ETV Bharat / elections

ಕಾಂಗ್ರೆಸ್‌ ಪರವೇ ಒಲವು ಹೆಚ್ಚಿದೆ, ಈ ಸಾರಿಯೂ ನಾನೇ ಗೆಲ್ಲುವೆ- ಮೈತ್ರಿ ಅಭ್ಯರ್ಥಿ ಪ್ರಕಾಶ್​ ಹುಕ್ಕೇರಿ ವಿಶ್ವಾಸ

ಚಿಕ್ಕೋಡಿಯಲ್ಲಿ ಮತದಾರರು ನನ್ನ ಕೈ ಹಿಡಿಯುವ ಭರವಸೆ ಇದ್ದು ಈ ಬಾರಿ ಗೆಲವು ನನ್ನದೇ ಎಂದು ಸಂಸದ ಪ್ರಕಾಶ್​ ಹುಕ್ಕೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್​ ಹುಕ್ಕೇರಿ
author img

By

Published : Apr 21, 2019, 5:57 PM IST

ಚಿಕ್ಕೋಡಿ : ಜಿಲ್ಲೆಯ ಹುಕ್ಕೇರಿ, ಅಥಣಿ, ರಾಯಭಾಗ, ಕುಡಚಿ ಸೇರಿದಂತೆ ಹಲವೆಡೆ ಕಾಂಗ್ರೆಸ್‌ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಈ ಸಾರಿಯೂ ಗೆಲುವು ನಮ್ಮದಾಗಲಿದೆ ಎಂದು ಸಂಸದ ಪ್ರಕಾಶ್ ಹುಕ್ಕೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಹಿರಂಗ ಪ್ರಚಾರಕ್ಕೆ ಕೊನೆದಿನವಾದ ಇಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್​ ಹುಕ್ಕೆರಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಬ್ಬರದ ಪ್ರಚಾರ ನಡೆಸಿದರು.

ಪ್ರಕಾಶ್​ ಹುಕ್ಕೇರಿ ಪ್ರಚಾರ

ಹುಕ್ಕೇರಿಗೆ ಸ್ಥಳೀಯ ಶಾಸಕ ಮಹೇಶ್ ಕುಮಠಳ್ಳಿ, ಮಾಜಿ ಶಾಸಕ ಶಹಜಾನ ಡೊಂಗರಗಾವ ಮತ್ತು ಪುರಸಭೆ ಸದಸ್ಯರು ಸೇರಿ ಕಾಂಗ್ರೆಸ್​, ಜೆಡಿಎಸ್ ಮುಖಂಡರು ಸಾಥ್ ನೀಡಿದ್ರು. ಪಾದಯಾತ್ರೆ ಮೂಲಕ ನಗರದ ವ್ಯಾಪಾರಸ್ಥರಲ್ಲಿ ಮತಯಾಚನೆ ಮಾಡಿದರು.

ಪಾದಯಾತ್ರೆ ಮೂಲಕ ಮತ ಯಾಚಿಸಿದ ಕಾಂಗ್ರೆಸ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಚಿಕ್ಕೋಡಿ : ಪ್ರಚಾರ ಕೊನೆದಿನವಾದ ಇಂದು ಚಿಕ್ಕೊಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೆರಿ ಅಬ್ಬರದ ಪ್ರಚಾರಕ್ಕೆ ಬಿರು ಬಿಸಲಿನಲ್ಲಿ ಪಾದಯಾತ್ರೆಯ ಮೂಲಕ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತ ಯಾಚಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯನ್ನು ಬೇದಿಸುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ ಪಕ್ಷದ ಮಹೇಶ ಕುಮಠಳ್ಳಿ ಮತಕ್ಷೇತ್ರವಾದ ಅಥಣಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಜೊತೆಗೆ ನಡೆದು ಬರುವ ಮೂಲಕ ಬರ್ಜರಿ ಪ್ರಚಾರ ನಡೆಸಿದರು. ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು ಸ್ಥಳಿಯ ಶಾಸಕ ಮಹೇಶ್ ಕುಮಠಳ್ಳಿ ಮಾಜಿ ಮಾಜಿ ಶಾಸಕ ಶಹಜಾನ ಡೊಂಗರಗಾವ, ಸೇರಿದಂತೆ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಮತ್ತು ಪುರಸಭೆ ಸದಸ್ಯರೊಂದಿಗೆ ಪಾದಯಾತ್ರೆ ಮೂಲಕ ಕಾರ್ಯಕರ್ತರ ಜೊತೆ ಅಗಮಿಸಿದ ಪ್ರಕಾಶ ಹುಕ್ಕೆರಿ ಹಸ್ತದ ಗುರುತಿಗೆ ಮತ ನೀಡಿ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡುವ ಮೂಲಕ ಮತಯಾಚಿಸಿದರು ಸುಡುವ ಬಿಸಿಲನ್ನೂ ಲೆಕ್ಕಿಸದೇ ಪಾದಯಾತ್ರೆ ಮ‌ೂಲಕ ವ್ಯಾಪಾರಸ್ಥರಲ್ಲಿ ಮತ್ತು ಅಥಣಿ ಪಟ್ಟಣದ ಮತದಾರರಲ್ಲಿ ಮತ ಯಾಚಿಸಿದ ಪ್ರಕಾಶ ಹುಕ್ಕೆರಿಗೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಸಾಥ ನೀಡಿದ್ದು ಬಿರುಸಿನ ಪ್ರಚಾರ ನಡೆಸಿದ್ದು ಕಂಡು ಬಂತು. ಈ ವೇಳೆ ಮಾತನಾಡಿದ ಸಂಸದ ಪ್ರಕಾಶ್ ಹುಕ್ಕೇರಿ ಅಥಣಿ, ರಾಯಭಾಗ, ಕುಡಚಿ ಸೇರಿದಂತೆ ಹಲವೆಡೆ ಭಾರಿ ಬೆಂಬಲ ವ್ಯಕ್ತವಾಗಿದ್ದು ಗೆಲುವು ನಮ್ಮದಾಗಲಿದೆ ಎಂಬ ನಂಬಿಕೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು... ಬೈಟ್: ಪ್ರಕಾಶ್ ಹುಕ್ಕೇರಿ- ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಂಜಯ ಕೌಲಗಿ‌ ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.