ETV Bharat / entertainment

ಶ್ರೀ ದೇವಿಯ 59 ನೇ ಜನ್ಮದಿನ.. ತಾಯಿ ನೆನೆದು ಹೃದಯಸ್ಪರ್ಶಿ ಶ್ರದ್ದಾಂಜಲಿ ಅರ್ಪಿಸಿದ ಪುತ್ರಿಯರು - ವರುಣ್ ಧವನ್

ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ತಮ್ಮ ತಾಯಿ ಶ್ರೀದೇವಿಯ 59 ನೇ ಜನ್ಮದಿನದಂದು ಹೃದಯ ಸ್ಪರ್ಶಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಶ್ರೀದೇವಿ ಫೆಬ್ರವರಿ 24, 2018 ರಂದು ದುಬೈನಲ್ಲಿ ನಡೆದ ಕುಟುಂಬ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದ ವೇಳೆ ಮೃತಪಟ್ಟಿದ್ದರು.

On the birth anniversary of Sridevi  janhvi kapoor on Sridevi birth anniversary  khushi kapoor on Sridevi birth anniversary  Janhvi and Khushi pay touching tributes  Bollywood cinema news  ತಾಯಿ ನೆನೆದು ಹೃದಯ ಸ್ಪರ್ಶಿ ಶ್ರದ್ದಾಂಜಲಿ  ಶ್ರೀದೇವಿಯ 59 ನೇ ಜನ್ಮದಿನ  ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್  ನಟಿ ಜಾನ್ವಿ ಕಪೂರ್ ಅವರ ಚೊಚ್ಚಲ ಚಿತ್ರ  ಬಾಲಿವುಡ್​ ಸಿನಿಮಾ ಸುದ್ದಿ
ಶ್ರೀದೇವಿಯ 59 ನೇ ಜನ್ಮದಿನ
author img

By

Published : Aug 13, 2022, 2:21 PM IST

ಇಂದು ಬಾಲಿವುಡ್‌ನ ಖ್ಯಾತ ನಟಿ ಶ್ರೀದೇವಿ ಅವರ ಜನ್ಮದಿನ. 2018 ರಲ್ಲಿ ನಟಿ ಜಾನ್ವಿ ಕಪೂರ್ ಅವರ ಚೊಚ್ಚಲ ಚಿತ್ರ ಬಿಡುಗಡೆಯಾಗುವ ಕೆಲವು ತಿಂಗಳ ಮೊದಲು ಜಗತ್ತಿಗೆ ವಿದಾಯ ಹೇಳಿ ಇಹಲೋಕ ತ್ಯಜಿಸಿದ್ದರು. ಇಂದು ಬಾಲಿವುಡ್ ನಟರ ಜೊತೆಗೆ ಅಭಿಮಾನಿಗಳು ಕೂಡ ನಟಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಜಾನ್ವಿ ಕಪೂರ್ ಕೂಡವಿದ್ದು, ತನ್ನ ದಿವಂಗತ ತಾಯಿಯೊಂದಿಗಿನ ತನ್ನ ಥ್ರೋಬ್ಯಾಕ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಜಾನ್ವಿ ಹೃದಯ ಸ್ಪರ್ಶಿ ಸಂದೇಶವನ್ನೂ ಸಹ ಬರೆದಿದ್ದಾರೆ.

On the birth anniversary of Sridevi  janhvi kapoor on Sridevi birth anniversary  khushi kapoor on Sridevi birth anniversary  Janhvi and Khushi pay touching tributes  Bollywood cinema news  ತಾಯಿ ನೆನೆದು ಹೃದಯ ಸ್ಪರ್ಶಿ ಶ್ರದ್ದಾಂಜಲಿ  ಶ್ರೀದೇವಿಯ 59 ನೇ ಜನ್ಮದಿನ  ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್  ನಟಿ ಜಾನ್ವಿ ಕಪೂರ್ ಅವರ ಚೊಚ್ಚಲ ಚಿತ್ರ  ಬಾಲಿವುಡ್​ ಸಿನಿಮಾ ಸುದ್ದಿ
ಶ್ರೀದೇವಿಯ 59 ನೇ ಜನ್ಮದಿನ

ಜಾನ್ವಿ ಕಪೂರ್ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಶ್ರೀದೇವಿ ಜೊತೆಗಿನ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶ್ರೀದೇವಿ ಅವರು ಜಾನ್ವಿ ಕಪೂರ್ ಅವರನ್ನು ತಬ್ಬಿಕೊಳ್ಳುತ್ತಿದ್ದಾರೆ. ಶ್ರೀದೇವಿ ಪಿಂಕ್ ಕಲರ್ ಸೀರೆ ಉಟ್ಟಿದ್ದರೆ, ಪುಟ್ಟ ಜಾನ್ವಿ ನೀಲಿ ಬಣ್ಣದ ಡ್ರೆಸ್ ತೊಟ್ಟಿದ್ದಾರೆ. ಇದು ಅವರಿಬ್ಬರ ಮುದ್ದಾದ ಚಿತ್ರ. ಇದನ್ನು ಹಂಚಿಕೊಂಡ ಜಾನ್ವಿ, 'ಹುಟ್ಟುಹಬ್ಬದ ಶುಭಾಶಯಗಳು ಮಮ್ಮಾ, ನಾನು ನಿನ್ನನ್ನು ಪ್ರತಿದಿನ ಹೆಚ್ಚು ಹೆಚ್ಚು ಕಳೆದುಕೊಳ್ಳುತ್ತೇನೆ. ನಾನು ನಿನ್ನನ್ನು ಯಾವಾಗಲೂ ಪ್ರೀತಿಸುವೆನು’ ಎಂದು ಹೃದಯ ಸ್ಪರ್ಶಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

ಜಾನ್ವಿ ಕಪೂರ್ ಅವರ ಪೋಸ್ಟ್‌ಗೆ ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಸಹ ಕಾಮೆಂಟ್ ಮಾಡುತ್ತಿದ್ದಾರೆ. ಮನೀಶ್ ಮಲ್ಹೋತ್ರಾ, ವರುಣ್ ಧವನ್, ಸನ್ನಿ ಕೌಶಲ್ ಮತ್ತು ಜೋಯಾ ಅಖ್ತರ್ ಹೃದಯದ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ.

ಇದೇ ವೇಳೆ ಒಬ್ಬ ಅಭಿಮಾನಿ, ‘ಪ್ರತಿ ಕ್ಷಣವೂ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಬರೆದರೆ, ಮತ್ತೊಬ್ಬರು ‘ಅವರು ಸದಾ ನಿಮ್ಮೊಂದಿಗಿರುತ್ತಾರೆ ಮತ್ತು ಅವರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ’ ಎಂದು ಬರೆದುಕೊಂಡಿದ್ದಾರೆ. ಇದಲ್ಲದೇ, ಶ್ರೀದೇವಿ ಅವರ ಕಿರಿಯ ಮಗಳು ಖುಷಿ ಕಪೂರ್ ಕೂಡ ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಈ ಕಪ್ಪು ಬಿಳುಪಿನ ಚಿತ್ರದಲ್ಲಿ ಶ್ರೀದೇವಿ ಖುಷಿಗೆ ಮುತ್ತಿಕ್ಕುತ್ತಿರುವಂತೆ ಕಾಣಿಸುತ್ತಿದೆ.

ಬಾಲ ಕಲಾವಿದೆಯಾಗಿ ದಕ್ಷಿಣ ಇಂಡಸ್ಟ್ರಿಯೊಂದಿಗೆ ಶ್ರೀದೇವಿ ಅವರ ವೃತ್ತಿಜೀವನ ಪ್ರಾರಂಭವಾಯಿತು. ಇದರ ನಂತರ, ಅವರು 'ಸೋಲ್ವ ಸಾವನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇದರಲ್ಲಿ ಅವರು ನಟ ಜಿತೇಂದ್ರ ಅವರೊಂದಿಗೆ ಕಾಣಿಸಿಕೊಂಡರು. ಅವರು ತಮ್ಮ ವೃತ್ತಿಜೀವನದಲ್ಲಿ 'ನಾಗಿನಾ', 'ಚಾಂದಿನಿ', 'ಲಾಡ್ಲಾ', 'ಮಿಸ್ಟರ್ ಇಂಡಿಯಾ', 'ಖುದಾ ಗವಾ', 'ಮಾಮ್' ಮತ್ತು 'ಇಂಗ್ಲಿಷ್ ವಿಂಗ್ಲಿಷ್' ಸೇರಿದಂತೆ ಹಲವು ಉತ್ತಮ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಜಾನ್ವಿ ಕಪೂರ್ 2018 ರಲ್ಲಿ 'ಧಡಕ್' ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು ಮತ್ತು ಇತ್ತೀಚೆಗೆ ಅವರ ಚಿತ್ರ 'ಗುಡ್‌ಲಕ್ ಜೆರ್ರಿ' ಬಿಡುಗಡೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.