ಮುಂಬೈ: ಅಕ್ಷಯ್ಕುಮಾರ್ ಅವರ ಪತ್ನಿ, ನಟಿ ಟ್ವಿಂಕಲ್ ಖನ್ನಾ ಅವರು ಬ್ರಾಹ್ಮಣ ಪಂಡಿತರ ಹತ್ಯಾಕಾಂಡದ ಬಗ್ಗೆ ರೂಪಿಸಲಾದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ವ್ಯಂಗ್ಯವಾಡಿದ್ದಕ್ಕೆ ನೆಟ್ಟಿಗರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 'ಪಂಡಿತರ ಹತ್ಯಾಕಾಂಡದ ಕುರಿತು ಸಂವೇದನೆ ಹೊಂದಿರಬೇಕು' ಎಂಬ ಸಲಹೆಯನ್ನು ಸಹ ನೀಡಿದ್ದಾರೆ.
ಏಪ್ರಿಲ್ 3 ರಂದು ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ ಅವರು ಪ್ರಮುಖ ದಿನಪತ್ರಿಕೆಯೊಂದಕ್ಕೆ "ದಿ ಕಾಶ್ಮೀರ್ ಫೈಲ್ಸ್" ಚಿತ್ರದ ಬಗ್ಗೆ ಅಂಕಣ ಬರೆದಿದ್ದರು. ಅದರಲ್ಲಿ 'ದಿ ಕಾಶ್ಮೀರ್ ಫೈಲ್ಸ್ ಹಿಟ್ ಆಯ್ತು, ನಾನು ನೇಲ್ ಫೈಲ್ಸ್ ಸಿನಿಮಾ ಮಾಡ್ತೀನಿ' ಎಂದು ವ್ಯಂಗ್ಯವಾಡಿದ ರೀತಿಯಲ್ಲಿ ಅಂಕಣದ ತಲೆಬರಹ ನೀಡಲಾಗಿದೆ. ಇದು ನೆಟಿಜನ್ಗಳನ್ನು ಕೆರಳಿಸಿದೆ.
-
.@mrsfunnybones ma’am, you are too late. This film (#KashmirFiles) on the genocide of #KashmiriPandits has already hit the nail on the communal coffin of #IslamicTerrorism.
— Ashoke Pandit (@ashokepandit) April 4, 2022 " class="align-text-top noRightClick twitterSection" data="
Request you not be so insensitive towards the genocide of 7 lac #KashmiriPandits . pic.twitter.com/3CMQqRm63x
">.@mrsfunnybones ma’am, you are too late. This film (#KashmirFiles) on the genocide of #KashmiriPandits has already hit the nail on the communal coffin of #IslamicTerrorism.
— Ashoke Pandit (@ashokepandit) April 4, 2022
Request you not be so insensitive towards the genocide of 7 lac #KashmiriPandits . pic.twitter.com/3CMQqRm63x.@mrsfunnybones ma’am, you are too late. This film (#KashmirFiles) on the genocide of #KashmiriPandits has already hit the nail on the communal coffin of #IslamicTerrorism.
— Ashoke Pandit (@ashokepandit) April 4, 2022
Request you not be so insensitive towards the genocide of 7 lac #KashmiriPandits . pic.twitter.com/3CMQqRm63x
ಈ ಅಂಕಣದ ತಲೆಬರಹ ಮತ್ತು ವಿಷಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅಶೋಕ್ ಪಂಡಿತ್ ಎಂಬುವವರು 'ಮೇಡಂ ನೀವು ತುಂಬಾ ತಡ ಮಾಡಿದಿರಿ. ಕಾಶ್ಮೀರಿ ಪಂಡಿತರ ನರಮೇಧದ ಈ ಚಿತ್ರ ಇಸ್ಲಾಮಿಕ್ ಭಯೋತ್ಪಾದನೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದೆ. 7 ಲಕ್ಷ ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ಇಷ್ಟೊಂದು ಸಂವೇದನಾಶೀಲತೆ ಮರೆಯಬೇಡಿ' ಎಂದು ಬುದ್ಧಿ ಹೇಳಿದ್ದಾರೆ.
ಇನ್ನೊಬ್ಬರು, 'ಇವರು ಇದನ್ನು ಹೇಳಲು ದಡ್ಡತನ ಪ್ರದರ್ಶಿಸಿದ್ದಾರೆ ಮತ್ತು ಸಂವೇದನಾಶೀಲರಾಗಿ ಕಾಣುತ್ತಿಲ್ಲ. ಬಾಲಿವುಡ್ನ ಛಾಯೆ ಇವರ ಮೇಲಿದೆ. ಸಿನಿಮಾ ಬಗ್ಗೆ ಮಾತನಾಡುವ ಯಾವ ನೈತಿಕತೆ ಇವರಿಗಿಲ್ಲ ಎಂದು ಖಾರವಾಗಿ ಟೀಕಿಸಿದ್ದಾರೆ.
ನಟ, ಸೂಪರ್ಸ್ಟಾರ್ ಮತ್ತು ಟ್ವಿಂಕಲ್ ಪತಿ ಅಕ್ಷಯ್ಕುಮಾರ್ ಅವರು ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಯಶಸ್ಸಿಗೆ ಅದರ ನಿರ್ದೇಶಕರನ್ನು ಅಭಿನಂದಿಸಿದ ನಂತರ ಟ್ವಿಂಕಲ್ ಖನ್ನಾ ಅವರ ಈ ಅಂಕಣ ಬರಹ ಬರೆದಿದ್ದಾರೆ.
ಓದಿ: ಮೊಬೈಲ್ ಕಿತ್ತುಕೊಂಡ ಪ್ರಕರಣ : ಸಲ್ಮಾನ್ ಖಾನ್ ಮೇಲೆ ಸಮನ್ಸ್ ಜಾರಿ