ಚೆನ್ನೈ(ತಮಿಳುನಾಡು): ನಟ ಸಂಗಮದ ಪ್ರಧಾನ ಕಾರ್ಯದರ್ಶಿಯಾಗಿರುವ ನಟ ವಿಶಾಲ್ ಮನೆಯ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೆ.26ರಂದು ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಬಗ್ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಚೆನ್ನೈನ ಅಣ್ಣಾನಗರ 12ನೇ ಬೀದಿಯಲ್ಲಿ ನಟ ವಿಶಾಲ್ ಕುಟುಂಬ ಸಮೇತ ವಾಸವಾಗಿದ್ದಾರೆ. ಆದ್ರೆ ಸೆಪ್ಟಂಬರ್ 26 ರಾತ್ರಿ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿ ಪರಾರಿಯಾಗಿದ್ದಾರೆ. ಪರಿಣಾಮ ಕಿಟಕಿ ಗಾಜುಗಳು ಒಡೆದಿವೆ.
ಘಟನೆಯ ಕುರಿತು ವಿಶಾಲ್ ಅವರ ಮ್ಯಾನೇಜರ್ ಹರಿಕೃಷ್ಣನ್ ಅವರು ಸಿಸಿಟಿವಿ ಸಾಕ್ಷ್ಯಗಳೊಂದಿಗೆ ಅಣ್ಣಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಟ ವಿಶಾಲ್ ಶೂಟಿಂಗ್ಗಾಗಿ ವಿದೇಶ ಪ್ರವಾಸದಲ್ಲಿದ್ದಾರೆ ಎನ್ನಲಾಗ್ತಿದೆ. ಪೊಲೀಸರ ತನಿಖೆ ಬಳಿಕ ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲಿದೆ.
ಓದಿ: ನಟ ಪುನೀತ್ ಓದಿಸುತ್ತಿದ್ದ 1800 ಮಕ್ಕಳ ಜವಾಬ್ದಾರಿ ಹೊರುವುದಾಗಿ ಘೋಷಿಸಿದ ತಮಿಳು ನಟ ವಿಶಾಲ್