ETV Bharat / entertainment

NTR 31 Movie Update... ಶೂಟಿಂಗ್​ ಆರಂಭ ಯಾವಾಗ ಎಂಬುದರ ಬಗ್ಗೆ ಹೇಳಿದ ಡೈರೆಕ್ಟರ್​ ಪ್ರಶಾಂತ್​ ನೀಲ್​

author img

By

Published : Aug 16, 2022, 8:07 AM IST

ಆರ್‌ಆರ್‌ಆರ್ ಚಿತ್ರದ ಬ್ಲಾಕ್‌ಬಸ್ಟರ್ ನಂತರ, ಜೂನಿಯರ್ ಎನ್‌ಟಿಆರ್ ಅವರ ಅಭಿಮಾನಿಗಳು ಅವರ ಹೊಸ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆ ನಿರ್ದೇಶಕ ಪ್ರಶಾಂತ್ ನೀಲ್ ಎನ್‌ಟಿಆರ್ 31 ಚಿತ್ರದ ಶೂಟಿಂಗ್ ಕುರಿತು ಅಪ್​​ಡೇಟ್​ ನೀಡಿದ್ದಾರೆ.

NTR 31 Movie Update, KGF director Prashanth Neel, NTR new movie Shooting date, salaar movie update, salaar movie date, ಆರ್‌ಆರ್‌ಆರ್ ಚಿತ್ರದ ಬ್ಲಾಕ್‌ಬಸ್ಟರ್, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್, ನೀಲ್ ಎನ್‌ಟಿಆರ್ 31 ಚಿತ್ರದ ಶೂಟಿಂಗ್ ಕುರಿತು ಅಪ್‌ಡೇಟ್, ಎನ್​ಟಿಆರ್​ ಅಭಿಮಾನಿಗಳಲ್ಲಿ ಸಂತಸ, ಪ್ರಭಾಸ್ ನಾಯಕರಾಗಿ ಸಲಾರ್ ಸಿನಿಮಾ,
ಶೂಟಿಂಗ್​ ಆರಂಭ ಯಾವಾಗ

ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರು ಎನ್‌ಟಿಆರ್ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿರುವುದು ಗೊತ್ತೇ ಇದೆ. #NTR31 ಹೆಸರಿನ (ವರ್ಕಿಂಗ್ ಟೈಟಲ್) ಘೋಷಣೆಯಾಗಿದ್ದು, ಎನ್‌ಟಿಆರ್ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಕ್ರೇಜಿ ಪ್ರಾಜೆಕ್ಟ್‌ನ ಅಪ್​ಡೇಟ್​ಗಳಿಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಪ್ರಶಾಂತ್ ನೀಲ್ ಈ ಚಿತ್ರದ ಬಗ್ಗೆ ಅಪ್​ಡೇಟ್​ವೊಂದನ್ನು ಹಂಚಿಕೊಂಡಿದ್ದು, ಎನ್​ಟಿಆರ್​ ಅಭಿಮಾನಿಗಳಲ್ಲಿ ಸಂತಸ ಚಿಗುರೊಡೆದಿದೆ.

ಚಿತ್ರೀಕರಣ ಯಾವಾಗ ಶುರು?: ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮಾಧ್ಯಮಗಳಿಂದ ಪ್ರಶ್ನೆ ಎದುರಾಗಲಿದೆ ಎಂದು ಅವರು ಹೇಳಿದರು. ಅವರು ಸೋಮವಾರ ತಮ್ಮ ಹುಟ್ಟೂರಾದ ನೀಲಕಂಠಪುರಂ (ಅನಂತಪುರಂ ಜಿಲ್ಲೆ) ದೇವಸ್ಥಾನಕ್ಕೆ ಭೇಟಿ ನೀಡಿದರು. ದರ್ಶನದ ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಎನ್​ಟಿಆರ್ ಜತೆ ನೀವು ಮಾಡಲಿರುವ ಚಿತ್ರದ ಬಗ್ಗೆ ಹೇಳಿ ಎಂದು ವರದಿಗಾರರೊಬ್ಬರು ಕೇಳಿದಾಗ ಪ್ರಶಾಂತ್ ನಗುತ್ತಾ ‘ಕಥೆ ಹೇಳಬೇಕಾ?’ ಎಂದರು. ನಂತರ ಶೂಟಿಂಗ್ ಅಪ್ ಡೇಟ್ ನೀಡಿದರು.

ತಮ್ಮ ಎರಡನೇ ಚಿತ್ರ 'ಕೆಜೆಎಫ್ 1' ಮೂಲಕ ಪ್ಯಾನ್-ಇಂಡಿಯಾ ಮನ್ನಣೆ ಗಳಿಸಿದ ಪ್ರಶಾಂತ್ ನೀಲ್, ಇತ್ತೀಚೆಗೆ 'ಕೆಜೆಎಫ್ 2' ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು. ಸದ್ಯ ಅವರು ಪ್ರಭಾಸ್ ನಾಯಕರಾಗಿ ಸಲಾರ್ ಸಿನಿಮಾವನ್ನು ಮಾಡುತ್ತಿದ್ದಾರೆ. ಶ್ರುತಿ ಹಾಸನ್ ಅಭಿನಯದ ಚಿತ್ರವು ಸೆಪ್ಟೆಂಬರ್ 28, 2023 ರಂದು ಬಿಡುಗಡೆಯಾಗಲಿದೆ. 'RRR' ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಪಡೆದಿರುವ ಎನ್​ಟಿಆರ್ ಸದ್ಯ ಕೊರಟಾಲ ಶಿವ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದ ವರ್ಕಿಂಗ್ ಟೈಟಲ್​ #NTR30 ಎಂದು ಇಡಲಾಗಿದೆ.

ಓದಿ: ಹೊಂಬಾಳೆ ಫಿಲಂಸ್​ ಬಹುನಿರೀಕ್ಷಿತ ಸಲಾರ್ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.