ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ನಟ ಅಕ್ಷಯ್ ಕುಮಾರ್ ಅವರೊಂದಿಗೆ ಭಾಗವಹಿಸಿದ 'ಕಾಫಿ ವಿತ್ ಕರಣ್' ಕಾರ್ಯಕ್ರಮದ 3ನೇ ಸಂಚಿಕೆಯಲ್ಲಿ ತಮ್ಮ ವೈಯಕ್ತಿಕ ಬದುಕಿನ ಪ್ರಶ್ನೆಗಳಿಗೆ ಉತ್ತರಿಸಿದರು.
ಕರಣ್ ಜೋಹರ್: ವಿಚ್ಛೇದನದ ನಂತರದ ಬದುಕು ಹೇಗಿದೆ?
ಸಮಂತಾ: ನಾವಿಬ್ಬರೂ ಪರಸ್ಪರ ಅಗಲುವುದು ಸುಲಭವಾಗಿರಲಿಲ್ಲ. ಈ ಸಮಯದಲ್ಲಿ ನಾನು ಆಘಾತಕ್ಕೊಳಗಾಗಿದ್ದೆ. ಈಗ ನೋವಿನಿಂದ ಹೊರಬಂದಿದ್ದು ಹಿಂದೆಂದಿಗಿಂತಲೂ ಬಲಶಾಲಿಯಾಗಿದ್ದೇನೆ.
ಕರಣ್ ಜೋಹರ್: ಪತಿಯಿಂದ ಬೇರ್ಪಟ್ಟಾಗ ಏನೆಲ್ಲಾ ಕಷ್ಟಗಳು ಎದುರಾದವು?
ಸಮಂತಾ: ಕೊಂಚ ಖಾರವಾಗಿಯೇ ಉತ್ತರಿಸುತ್ತಾ, 'ಗಂಡನಲ್ಲ, ಮಾಜಿ ಪತಿ' ಎಂದು ಹೇಳಿದರು. ಇದಕ್ಕೆ ಕರಣ್ ಕೂಡ ಕ್ಷಮೆಯಾಚಿಸಿ ಸಂದರ್ಶನ ಮುಂದುವರಿಸಿದರು.
ಕರಣ್ ಜೋಹರ್: ನಿಮ್ಮಿಬ್ಬರನ್ನು ಒಂದೇ ಕೋಣೆಗೆ ಸೇರಿಸಿದರೆ ಅಲ್ಲಿ ಚೂಪಾದ ವಸ್ತುಗಳನ್ನು ಇಡಬಹುದೇ?.
ಸಮಂತಾ: ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿಲ್ಲ. ಒಂದೇ ಕೋಣೆಯಲ್ಲಿ ಇರಿಸಿದ್ರೆ ನಾವು ಹರಿತವಾದ ಆಯುಧಗಳು ಅಥವಾ ವಸ್ತುಗಳು ಅಲ್ಲಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
ಮುಂದುವರೆದು ಮಾತನಾಡಿದ ನಟಿ, ಮುಂದೆ ನಮ್ಮ ನಡುವೆ ಮೈತ್ರಿ ಇರುತ್ತೋ, ಇಲ್ಲವೋ, ಗೊತ್ತಿಲ್ಲ. ನಾವಿಬ್ಬರು ಬೇರೆಯಾದಾಗ ನನ್ನ ವಿರುದ್ಧ ನೆಗೆಟಿವ್ ರೀತಿಯಲ್ಲಿ ಪ್ರಚಾರವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಲು ನನ್ನ ಬಳಿ ಉತ್ತರವೂ ಇರಲಿಲ್ಲ. ನಾನು ಮುಕ್ತವಾಗಿ ಬದುಕಲು ಬಯಸುತ್ತೇನೆ.
ನಾವಿಬ್ಬರೂ ದೂರವಾದ ಕೆಲವು ದಿನಗಳ ನಂತರ ನನಗೆ ಪುಷ್ಪಾದಲ್ಲಿ 'ಊ ಅಂತಾವಾ' ಹಾಡಿಗೆ ಆಫರ್ ಬಂತು. ಆ ಹಾಡು ತುಂಬಾ ಇಷ್ಟವಾಯಿತು. ಅದಕ್ಕಾಗಿಯೇ ಅದರಲ್ಲಿ ನಟಿಸಿದ್ದೇನೆ. ಪುರುಷಪ್ರಧಾನ ಸಮಾಜದಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸಲು ಈ ಹಾಡು ಸರಿಯಾಗಿದೆ ಎಂದು ಭಾವಿಸುತ್ತೇನೆ. ನನ್ನಂತಹ ಸ್ಟಾರ್ ಸೆಲೆಬ್ರಿಟಿಗಳ ಮೂಲಕ ಅದು ಖಂಡಿತವಾಗಿಯೂ ಎಲ್ಲರಿಗೂ ತಲುಪುತ್ತದೆ ಎಂದು ಸ್ಯಾಮ್ ಹೇಳಿದರು.
250 ಕೋಟಿ ರೂ ಜೀವನಾಂಶ ತೆಗೆದುಕೊಂಡಿದ್ದೇನೆ ಎಂಬ ಪ್ರಚಾರಕ್ಕೆ ಪ್ರತಿಕ್ರಿಯಿಸಿದ ನಟಿ, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಹಲವು ವದಂತಿ, ಪ್ರಚಾರಗಳು ನಡೆಯುತ್ತಿದ್ದವು. ಅದರಲ್ಲೂ ವಿಚ್ಛೇದನದ ಸಮಯದಲ್ಲಿ ನಾನು 250 ಕೋಟಿ ರೂ. ಜೀವನಾಂಶವನ್ನು ತೆಗೆದುಕೊಂಡಿದ್ದೇನೆ ಎಂದು ಆರೋಪಿಸಿದರು. ಮೊದಲಿಗೆ ಆ ವದಂತಿಗಳನ್ನು ನೋಡಿ ಶಾಕ್ ಆಗಿದ್ದೆ. ಈ ಸುದ್ದಿ ತಿಳಿದು ಕೆಲವು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಮ್ಮ ಮನೆಗೆ ಬಂದು ದಾಳಿ ಮಾಡಿ ಅದೆಲ್ಲ ಸುಳ್ಳು ಎಂದು ಹೇಳುತ್ತಾರೆ ಎಂಬ ಸುದ್ದಿಗಾಗಿ ಪ್ರತಿದಿನ ನಿರೀಕ್ಷಿಸುತ್ತಿದ್ದೆ. ಇನ್ಮುಂದೆ ಭವಿಷ್ಯದಲ್ಲಿ ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳಿಲ್ಲ ಎಂದು ಅವರು ಹೇಳಿದರು.
ಈ ಹಿಂದೆ ವಿಚ್ಛೇದನ ಕುರಿತು ದಂಪತಿ ಹೇಳಿದ್ದೇನು?: ಸುದೀರ್ಘ ಚರ್ಚೆಯ ನಂತರ ನಾವು ನಮ್ಮ ಮಾರ್ಗಗಳನ್ನು ಅನುಸರಿಸಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹ ನಮ್ಮ ಸಂಬಂಧದ ತಿರುಳಾಗಿತ್ತು. ಸಂಕಷ್ಟದ ಈ ಸಮಯದಲ್ಲಿ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು ಎಂದು ಕಳೆದ ವರ್ಷ ಹೇಳಿಕೆಯಲ್ಲಿ ಮನವಿ ಮಾಡಿದ್ದರು.
ವಾಹಿನಿಯೊಂದರಲ್ಲಿ ನಾಗಚೈತನ್ಯ ಹೇಳಿದ್ದು..: ಬೇರೆಯಾಗಿದ್ದರೂ ಪರವಾಗಿಲ್ಲ. ಇದು ವೈಯಕ್ತಿಕ ಸಂತೋಷಕ್ಕಾಗಿ ತೆಗೆದುಕೊಂಡ ನಿರ್ಧಾರ. ಅವರು ಖುಷಿಯಾಗಿದ್ದರೆ ನನಗೂ ಖುಷಿ. ಆದ್ದರಿಂದ, ವಿಚ್ಛೇದನ ಅತ್ಯುತ್ತಮ ನಿರ್ಧಾರ ಎಂದು ಈ ವರ್ಷದ ಆರಂಭದಲ್ಲಿ ನಾಗಚೈತನ್ಯ ಹೇಳಿದ್ದರು.
ಇದನ್ನೂ ಓದಿ: ಕಾಫಿ ವಿತ್ ಕರಣ್-7: ಸಮಂತಾರ ಬ್ಯಾಚುಲರ್ ಪಾರ್ಟಿಯಲ್ಲಿ ರಣವೀರ್ ಸಿಂಗ್ ಡ್ಯಾನ್ಸರ್ ಅಂತೆ