ETV Bharat / entertainment

ಪ್ರಿಯಾಂಕಾ ಚೋಪ್ರಾ ಸಹನಟಿ ಆ್ಯನ್ನೆ ಹೆಚೆ ಕಾರು ಅಪಘಾತ: ನಟಿ ಸ್ಥಿತಿ ಗಂಭೀರ - ಆ್ಯನ್ನೆ ಹೆಚೆ ಕಾರು ಅಪಘಾತ

ನಟಿ ಆ್ಯನ್ನೆ ಹೆಚೆ ಮೊದಲು ಲಾಸ್ ಏಂಜಲೀಸ್‌ನ ಅಪಾರ್ಟ್‌ಮೆಂಟ್ ಸಂಕೀರ್ಣದ ಗ್ಯಾರೇಜ್​ಗೆ ಡಿಕ್ಕಿ ಹೊಡೆದು ಅಲ್ಲಿಂದ ತಪ್ಪಿಸಿಕೊಂಡು ಬಂದು ಕ್ಯಾಲಿಫೋರ್ನಿಯಾದ ಮಾರ್ ವಿಸ್ಟಾ ಮನೆಗೆ ಗುದ್ದಿದ್ದಾರೆ.

Anne Heche
ನಟಿ ಆ್ಯನ್ನೆ ಹೇಚೆ
author img

By

Published : Aug 6, 2022, 3:36 PM IST

ವಾಷಿಂಗ್ಟನ್ (ಯುಎಸ್): ಕ್ವಾಂಟಿಕೋ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಸಹನಟಿಯಾಗಿದ್ದ ಆ್ಯನ್ನೆ ಹೆಚೆ(53) ಚಲಾಯಿಸುತ್ತಿದ್ದ ಕಾರಿಗೆ ಅಪಘಾತವಾಗಿದ್ದು, ಆ ಸಂದರ್ಭ ಬೆಂಕಿ ಹೊತ್ತಿಕೊಂಡ ಕಾರಣ ನಟಿ ದೇಹದ ಮೇಲೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆ್ಯನ್ನೆ ಹೆಚೆ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಆ್ಯನ್ನೆ ಹೆಚೆ ಶುಕ್ರವಾರ ನೀಲಿ ಬಣ್ಣದ ಮಿನಿ ಕೂಪರ್​ ಕಾರನ್ನು ಓಡಿಸುತ್ತಿದ್ದು, ಮೊದಲು ಲಾಸ್ ಏಂಜಲೀಸ್‌ನ ಅಪಾರ್ಟ್‌ಮೆಂಟ್ ಸಂಕೀರ್ಣದ ಗ್ಯಾರೇಜ್​ಗೂ ಡಿಕ್ಕಿ ಹೊಡೆದಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಹೋಗುವ ಮುನ್ನ ಅಲ್ಲಿದ್ದ ಜನ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದರು. ಆದರೆ ಅವರು ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಮುಂದೆ ಕ್ಯಾಲಿಫೋರ್ನಿಯಾದ ಮಾರ್ ವಿಸ್ಟಾ ಮನೆಗೆ ಡಿಕ್ಕಿ ಹೊಡೆದಿದ್ದಾರೆ. ಆಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಆದಾಗಲೇ ದೇಹದ ತುಂಬಾ ಸುಟ್ಟ ಗಾಯಗಳಾಗಿದ್ದ ನಟಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆ ಆ್ಯನ್ನೆ ಅವರಿಗೆ ಪ್ರಜ್ಞೆ ಇದ್ದು ಉಸಿರಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಪಘಾತದ ವೇಳೆ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆ್ಯನ್ನೆ ಹೆಚೆ ಸೋಪ್ ಒಪೆರಾ ಅನದರ್ ವರ್ಲ್ಡ್‌ನಲ್ಲಿ 1987 ರಿಂದ 1991 ರವರೆಗೆ ಅವಳಿಗಳಾದ ವಿಕ್ಕಿ ಹಡ್ಸನ್ ಮತ್ತು ಮಾರ್ಲಿ ಲವ್‌ನ ದ್ವಿಪಾತ್ರವನ್ನು ನಿರ್ವಹಿಸಿದ್ದ ಅವರ ಅಭಿನಯಕ್ಕಾಗಿ ಡೇಟೈಮ್ ಎಮ್ಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಆ್ಯನ್ನೆ ಹೆಚೆ ಇತ್ತೀಚೆಗೆ ದಿ ಬ್ರೇವ್, ಕ್ವಾಂಟಿಕೋ ಮತ್ತು ಶಿಕಾಗೊ ಪಿ.ಡಿ. ಟೆಲಿವಿಷನ್​ ಸಿರೀಸ್​ನಲ್ಲಿ ಅಭಿನಯಿಸಿದ್ದರು. ಪ್ರಿಯಾಂಕಾ ಚೋಪ್ರಾ ಅಭಿನಯದ ಕ್ವಾಂಟಿಕೋದಲ್ಲಿ ಆ್ಯನ್ನೆ, ಸುಸಾನ್ ಲ್ಯಾಂಗ್ಡನ್ ಪಾತ್ರವನ್ನು ನಿರ್ವಹಿಸಿದ್ದರು.

ಇದನ್ನೂ ಓದಿ : BiggBoss Season-9 ಬಿಗ್​ಬಾಸ್ ಮನೆಗೆ ಕಿಚ್ಚ ಸುದೀಪ್ ಎಂಟ್ರಿ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.