ETV Bharat / entertainment

ಹೊಸ ಪ್ರತಿಭೆಗಳ '2nd ಲೈಫ್' ಟ್ರೈಲರ್ ರಿಲೀಸ್​​ - 2nd Life film cast

ಮಗು ಜನಿಸಿದ ಕೆಲವೇ ದಿನಗಳಲ್ಲಿ ಹೊಕ್ಕಳು ಬಳ್ಳಿ ಬೀಳುತ್ತದೆ. ಇದನ್ನು ಶೇಖರಿಸಿಟ್ಟು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಇಂಥದ್ದೊಂದು ಕಥಾವಸ್ತು ಆಧರಿಸಿದ '2nd ಲೈಫ್' ಸಿನಿಮಾದ ಟ್ರೈಲರ್ ರಿಲೀಸ್​​ ಆಗಿದೆ.

2nd Life trailer released
2nd ಲೈಫ್ ಟ್ರೈಲರ್ ರಿಲೀಸ್​​ ಸಮಾರಂಭ
author img

By

Published : Nov 16, 2022, 5:00 PM IST

Updated : Nov 16, 2022, 5:21 PM IST

'2nd ಲೈಫ್' ಅಂತಾ ಟೈಟಲ್ ಇಟ್ಟುಕೊಂಡು ಹೊಸ ತಂಡವೊಂದು ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟಿದೆ. ಯುವ ನಟ ಆದರ್ಶ್ ಗುಂಡುರಾಜ್ ಹಾಗು ಸಿಂಧೂರಾವ್ ಅಭಿನಯಿಸಿರುವ 2nd ಲೈಫ್ ಸಿನಿಮಾ ಒಂದು ವಿಭಿನ್ನ ಸಂದೇಶದೊಂದಿಗೆ ಸಿನಿ ಪ್ರೇಮಿಗಳ ಮುಂದೆ ಬರಲು ಸಜ್ಜಾಗಿದ್ದು, ಸಿನಿಮಾದ ಟ್ರೈಲರ್​ ಬಿಡುಗಡೆ ಆಗಿದೆ.

ಹೌದು, ಮಗು ಜನಿಸಿದ ಕೆಲವೇ ದಿನಗಳಲ್ಲಿ ಹೊಕ್ಕಳು ಬಳ್ಳಿ ಬೀಳುತ್ತದೆ. ಅದನ್ನು ಕ್ಯಾನ್ಸರ್‌ ರೋಗಿಗಳ ಔಷಧಕ್ಕೆ ಬಳಸಿಕೊಳ್ಳಲಾಗುತ್ತದೆ. ಕರ್ನಾಟಕ ಒಂದರಲ್ಲೇ 70 ರಿಂದ 80 ಸಾವಿರ ಜನರು ಕ್ಯಾನ್ಸರ್​ಗೆ ತುತ್ತಾಗುತ್ತಿದ್ದಾರೆ. ಅಂತಹವರಿಗೆ ಇದು ಉಪಯೋಗವಾಗುತ್ತದೆ. ಕರುಳಬಳ್ಳಿಯನ್ನು ಶೇಖರಿಸಿಡುವ ಕಾರ್ಯ ಕೂಡ ಎಲ್ಲೆಡೆ ನಡೆಯುತ್ತಿದೆ. ಈ ಅಂಶವನ್ನೇ ಪ್ರಮುಖವಾಗಿಟ್ಟುಕೊಂಡು "2nd ಲೈಫ್" ಚಿತ್ರ ತಯಾರಾಗಿದೆ.

ಇತ್ತೀಚೆಗೆ ಈ ಚಿತ್ರದ ಟ್ರೈಲರ್​ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸೂಕ್ಷ್ಮ ವಿಷಯವನ್ನು ನಿರ್ದೇಶಕ ರಾಜ್ ದೇವಸಂದ್ರ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಜೀವನದಲ್ಲಿ ಯಾವುದೋ ದೊಡ್ಡ ಅನಾಹುತ ನಡೆದು ಅದರಿಂದ ಪಾರಾದಾಗ ಎಲ್ಲರೂ ಹೇಳುವುದೇನೆಂದರೆ ನಿನ್ನ ಹೊಸಜೀವನ ಆರಂಭವಾಗಿದೆ ಎಂದು. ಈ ರೀತಿಯ ಘಟನೆ ಚಿತ್ರದಲ್ಲಿ ನಡೆಯುವುದರಿಂದ ಚಿತ್ರಕ್ಕೆ "2nd ಲೈಫ್" ಅಂತ ಹೆಸರಿಡಲಾಗಿದೆ ಎಂದು ನಿರ್ದೇಶಕ ರಾಜ್ ದೇವಸಂದ್ರ ತಿಳಿಸಿದರು.

  • " class="align-text-top noRightClick twitterSection" data="">

ಈ ಚಿತ್ರ ನಾಯಕ ನಟ ಆದರ್ಶ್ ಗುಂಡುರಾಜ್ ಮಾತನಾಡಿ, ನಾನು ಈ ಹಿಂದೆ "ಸ್ವಾರ್ಥ ರತ್ನ" ಎಂಬ ಚಿತ್ರದಲ್ಲಿ ‌ಅಭನಯಿಸಿದ್ದೆ. ಈಗ "2 nd ಲೈಫ್" ಚಿತ್ರದಲ್ಲಿ ನಟಿಸಿದ್ದೇನೆ. ನಾನು ಮೂಲತಃ ಆಡಿಟರ್. ಮಂಜುಳಾ ರಮೇಶ್ ಅವರು ಬರೆದಿರುವ ಈ ಚಿತ್ರದ ಕಥೆ ಹಿಡಿಸಿತು. ಹಾಗಾಗಿ ಇದರಲ್ಲಿ ನಟಿಸಿದ್ದೇನೆ. ಪಿ.ಆರ್.ಕೆ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ. ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ ಎಂದರು.

ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ '2nd ಲೈಫ್' ಚಿತ್ರ ನಿರ್ಮಾಣ ಮಾಡಬೇಕಿತ್ತು: ಆದರ್ಶ್ ಗುಂಡುರಾಜ್

ಇನ್ನೂ ಆದರ್ಶ್ ಜೋಡಿಯಾಗಿ ಸಿಂಧೂರಾವ್ ಅಭಿನಯಿಸಿದ್ದು, ಈ‌ ಚಿತ್ರದಲ್ಲಿ ಅಂಧರ ಪಾತ್ರ ಮಾಡಿದ್ದಾರೆ. ಆರವ್ ರಿಶಿಕ್ ಸಂಗೀತವಿದ್ದು, ರಮೇಶ್ ಕೊಯಿರ ಅವರ ಕ್ಯಾಮರಾ ವರ್ಕ್ ಇದೆ. ಇದರೊಂದಿಗೆ ನಟ ಶಿವ ಪ್ರದೀಪ್ ಹಾಗೂ ನಟ ರುದ್ರಮುನಿ ಈ ಚಿತ್ರದ ಒಂದು ಭಾಗವಾಗಿದ್ದಾರೆ. ನಿರ್ದೇಶಕ ರಾಜ್ ದೇವಸಂದ್ರ ಸಂಭಾಷಣೆ ಬರೆಯೋದರ ಜೊತೆಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಬಹುತೇಕ ಚಿತ್ರೀರಕಣ ಮುಗಿಸಿರೋ 2 nd ಲೈಫ್ ಚಿತ್ರವನ್ನು ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ಜಂಟಿಯಾಗಿ ನಿರ್ಮಿಸಿದ್ದು, ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

Last Updated : Nov 16, 2022, 5:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.