ETV Bharat / entertainment

ಬಾಲಿವುಡ್ 'ಬೇಬಿ ಡಾಲ್'​ಗೆ 41ನೇ ಜನ್ಮದಿನ ಸಂಭ್ರಮ: ಶುಭಾಶಯಗಳ ಮಹಾಪೂರ - ಬಾಲಿವುಡ್ ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬದ ವಿಶೇಷ

ಬಾಲಿವುಡ್​ ತಾರೆ ಸನ್ನಿ ಲಿಯೋನ್​ಗೆ ಇಂದು 41ನೇ ಹುಟ್ಟುಹಬ್ಬದ ಸಂಭ್ರಮ. ಸಿನಿರಂಗದ ಜೊತೆಗೆ ಸಾಮಾಜಿಕ ಕಳಕಳಿಯೂ ಇರುವ ಈ ಸುಂದರಿ ಅದೆಷ್ಟೋ ಕುಟುಂಬಗಳ ನೆರವಿಗೆ ನಿಂತಿದ್ದು ಗೊತ್ತಿರುವ ಸಂಗತಿ.

Sunny Leone birthday, Bollywood actress Sunny Leone birthday 2022, Bollywood actress Sunny Leone birthday special, Bollywood actress Sunny Leone birthday news, ಸನ್ನಿ ಲಿಯೋನ್ ಹುಟ್ಟುಹಬ್ಬ, ಬಾಲಿವುಡ್ ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬ 2022, ಬಾಲಿವುಡ್ ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬದ ವಿಶೇಷ, ಬಾಲಿವುಡ್ ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬದ ಸುದ್ದಿ,
ಬಾಲಿವುಡ್ ಬೇಬಿ ಡಾಲ್​ಗೆ 41ನೇ ಜನ್ಮದಿನ ಸಂಭ್ರಮ
author img

By

Published : May 13, 2022, 12:36 PM IST

ಮಾದಕ ಚೆಲುವೆ, ಬಾಲಿವುಡ್​ ಸುಂದರಿ ಸನ್ನಿ ಲಿಯೋನ್​​​​​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ. 'ಬಾಲಿವುಡ್ ಬೇಬಿ ಡಾಲ್​' ಎಂದೇ ಹೆಸರು ಪಡೆದಿರುವ ಸನ್ನಿ ಲಿಯೋನ್​​ಗೆ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಕಡಿಮೆ ಅವಧಿಯಲ್ಲಿ ಇಡೀ ಜಗತ್ತು ಹಿಂತಿರುಗಿ ನೋಡುವಂತೆ ಮಾಡಿದ ಸನ್ನಿ 1981ರ ಮೇ 13ರಂದು ಜನಿಸಿದರು.

ನೆಚ್ಚಿನ ನಟಿಯ ಹುಟ್ಟುಹಬ್ಬದ ಅಂಗವಾಗಿ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ. ಇಂಟರ್ನೆಟ್‌ನಲ್ಲಿ ತಮ್ಮ ಮಾದಕ ಭಂಗಿಗಳ ಮೂಲಕ ನೋಡುಗರ ಎದೆಯಲ್ಲಿ ಕಿಚ್ಚುಹಚ್ಚುವ ಕಲೆಯನ್ನು ಸನ್ನಿ ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸನ್ನಿ ಲಿಯೋನ್ ಫ್ಯಾನ್ಸ್​ಗೆ ಬಂಪರ್​ ಆಫರ್​ ನೀಡಿದ ಮಂಡ್ಯದ ಗಂಡು.. ಆದ್ರೆ ಈ ಷರತ್ತುಗಳನ್ನು ಪಾಲಿಸ್ಲೇಬೇಕು!

ಪ್ರವಾಸ, ಫೋಟೊಶೂಟ್‌, ಹೊಸ ಉಡುಪು ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದ ಚಿತ್ರಗಳು, ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಅವರು ತಮ್ಮ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ.

41 ವರ್ಷದ ನಟಿ 2012ರಲ್ಲಿ ಬಾಲಿವುಡ್​​ಗೆ ಎಂಟ್ರಿ ಕೊಟ್ಟರು. ಜಿಸ್ಮ್‌-2 ಚಿತ್ರದಲ್ಲಿ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹೈಕ್ಳ ಮನಸು ಕದ್ದರು. ಬಾಲಿವುಡ್​ ನಟ ಶಾರೂಖ್​ ಖಾನ್​ ಚಿತ್ರದಲ್ಲೂ ‘ಲೈಲಾ ಓ ಲೈಲಾ’ ಹಾಡಿಗೆ ಹೆಜ್ಜೆ ಹಾಕಿರುವ ನಟಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಸನ್ನಿ ಲಿಯೋನ್​ ತಮ್ಮ ಸಾಮಾಜಿಕ ಜಾಲತಾಣ ಖಾತೆ ಮೂಲಕ ಮೇಲಿಂದ ಮೇಲೆ ತಮ್ಮ ಮಾದಕ ನೋಟದ ಫೋಟೋಗಳು ಹರಿಯಬಿಡುವ ಮೂಲಕ ಪಡ್ಡೆ ಹುಡುಗರ ಎದೆಗೆ ಕಾವು ನೀಡುತ್ತಲೇ ಇರುತ್ತಾರೆ. ಸನ್ನಿ ಲಿಯೋನ್​ ಮೂರು ಮಕ್ಕಳ ದತ್ತು ಪಡೆದುಕೊಂಡಿದ್ದು, ತಮ್ಮ ಪತಿ ಡೇನಿಯಲ್ ಜೊತೆ​​​​ ಸುಖ ಸಂಸಾರ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.