ಕಲಬುರಗಿ: ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ್ ಗೆಲುವಿಗಾಗಿ 11 ಜನ ಯುವಕರು 111 ಕಿ.ಮೀ. ಪಾದಯಾತ್ರೆ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಗೆಲುವಿಗಾಗಿ ಗುರುಮಿಠಕಲ್ನಿಂದ ಕಲಬುರಗಿ ಶ್ರೀಶರಣಬಸವೇಶ್ವರ ದೇವಸ್ಥಾನದವರೆಗೆ ಒಟ್ಟು 3 ದಿನಗಳ ಕಾಲ ಪಾದಯಾತ್ರೆ ಮಾಡಿದ ಯುವಕರು, ಸುಮಾರು 111 ಕಿ.ಮೀ. ಪಾದಯಾತ್ರೆಯ ಮಾರ್ಗದೂದ್ದಕ್ಕೂ ಬಿಜೆಪಿ ಪರ ಮತಯಾಚನೆ ಮಾಡಿದ್ದಾಗಿ ತಿಳಿಸಿದ್ದಾರೆ.
ಕೇಂದ್ರದಲ್ಲಿ ಮೋದಿ ಹಾಗೂ ಕಲಬುರಗಿಯಲ್ಲಿ ಜಾಧವ್ ಅವರನ್ನು ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡಿ, ಬಳಿಕ ಕಲಬುರಗಿ ಶರಣಬಸವೇಶ್ವರ ದೇವಸ್ಥಾನದಲ್ಲಿ ಪ್ರಾಥನೆ ಸಲ್ಲಿಸಿ ಪಾದಯಾತ್ರೆ ಮುಕ್ತಾಯಗೊಳಿಸಿದ್ದಾರೆ.