ಮುಂಬೈ: ಪನ್ವೇಲ್ ಫಾರ್ಮ್‌ಹೌಸ್ ನೆರೆಹೊರೆಯವರೊಂದಿಗಿನ ವಾದವು ನಟ ಸಲ್ಮಾನ್ ಖಾನ್ನನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈಗ ನಡೆಯುತ್ತಿರುವ ಈ ಪ್ರಕರಣದ ವಿಚಾರಣೆಯಿಂದಾಗಿ ಸಲ್ಮಾನ್‌ಗೆ ಸಂಕಟವನ್ನು ಹೆಚ್ಚಿಸುವಂತ ಮಾಡುತ್ತಿದೆ. ಸಲ್ಮಾನ್ ವಿರುದ್ಧ ನೆರೆಯ ಕೇತನ್ ಕಕ್ಕಡ್ ಭೂಮಿಗೆ ಸಂಬಂಧಿಸಿದಂತೆ ಮಾಡಿರುವ ಆರೋಪ ನಿಜವೆಂದು ಮುಂಬೈನ ಸಿವಿಲ್ ಕೋರ್ಟ್ ಒಪ್ಪಿಕೊಂಡಿದೆ. ಅವರ ಯಾವುದೇ ಆರೋಪಗಳು ಸುಳ್ಳಲ್ಲ. ಹಾಗಾಗಿ ನೆರೆಹೊರೆಯವರ ವಿರುದ್ಧ ಸಲ್ಮಾನ್ ಮಾಡಿದ್ದ ಮಾನನಷ್ಟ ಮೊಕದ್ದಮೆಯನ್ನು ಕೋರ್ಟ್ ರದ್ದುಗೊಳಿಸಿದೆ.
ಜಮೀನಿಗೆ ಬರದಂತೆ ಕೇತನ್ನನ್ನು ಸಲ್ಮಾನ್ ಖಾನ್ ತಡೆದಿದ್ದರು. ಸ್ವಂತ ಜಮೀನಿಗೆ ತೆರಳಲು ಸಾಧ್ಯವಾಗದ ಹಿನ್ನೆಲೆ ಕೇತನ್ ನಟನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಕೇವಲ ನನಗೆ ಮಾನಹಾನಿ ಮಾಡಲು ಈ ಆರೋಪ ಮಾಡಲಾಗುತ್ತಿದೆ ಎಂದು ಕೇತನ್ ವಿರುದ್ಧ ಸಲ್ಮಾನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆದರೆ, ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಸಲ್ಮಾನ್ ವಿರುದ್ಧ ಕೇತನ್ ಮಾಡಿರುವ ಆರೋಪಗಳೆಲ್ಲವೂ ನಿಜವಾಗಿದೆ. ಅವರು ಸಲ್ಲಿಸಿದ ಸಾಕ್ಷ್ಯಗಳನ್ನು ಆಧರಿಸಲಾಗಿದೆ ಎಂದು ಕೋರ್ಟ್ ಹೇಳಿದೆ.
ಓದಿ: ನೆರವಿಗೆ ಬಂದ ಆತ್ಮರಕ್ಷಣೆ ಕಲೆ.. ತಡರಾತ್ರಿ ಮನೆಗೆ ನುಗ್ಗಿದ ದರೋಡೆಕೋರರನ್ನು ಹಿಮ್ಮೆಟ್ಟಿಸಿದ ಯುವತಿ!
ಸಲ್ಮಾನ್ ಖಾನ್ ಕೋರ್ಟ್ನಲ್ಲಿ ತಮ್ಮ ವಾದವನ್ನು ಮಂಡಿಸಲು ಮತ್ತು ಸಾಕ್ಷ್ಯಾಧರಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆ ಜಮೀನು ಸಲ್ಮಾನ್‌ಗೆ ಸೇರಿದ್ದು ಎಂಬುದನ್ನು ಸಾಬೀತುಪಡಿಸಲು ನಟನಿಗೆ ಸಾಧ್ಯವಾಗಲಿಲ್ಲ. ಕಕ್ಕಡ್ ನೀಡಿರುವ ಸಾಕ್ಷ್ಯವು ನಿಜವಾಗಿದ್ದು, ನ್ಯಾಯಾಲಯ ಅವರ ಸಾಕ್ಷ್ಯಿಗಳನ್ನು ಪರಿಗಣಿಸುತ್ತದೆ. ಸಲ್ಮಾನ್ ತಮ್ಮ ನೆರೆಯವನಾದ ಕೇತನ್ ಕಕ್ಕಡ್ ವಿರುದ್ಧ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ರದ್ದುಗೊಳಿಸಿದೆ ಎಂದು ಮುಂಬೈ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎ.ಎಚ್.ಲಡ್ಡಾದ್ ಆದೇಶಿಸಿದ್ದಾರೆ.
ಸಲ್ಮಾನ್ ತಮ್ಮ ತೋಟದ ಮನೆಯ ಸುತ್ತ ನಿರ್ಮಿಸಿರುವ ಕಬ್ಬಿಣದ ಗೇಟ್ ಕೇತನ್ ಅವರ ಜಮೀನಿನಲ್ಲಿದೆ ಎಂದು ಕೇತನ್ ಕಕ್ಕಡ್ ಅವರ ವಕೀಲರು ವಾದ ಮಂಡಿಸಿದ್ದರು. ಹಾಗಾಗಿ ಕೇತನ್ ತನ್ನ ಭೂಮಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಆ ಭೂಮಿಯಲ್ಲಿ ದೇವಾಲಯವಿದೆ. ಆದರೆ, ಆ ಭೂಮಿಗೆ ಬರದಂತೆ ಸಲ್ಮಾನ್ ನಿಷೇಧ ಹೇರಿದ್ದರಿಂದ ಸರಳವಾಗಿ ದೇವದರ್ಶನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮತ್ತು ತಮ್ಮ ಜಮೀನಿಗೆ ಬರದಂತೆ ತಾಕೀತು ಮಾಡಲಾಗಿತ್ತು. ಹೀಗಾಗಿ ನಟ ಸಲ್ಮಾನ್ ವಿರುದ್ಧ ಕೇತನ್ ಕೋರ್ಟ್ ಮೊರೆ ಹೋಗಿದ್ದರು.