ETV Bharat / entertainment

'I avoid money, but money likes me.. I can't avoid' ಎನ್ನುತ್ತಿದೆ ಕೆಜಿಎಫ್​2... ಬಾಲಿವುಡ್​ನಲ್ಲಿ 300, ವಿಶ್ವದಾದ್ಯಂತ ಸಾವಿರ ಕೋಟಿ ದಾಟಿದ ಯಶ್​​ ಚಿತ್ರ! - ರಾಕಿಂಗ್​ ಸ್ಟಾರ್​ ಯಶ್​ ಸುದ್ದಿ

ಕೆಜೆಎಫ್​2 ಚಿತ್ರದಲ್ಲಿ 'Violence.. violence.. violence..' ಎಂಬ ಡೈಲಾಗ್​ ಫೇಮಸ್​ ಆಗಿದೆ. ಅದ್ರಂತೆ ಈಗ ಚಿತ್ರ 'Money.. money.. money.. I don't like it.. I avoid.. but, money likes me.. I can't avoid' ಎನ್ನುತ್ತಿದೆ ಕೆಜಿಎಫ್​ 2 ಚಿತ್ರ. ಈಗ ಹಿಂದಿ ಆವೃತ್ತಿ ಕೆಜಿಎಫ್ ಚಾಪ್ಟರ್ 2 ಚಿತ್ರ ಮತ್ತೊಂದು ದಾಖಲೆ ಬರೆದಿದೆ. ಹಿಂದಿ ಬಾಕ್ಸ್​ ಆಫೀಸ್​ನಲ್ಲಿ ದೂಳೆಬ್ಬಿಸುತ್ತಿರುವ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​ 2 ಭಾನುವಾರ ₹ 300 ಕೋಟಿ ಕ್ಲಬ್ ದಾಟಿದೆ. ಈ ಮೂಲಕ ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳ ಪಟ್ಟಿಗೆ ಸೇರಿದೆ.

kgf chapter 2 news  kgf chapter box office collection  Rocking star Yash  kgf director Prashanth Neel  ಬಾಲಿವುಡ್​ನಲ್ಲಿ 300 ಮತ್ತು ವಿಶ್ವದಾದ್ಯಂತ ಸಾವಿರ ಕೋಟಿ ದಾಟಿದ ಕೆಜೆಎಫ್​2​​ ಚಿತ್ರ  ಬಾಕ್ಸ್​ ಆಫೀಸ್​ನಲ್ಲಿ ಕೆಜೆಎಫ್​ ಚಿತ್ರದ ಗಳಿಕೆ  ರಾಕಿಂಗ್​ ಸ್ಟಾರ್​ ಯಶ್​ ಸುದ್ದಿ  ಕೆಜಿಎಫ್​ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್​
ವಿಶ್ವದಾದ್ಯಂತ ಸಾವಿರ ಕೋಟಿ ದಾಟಿದ ಯಶ್​​ ಚಿತ್ರ
author img

By

Published : Apr 26, 2022, 7:50 AM IST

ಮುಂಬೈ: ಬಿಡುಗಡೆಯಾದ 11ನೇ ದಿನಕ್ಕೆ ಕೆಜಿಎಫ್ ಚಾಪ್ಟರ್​ 2 ಹಿಂದಿ ಚಲನಚಿತ್ರ ಪ್ರೇಕ್ಷಕರನ್ನು ಮೋಡಿ ಮಾಡುತ್ತಲೇ ಬಾಲಿವುಡ್​​ನಲ್ಲಿ ದಾಖಲೆ ಬರೆದಿದೆ. ಪ್ರಾದೇಶಿಕ ಭಾಷೆಯ ಚಿತ್ರವಾಗಿರುವುದರಿಂದ ಹಿಂದಿ ಮಾರುಕಟ್ಟೆಗಳಲ್ಲಿ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಹಿಂದಿ ಆವೃತಿಯಲ್ಲಿ 300 ಕೋಟಿ ಕ್ಲಬ್​ಗೆ ಸೇರಿದೆ.

ಚಲನಚಿತ್ರ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿ, ಭಾರತದ್ಯಾದಂತ ಬಿಡುಗಡೆಯಾದ ಹಿಂದಿ ಆವೃತಿಯ ಕೆಜಿಎಫ್​ ಚಾಪ್ಟರ್​ 2 ಚಿತ್ರ ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ 300 ಕೋಟಿಗೂ ಅಧಿಕ ಗಳಿಕೆ ಮಾಡಿ ಮುನ್ನಡೆಯುತ್ತಿದೆ. ಬಾಹುಬಲಿ 2 ನಂತರ ₹300 ಕೋಟಿಗಳ ನೆಟ್ ಕ್ಲಬ್‌ಗೆ ಸೇರಿರುವ 2ನೇ ದಕ್ಷಿಣ ಭಾಷೆಯ ಹಿಂದಿ ಸಿನಿಮಾ ಇದಾಗಿದೆ. ಈ ಸಾಧನೆ ಮಾಡಿದ 10ನೇ ಹಿಂದಿ ಸಿನಿಮಾ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಆಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ ₹300 ಕೋಟಿ ಕ್ಲಬ್​ ದಾಟಿರುವ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. 2014ರಲ್ಲಿ ಬಿಡುಗಡೆಯಾದ ಅಮಿರ್​ ಖಾನ್​ ಅಭಿನಯದ ಪಿಕೆ ಚಿತ್ರ ಮತ್ತು 2016ರಲ್ಲಿ ಬಿಡುಗಡೆಯಾದ ದಂಗಲ್ ಚಿತ್ರ 300 ಕೋಟಿ ಕ್ಲಬ್​ ದಾಟಿದೆ. 2015ರಲ್ಲಿ ಬಿಡುಗಡೆಯಾದ ಸಲ್ಮಾನ್​ ಖಾನ್​ ಅಭಿನಯದ ಬಜರಂಗಿ ಭಾಯಿಜಾನ್, 2016ರಲ್ಲಿ ಬಿಡುಗಡೆಯಾದ ಸುಲ್ತಾನ್ ಮತ್ತು 2017ರಲ್ಲಿ ಬಿಡುಗಡೆಯಾದ ಟೈಗರ್ ಜಿಂದಾ ಹೈ ಚಿತ್ರ 300 ಕೋಟಿ ಕ್ಲಬ್​ ದಾಟಿದೆ.

ಓದಿ: ನೋಡಿ: ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ಕೆಜಿಎಫ್​​ 2; ಭಾವನಾತ್ಮಕ ವಿಡಿಯೋ ಹರಿಬಿಟ್ಟ ಯಶ್

2018ರಲ್ಲಿ ಬಿಡುಗಡೆಯಾದ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್​ ಮತ್ತು ರಣಬೀರ್​ ಕಪೂರ್​ ಅಭಿನಯದ ಸಂಜು ಮತ್ತು 2019ರಲ್ಲಿ ಬಿಡುಗಡೆಯಾದ ಹೃತಿಕ್​ ರೋಷನ್​ ಮತ್ತು ಟೈಗರ್​ ಶ್ರಾಫ್​ ಅಭಿನಯದ ವಾರ್​ ಚಿತ್ರವೂ ಸಹ 300 ಕೋಟಿ ಕ್ಲಬ್​ಗೆ ಸೇರಿದೆ. ಆದರೆ ಇತ್ತೀಚೆಗೆ ಬಿಡುಗಡೆಯಾದ ರಾಜಮೌಳಿ ಚಿತ್ರ ಆರ್​ಆರ್​ಆರ್​ ಮೂವಿ ಮಾತ್ರ ಹಿಂದಿಯಲ್ಲಿ 300 ಕೋಟಿ ಕ್ಲಬ್​ಗೆ ಇನ್ನು ಸೇರಿಲ್ಲ ಎಂಬುದು ತಿಳಿದು ಬಂದಿದೆ. ಅದರ ಬಳಿಕ ಬಿಡುಗಡೆಯಾದ ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​ ಚಾಪ್ಟರ್​ 2 ಚಿತ್ರ ಕೇವಲ 11 ದಿನಗಳಲ್ಲಿ 300 ಕೋಟಿ ದಾಟಿ ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ದೂಳೆಬ್ಬಿಸುತ್ತಿದೆ.

ಕೆಜಿಎಫ್​2 ಪ್ರೇಕ್ಷರ ಹೃದಯಗಳನ್ನು ಗೆಲ್ಲುತ್ತಲೇ ಬಾಕ್ಸ್ ಆಫೀಸ್​ನ್ನು ಆಳುತ್ತಲೇ ಇದೆ. 11ನೇ ದಿನಕ್ಕೆ ಈ ಚಿತ್ರ ತ್ರಿಪಲ್​ ಸೆಂಚುರಿ ಗಳಿಸಿದೆ. ವಾರ್​ ಚಿತ್ರದ ನಂತರ 300 ಕೋಟಿ ಕ್ಲಬ್​ ದಾಟಿದ ಮೊದಲ ಕೆಜಿಎಫ್​2 ಚಿತ್ರವಾಗಿದೆ. ಭಾರತದಲ್ಲಿ 300 ಕೋಟಿ ದಾಟಿದ 10ನೇ ಚಿತ್ರ ಇದಾಗಿದೆ ಎಂದು ತರುಣ್​ ಆದರ್ಶ್​ ಟ್ವೀಟ್​ ಮಾಡಿದ್ದಾರೆ.

ಕೆಜಿಎಫ್2 ನ ಅದ್ಭುತ ಯಶಸ್ಸನ್ನು ಪ್ರಶಾಂತ್ ನೀಲ್, ನಾಯಕ ಯಶ್ ಮತ್ತು ಹೊಂಬಾಳೆ ಫಿಲಂಸ್ ನಿರ್ಮಾಪಕ ವಿಜಯ್ ಆಚರಿಸಿದರು. ಚಿತ್ರದ ಅವಿರೋಧ ಯಶಸ್ಸನ್ನು ಆಚರಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಕೆಜಿಎಫ್ ಇದು ಆರಂಭ ಮಾತ್ರ' ಎಂದು ಕೇಕ್ ಮೇಲೆ ಬರೆದು ಸಂಭ್ರಮಿಸಿದ್ದಾರೆ.

ಚಿತ್ರವು ಈಗಾಗಲೇ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ರೂ 1,000 ಕೋಟಿ ಗಳಿಸಿದೆ, ಬಾಲಿವುಡ್‌ನಲ್ಲಿಯೇ ಒಟ್ಟು ರೂ 300 ಕೋಟಿ ನಿವ್ವಳ ಆದಾಯ ಬಂದಿದೆ ಎಂದು ವರದಿಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್: ಚಾಪ್ಟರ್​ 2' ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಈಶ್ವರಿ ರಾವ್, ರವೀನಾ ತಂಡೋ, ಸಂಜಯ್ ದತ್, ರಮೇಶ್ ರಾವ್ ಮತ್ತು ಇತರರು ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ವಾರ ಬಿಡುಗಡೆಯಾದ ಶಾಹಿದ್ ಕಪೂರ್ ಅಭಿನಯದ ಜೆರ್ಸಿ ಚಿತ್ರ ಸಂಪೂರ್ಣ ನೆಲಕಚ್ಚಿದೆ. ಆರಂಭ ದಿನದಲ್ಲಿ ಕೇವಲ 4 ಕೋಟಿ ಗಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.