ETV Bharat / entertainment

ವಿಜಯ್​ ದೇವರಕೊಂಡ ಜನ್ಮದಿನಕ್ಕೆ ಭರ್ಜರಿ ಗಿಫ್ಟ್​ ಕೊಟ್ಟ ಲೈಗರ್​ ಚಿತ್ರತಂಡ - ವಿಜಯ್​ ದೇವರಕೊಂಡ ಜನ್ಮದಿನ ಸುದ್ದಿ

ಲೈಗರ್ ತಯಾರಕರು ವಿಜಯ್ ದೇವರಕೊಂಡ ಅವರ ಅಭಿಮಾನಿಗಳಿಗೆ ಚಿತ್ರದ ಎಲೆಕ್ಟ್ರಿಫೈಯಿಂಗ್ ಥೀಮ್ ಸಾಂಗ್‌ ಗಿಫ್ಟ್​ ನೀಡಿದ್ದಾರೆ. ಇಂದು ವಿಜಯ್ ಹುಟ್ಟುಹಬ್ಬದ ಅಂಗವಾಗಿ ಹಾಡನ್ನು ಬಿಡುಗಡೆ ಮಾಡಿದ್ದಾರೆ.

Liger movie song release,  Vijay Deverakonda Birthday celebration, electrifying theme song release, Vijay Deverakonda Birthday news, ಲೈಗರ್​ ಚಿತ್ರದ ಹಾಡು ಬಿಡುಗಡೆ, ವಿಜಯ್​ ದೇವರಕೊಂಡಗೆ ಜನ್ಮದಿನದ ಸಂಭ್ರಮ, ವಿಜಯ್​ ದೇವರಕೊಂಡ ಜನ್ಮದಿನ ಸುದ್ದಿ, ಎಲೆಕ್ಟ್ರಿಫೈಯಿಂಗ್ ಥೀಮ್ ಸಾಂಗ್​ ಬಿಡುಗಡೆ,
ವಿಜಯ್​
author img

By

Published : May 9, 2022, 8:23 PM IST

ಹೈದರಾಬಾದ್ (ತೆಲಂಗಾಣ): ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿರುವ ಟಾಲಿವುಡ್​ನ ಖ್ಯಾತ ನಟ ವಿಜಯ್ ದೇವರಕೊಂಡ ಇಂದು ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಜಯ್​ ಜನ್ಮದಿನಕ್ಕೆ ಲೈಗರ್​ ಚಿತ್ರ ತಂಡ ಸಿನಿಮಾನದ ಎಲೆಕ್ಟ್ರಿಫೈಯಿಂಗ್ ಥೀಮ್ ಸಾಂಗ್​ನ್ನು ಬಿಡುಗಡೆ ಮಾಡಿದೆ.

  • " class="align-text-top noRightClick twitterSection" data="">

ನಟ ವಿಜಯ್ ದೇವರಕೊಂಡ 2011ರಂದು ‘ನುವ್ವಿಲಾ’ ಎಂಬ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ‘ಪೆಳ್ಳಿ ಚೂಪುಲು’ ಸಿನಿಮಾದಿಂದ ಜನರಿಗೆ ಚಿರಪರಿಚಿತರಾದರು. 2017ರಂದು ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಅಭಿನಯಿಸಿದ ನಂತರ ವಿಜಯ್ ದೇವರಕೊಂಡ ಸಾಕಷ್ಟು ಜನಪ್ರಿಯತೆ ಪಡೆದರು.

ವಿಜಯ್ ದೇವರಕೊಂಡ 1989 ಮೇ 9ರಂದು ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ‘ಲೈಗರ್’ ಚಿತ್ರದ ಎಲೆಕ್ಟ್ರಿಫೈಯಿಂಗ್ ಥೀಮ್ ಸಾಂಗ್​ ಬಿಡುಗಡೆಯಾಗಿದೆ. ಮುಂಬೈ ಬೀದಿಯ ಸ್ಲಮ್​ಡಾಗ್​ವೊಬ್ಬ ಎಂಎಂಎ (ಮಿಶ್ರ ಮಾರ್ಷಲ್ ಆರ್ಟ್ಸ್) ಕ್ರೀಡೆಯಲ್ಲಿ ಚಾಂಪಿಯನ್ ಆಗುವ ಕನಸನ್ನು ಹೊತ್ತಿರುತ್ತಾನೆ. ಚಿತ್ರದಲ್ಲಿನ ಅವನ ಪಾತ್ರದ ಉತ್ಸಾಹವನ್ನು ಈ ಹಾಡಿನ ಮೂಲಕ ತೋರಿಸಲಾಗಿದೆ.

ಓದಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿಯೇ ಅತಿದೊಡ್ಡ OTT ಒಪ್ಪಂದ ಮಾಡಿಕೊಳ್ತಾ ಲೈಗರ್ ?

ಧರ್ಮ ಪ್ರೊಡಕ್ಷನ್ಸ್‌ ತಮ್ಮ ಇನ್‌ಸ್ಟಾಗ್ರಾಮ್​​ನಲ್ಲಿ ಲೈಗರ್​ ಚಿತ್ರದ ಹಾಡಿನ ಪೋಸ್ಟರ್ ಮತ್ತು ಲಿಂಕ್ ಅನ್ನು ಹರಿಯಬಿಡಲಾಗಿದೆ. ವಿಜಯ ದೇವರಕೊಂಡ ಜನ್ಮದಿನಕ್ಕೆ ಹಾರೈಸುತ್ತಾ, ಇಂದು ನಮ್ಮ #LIGER ಜನಿಸಿದ ದಿನ. ಅವನು ಬೇಟೆಗಾರನಾಗಲು ಮತ್ತು ಕಾಡಿನ ರಾಜನಾಗಲು ಜನಿಸಿದ್ದಾನೆ. #LIGERHUNT ಮೂಲಕ ನಾವು ನಮ್ಮ ಪ್ಯಾನ್ ಇಂಡಿಯನ್ ಹಂಟ್ ಅನ್ನು ಪ್ರಾರಂಭಿಸುತ್ತೇವೆ ಎಂದಿದ್ದಾರೆ.

ಲೈಗರ್​ ಎಲೆಕ್ಟ್ರಿಫೈಯಿಂಗ್ ಥೀಮ್ ಟ್ರ್ಯಾಕ್ ಅನ್ನು ವಿಕ್ರಮ್ ಮಾಂಟ್ರೋಸ್ ಸಂಯೋಜಿಸಿದ್ದಾರೆ. ಫರ್ಹಾದ್ ಭಿವಂಡಿವಾಲಾ ಹಾಡಿದ್ದಾರೆ ಮತ್ತು ಶೇಖರ್ ಅಸ್ತಿತ್ವಾ ಬರೆದಿದ್ದಾರೆ. ಭಾರತದಲ್ಲಿನ ಅತಿ ದೊಡ್ಡ ಸಾಹಸಮಯ ಸಿನಿಮಾಗಳಲ್ಲಿ ಒಂದೆಂದು ಹೇಳಲಾದ ಲೈಗರ್​ ಚಿತ್ರದಲ್ಲಿ ನಟಿ ಅನನ್ಯ ಪಾಂಡೆ ಮತ್ತು ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಅಭಿನಯಿಸಿದ್ದಾರೆ. ಈ ಕ್ರೀಡಾ ಚಿತ್ರಕ್ಕೆ ಕರಣ್ ಜೋಹರ್, ಚಾರ್ಮಿ ಕೌರ್ ಮತ್ತು ಪುರಿ ಜಗನ್ನಾಥ್ ಹಣ ಹೂಡಿದ್ದಾರೆ. ಈ ಚಿತ್ರವು ಆಗಸ್ಟ್ 25, 2022 ರಂದು ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.