ಹುಬ್ಬಳ್ಳಿ: ಹೇಳಿ ಕೇಳಿ ಮುಂಬೈ ಕರ್ನಾಟಕ ಲಿಂಗಾಯತ ರಾಜಕೀಯದ ಅಗ್ರಗಣ್ಯ ನೆಲೆ. ಇನ್ನು ಇಲ್ಲಿ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಕುಡಿವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ, ಇದುವೇ ಈ ಭಾಗದ ಬಹುದೊಡ್ಡ ಸಮಸ್ಯೆ.
ಪ್ರಸ್ತುತ ಮುಂಬೈ ಕರ್ನಾಟಕದಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ. ಕಳೆದ ವಿಧಾನಸಭೆ ಚುನಾವಣೆ ವೇಳೆಯೂ ಇಲ್ಲಿ ಬಿಜೆಪಿಯೇ ಪ್ರಾಬಲ್ಯ ಮೆರೆದಿದೆ. ಈ ಬಾರಿ ಜೆಡಿಎಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕಾರಣ ಕಾಂಗ್ರೆಸ್ಗೆ ಸ್ವಲ್ಪ ಮಟ್ಟಿನ ಲಾಭ ಆದರೂ ಆಗಬಹುದು.
ಲೋಕಸಭಾ ಕ್ಷೇತ್ರಗಳು :
ಬೆಳಗಾವಿ
ಚಿಕ್ಕೋಡಿ
ಧಾರವಾಡ
ಹಾವೇರಿ
ಬಾಗಲಕೋಟೆ
ವಿಜಯಪುರ
ಇಲ್ಲಿನ ವಿಧಾನಸಭೆ ಕ್ಷೇತ್ರಗಳ ಸಂಖ್ಯೆ: 48
ಬಿಜೆಪಿ - 29
ಕಾಂಗ್ರೆಸ್ - 16
ಜೆಡಿಎಸ್ - 2
ಮುಂಬೈ ಕರ್ನಾಟಕದಲ್ಲಿ ಕೇಸರಿ ಬ್ರಿಗೇಡ್ನದ್ದೇ ಪ್ರಾಬಲ್ಯ..ಕಾಂಗ್ರೆಸ್ ನಂತರದ ಸ್ಥಾನದಲ್ಲಿದ್ದರೆ, ಜೆಡಿಎಸ್ ವಿಜಯಪುರ ಜಿಲ್ಲೆಗಷ್ಟೇ ಸೀಮಿತವಾಗಿದೆ.
ಪಕ್ಷ ಎಂಎಲ್ಎಗಳು ಪ್ರತಿಶತ
ಬಿಜೆಪಿ 29 ಶೇ. 44.66
ಕಾಂಗ್ರೆಸ್ 16 40.00
ಜೆಡಿಎಸ್ 02 6.50
ಕೆಪಿಜೆಪಿ 01 ( ರಾಣೆಬೆನ್ನೂರಿನಲ್ಲಿ ಆರ್.ಶಂಕರ್ ಗೆಲುವು)
ಚುನಾವಣಾ ಇತಿಹಾಸ: ದಳ ಇಬ್ಭಾಗವಾದ ಬಳಿಕ ಮುಂಬೈ ಕರ್ನಾಟಕದಲ್ಲಿ ಭಾರತೀಯ ಜನತಾಪಕ್ಷ ಬಿಗಿ ಹಿಡಿತ ಸಾಧಿಸಿದೆ. ಇಲ್ಲಿ ಜೆಡಿಎಸ್ ಪ್ರಭಾವ ಕೇವಲ ಬೆರಳೆಣಿಕೆಗೆ ಮಾತ್ರ ಸಿಮೀತವಾಗಿದೆ.
1991ರ ಬಳಿಕ ಚಿಕ್ಕೋಡಿಯಲ್ಲಿ ಕಳೆದ ಬಾರಿ( 2014) ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಪ್ರಕಾಶ್ ಹುಕ್ಕೇರಿ ರಮೇಶ್ ಕತ್ತಿ ಸೋಲಿಸಿ ಗೆಲುವಿನ ನಗೆ ಬೀರಿದ್ದರು.
1996ರ ಬಳಿಕ ಧಾರವಾಡದಲ್ಲಿ ಬಿಜೆಪಿ ಸೋಲು ಕಂಡಿಲ್ಲ. ಈ ಮೊದಲು ಈ ಕ್ಷೇತ್ರ ಧಾರವಾಡ ಉತ್ತರ ಎಂಬ ಹೆಸರು ಹೊಂದಿತ್ತು. ಪ್ರಹ್ಲಾದ್ ಜೋಶಿ ಮೂರು ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಗೆಲುವಿನ ಅಂತರ
ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ 2004 ರಲ್ಲಿ ಪಿಸಿ ಗದ್ದಿಗೌಡರ್ 1.67 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಕಡಿಮೆ ಅಂತರದ ಗೆಲುವು
2014ರ ಚುನಾವಣೆಯಲ್ಲಿ ಪ್ರಕಾಶ್ ಹುಕ್ಕೇರಿ ರಮೇಶ್ ಕತ್ತಿ ವಿರುದ್ಧ ಕೇವಲ 3003 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.