಾಗಿ ನಾನೇ ನಿರ್ದೇಶನ ಮಾಡಿದೆ. ಮುತ್ತಯ್ಯ ಮುರಳೀಧರನ್ ಮಾಡಿರೋ ಸಾಧನೆ ಬಹಳ ದೊಡ್ಡದು. ಅದೆಷ್ಟೋ ಜನರಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಎರಡು ವರ್ಷಗಳ ಕಾಲ ಮುತ್ತಯ್ಯ ಮುರಳೀಧರನ್ ಜೊತೆಗಿದ್ದು, ಅವರ ಬಗ್ಗೆ ಸಂಪೂರ್ಣ ರಿಸರ್ಚ್ ಮಾಡಿ ಈ ಸಿನಿಮಾ ಮಾಡಿದೆ.

ಇನ್ನು ಚಿತ್ರ ಈಗಾಗಲೇ ಥಿಯೇಟರ್​ನಲ್ಲಿ ಬಿಡುಗಡೆ ಆಗಿ ಒಳ್ಳೆ ರೆಸ್ಪಾನ್ಸ್ ಸ್ವೀಕರಿಸಿದೆ. ಮುರಳೀಧರನ್ ಪಾತ್ರಕ್ಕೆ ಮೊದಲು ವಿಜಯ್ ಸೇತುಪತಿ ಅಂದುಕೊಂಡಿದ್ವಿ. ಆದರೆ ಸರಿಯಾಗಿ ಕೂಡಿ ಬರಲಿಲ್ಲ. ಆಡಿಶನ್ ಮೂಲಕ ಮಧು ಮಿತ್ತಲ್ ಆಯ್ಕೆ ಆದ್ರು. ಶ್ರೀಲಂಕಾದಲ್ಲಿ 160 ದಿನ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ವಿದೇಶದಲ್ಲೂ ಶೂಟಿಂಗ್ ಮಾಡಲಾಗಿದೆ. ಶ್ರೀಲಂಕಾದಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಜಿಯೋ ಸಿನಿಮಾದಲ್ಲಿ ಕನ್ನಡ, ತಮಿಳು, ತೆಲಗು, ಹಿಂದಿ ಮಲಯಾಳಂ ಹಾಗೂ ಬೆಂಗಾಳಿ ಸೇರಿದಂತೆ ಆರು ಭಾಷೆಯಲ್ಲಿ ಪ್ರಸಾರ ಆಗಲಿದೆ ಎಂದು ಮಾಹಿತಿ ಹಂಚಿಕೊಂಡರು.

ಮುತ್ತಯ್ಯ ಮುರಳೀಧರನ್ ಪಾತ್ರ ನಿರ್ವಹಿಸಿರುವ ಮಧು ಮಿತ್ತಲ್​​ ಮಾತನಾಡಿ, ನನಗೆ ಮುತ್ತಯ್ಯ ಮುರಳೀಧರನ್ ಅವರ ಪಾತ್ರ ನಿರ್ವಹಿಸೋದು ಬಹಳ ಚಾಲೆಂಜ್ ಆಗಿತ್ತು. ಸಾಕಷ್ಟು ತಯಾರಿ ಮಾಡಿಕೊಂಡೆ. ಪ್ರತಿ ದಿನ 2-3 ಗಂಟೆ ತಯಾರಿ ಮಾಡಿಕೊಳ್ಳುತ್ತಿದ್ದೆ. ಲುಕ್ ಕೂಡ ಚಾಲೆಂಜಿಂಗ್ ಆಗಿತ್ತು. ಅದಕ್ಕಾಗಿ ಮೇಕಪ್ ಬಹಳ ಮುಖ್ಯ ಆಗಿತ್ತು. ಆದಷ್ಟು ರಿಯಾಲಿಸ್ಟಿಕ್ ಆಗಿ ಚಿತ್ರವನ್ನು ತರಲು ಪ್ರಯತ್ನಿಸಿದ್ದೇವೆ. ಚಿತ್ರದಲ್ಲಿ ಬೌಲಿಂಗ್ ಆ್ಯಕ್ಷನ್ ದೃಶ್ಯ ಚಾಲೆಂಜಿಂಗ್ ಆಗಿತ್ತು. ಫೈನಲಿ ಸಿನಿಮಾ ಕೂಡ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸ್ಯಾಮ್ ಬಹದ್ದೂರ್ vs ಅನಿಮಲ್​​: ವಿಕ್ಕಿ ಕೌಶಲ್ ಸಿನಿಮಾದ ಮೊದಲ ದಿನದ ಗಳಿಕೆ ಹೇಗಿರಲಿದೆ?

ಇನ್ನು ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಮಾತನಾಡಿ, ಸಿನಿಮಾದ ಮೊದಲ ಕಾಪಿ ನೋಡಿದಾಗ ಬಹಳ ಖುಷಿ ಆಯ್ತು. ಹಳೇ ವಿಚಾರಗಳು ನೆನಪಿಗೆ ಬಂದವು. ನಿರ್ದೇಶನ ಉತ್ತಮವಾಗಿದೆ. ಬೌಲಿಂಗ್ ಆ್ಯಕ್ಷನ್ ದೃಶ್ಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಷ್ಟು ಚೆನ್ನಾಗಿ ಸಿನಿಮಾ ಮೂಡಿ ಬರಲಿದೆ ಎಂದು ಇಮ್ಯಾಜಿನ್ ಕೂಡ ಮಾಡಿರಲಿಲ್ಲ. ಇದೀಗ ಜಿಯೋ ಸಿನಿಮಾದಲ್ಲಿ ರಿಲೀಸ್ ಆಗುತ್ತಿರುವುದು ಖುಷಿ ಕೊಟ್ಟಿದೆ. ಭಾರತದಾದ್ಯಂತ ಸಿನಿಮಾ ತಲುಪುತ್ತದೆ. ಜಿಯೋ ಒಳ್ಳೆ ಪ್ಲಾಟ್​ಫಾರ್ಮ್. ಭಾರತೀಯ ಕ್ರಿಕೆಟ್ ಪ್ರೇಮಿಗಳು ಸಿನಿಮಾವನ್ನು ಇಷ್ಟ ಪಡಲಿದ್ದಾರೆ. ಅದರಲ್ಲೂ ಯುವ ಸಮೂಹ ಈ ಸಿನಿಮಾ ನೋಡಬೇಕು. ನನ್ನ ಮಗಳು ಸಿನಿಮಾ ನೋಡುವುದಿಲ್ಲ. ಆದರೆ ಈ ಚಿತ್ರ ನೋಡಿ ತುಂಬಾನೇ ಎಮೋಷನಲ್ ಆದಳು. ಯುವ ಪೀಳಿಗೆ ಕೂಡ ಈ ಸಿನಿಮಾ ನೋಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ರಿಷಬ್​ - ರಶ್ಮಿಕಾ ಮನಸ್ತಾಪ ವದಂತಿ: ಕಾಂತಾರ ಸ್ಟಾರ್ ಹೇಳಿದ್ದಿಷ್ಟು, ಊಹಾಪೋಹಕ್ಕೆ ಫುಲ್​ ಸ್ಟಾಪ್​

ಈಗಾಗಲೇ ಈ ಚಿತ್ರವನ್ನು ಅರ್ಜುನ್ ರಣತುಂಗ, ಜಯಸೂರ್ಯ ಸೇರಿದಂತೆ ನನ್ನ ಶ್ರೀಲಂಕಾ ಕ್ರಿಕೆಟ್ ಆಟಗಾರರು ನೋಡಿ ಮೆಚ್ಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್​, ಹರ್ಭಜನ್ ಸಿಂಗ್ ಸೇರಿದಂತೆ ಕೆಲ ಗೆಳೆಯರು ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.