ಬಾಲಿವುಡ್ ನಟಿ ಕಂಗನಾ ರಣಾವತ್ ಮುಖ್ಯಭೂಮಿಕೆಯ 'ತೇಜಸ್' ಸಿನಿಮಾ ಅಕ್ಟೋಬರ್ 27ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಬಿಡುಗಡೆಗೂ ಮುನ್ನ ಸಖತ್ ಸದ್ದು ಮಾಡಿದ್ದ ಸಿನಿಮಾ, ಸಾಧಾರಣ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.
ಕಂಗನಾ ರಣಾವತ್ ಮನವಿ: ತೇಜಸ್ ಸಿನಿಮಾ ತೆರೆಕಂಡ ಮೊದಲ ದಿನ 1.25 ಕೋಟಿ ರೂ. ಗಳಿಸಿದೆ. ಎರಡನೇ ದಿನ ಚಿತ್ರ 1.31 ಕೋಟಿ ರೂ. ಕಲೆಕ್ಷನ್ ಮಾಡಿದೆ. ನಾಯಕ ನಟಿ ಕಂಗನಾ ರಣಾವತ್ ವಿಡಿಯೋ ಶೇರ್ ಮಾಡಿದ್ದು, ಅದರಲ್ಲಿ ಅಭಿಮಾನಿಗಳಿಗೆ ಥಿಯೇಟರ್‌ಗಳಿಗೆ ಹೋಗಿ 'ತೇಜಸ್' ವೀಕ್ಷಿಸುವಂತೆ ಹೇಳಿದ್ದಾರೆ.
'ತೇಜಸ್' ಬಾಕ್ಸ್ ಆಫೀಸ್ ಪ್ರಯಾಣ: ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ 1.25 ಕೋಟಿ ರೂ., ಎರಡನೇ ದಿನ 1.31 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಮೂರನೇ ದಿನ 1.18 ಕೋಟಿ ರೂ. ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಈ ಮೂಲಕ ಚಿತ್ರದ ಒಟ್ಟು ಕಲೆಕ್ಷನ್ 3.74 ಕೋಟಿ ರೂ. ಆಗಲಿದೆ.
12th ಫೇಲ್ ಕಲೆಕ್ಷನ್: 'ತೇಜಸ್' ಸಿನಿಮಾ ಜೊತೆ '12th ಫೇಲ್' ಸಿನಿಮಾ ಕೂಡ ಬಿಡುಗಡೆ ಆಗಿದೆ. ವಿಕ್ರಾಂತ್ ಮುಖ್ಯಭೂಮಿಕೆಯ ಸಿನಿಮಾ ಮೊದಲ ದಿನ 1.1 ಕೋಟಿ ರೂ., ಎರಡನೇ ದಿನ 2.50 ಕೋಟಿ ರೂ. ಗಳಿಸಿದೆ. ವರದಿಗಳ ಪ್ರಕಾರ, ಚಿತ್ರ ಮೂರನೇ ದಿನ 3.50 ಕೋಟಿ ರೂ. ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಈ ಮೂಲಕ ಚಿತ್ರದ ಮೂರು ದಿನಗಳ ಒಟ್ಟು ಕಲೆಕ್ಷನ್ 7.10 ಕೋಟಿ ರೂ. ಆಗಲಿದೆ.
ಇದನ್ನೂ ಓದಿ: ಮುಂದಿನ ಸಂಕ್ರಾಂತಿಗೆ 'ಗುಂಟೂರು ಕಾರಂ' ತೆರೆಗೆ: ಸಿನಿಮಾದ ಮತ್ತೊಂದು ಹೊಸ ಅಪ್ಡೇಟ್ ಗೊತ್ತೇ?
ಅಕ್ಟೋಬರ್ 27, ಶುಕ್ರವಾರದಂದು ಬಿಡುಗಡೆಯಾದ ಸರ್ವೇಶ್ ಮೇವಾರ ನಿರ್ದೇಶನದ ತೇಜಸ್ ಸಿನಿಮಾ ಧೈರ್ಯಶಾಲಿ ವಾಯುಪಡೆ ಅಧಿಕಾರಿ ತೇಜಸ್ ಗಿಲ್ ಜೀವನ ಕುರಿತಾಗಿದೆ. ಕಂಗನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿತ್ತು. ಆದರೆ ನಿರೀಕ್ಷೆ ತಲುಪುವಲ್ಲಿ ಕೊಂಚ ಹಿನ್ನಡೆ ಕಂಡಿದೆ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಪ್ಪು ಪುಣ್ಯಸ್ಮರಣೆ: ಪತ್ನಿ, ಪುತ್ರಿ ಸೇರಿ ರಾಜ್ ಕುಟುಂಬಸ್ಥರಿಂದ ಸಮಾಧಿಗೆ ಪೂಜೆ ಸಲ್ಲಿಕೆ
2019ರಲ್ಲಿ ಬಂದ ಕಂಗನಾ ರಣಾವತ್ ಅವರ ಮಣಿಕರ್ಣಿಕಾ ಸಿನಿಮಾ ಯಶಸ್ವಿ ಆಗಿತ್ತು. ನಂತರ ಬಂದ ಜಡ್ಜ್‌ಮೆಂಟಲ್ ಹೈ ಕ್ಯಾ (2019), ಪಂಗಾ (2020), ತಲೈವಿ (2021), ಧಾಕಡ್ (2022) ಸಾಧಾರಣ ಪ್ರದರ್ಶನ ನೀಡಿದೆ. ಇತ್ತೀಚೆಗಷ್ಟೇ ತೆರೆಕಂಡ ಚಂದ್ರಮುಖಿ 2 ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಕಂಗನಾ ರಣಾವತ್ ಅವರಿಗೆ ತೇಜಸ್ ಗೆಲುವು ಬಹಳ ಮುಖ್ಯ.