ETV Bharat / elections

ಜೈಲಿಗೆ ಹೋಗಿ ಬಂದವರೆಲ್ಲಾ ಚೌಕಿದಾರರಾಗುತ್ತಿದ್ದಾರೆ: ಬಿಜೆಪಿ ಕಾಲೆಳೆದ ಸಿದ್ದರಾಮಯ್ಯ - ವೀರಪ್ಪ ಮೋಯ್ಲಿ

ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿಯ ವೀರಪ್ಪ ಮೋಯ್ಲಿ ಪರ ಮೈತ್ರಿ ಸರ್ಕಾರದ ಮುಖಂಡರಾದ ಸಿದ್ದರಾಮಯ್ಯ ಹಾಗೂ ದೇವೆಗೌಡರು ಮತಯಾಚನೆ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ
author img

By

Published : Apr 10, 2019, 5:05 AM IST

ಚಿಕ್ಕಬಳ್ಳಾಪುರ: ನರೇಂದ್ರ ಮೋದಿಗೆ ಯಾರು ಚೌಕಿದಾರ್ ಎಂಬ ಹೆಸರನ್ನು ಇಟ್ಟಿಲ್ಲಾ ಅವರಿಗೆ ಅವರೇ ಹೆಸರಿಟ್ಟುಕೊಂಡಿದ್ದಾರೆ. ಆದರೆ ರಾಜ್ಯದಲ್ಲಿ ಜೈಲಿಗೆ ಹೋಗಿಬಂದ ಬಿಜೆಪಿ ನಾಯಕರೂ ಕೂಡ ಚೌಕಿದಾರರಾಗಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಕಾಲೆಳೆದಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿಯ ಪರ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಸಿದ್ದರಾಮಯ್ಯ ನರೇಂದ್ರ ಮೋದಿಗೆ ಯಾರು ಚೌಕಿದಾರ್ ಎಂಬ ಹೆಸರಿಟ್ಟಿಲ್ಲ,ಅವರಿಗವರೆ ಇಟ್ಟುಕೊಂಡಿದ್ದಾರೆ. ಆದರೆ ಬಿಜೆಪಿಯ ಯಡಿಯೂರಪ್ಪ,ಅಮಿತ್ ಶಾ, ಶ್ರೀರಾಮಲು, ಜನಾರ್ದನ ರೆಡ್ಡಿ, ಕಟ್ಟಾ ಸುಭ್ರಮಣ್ಯ ನಾಯ್ಡು ಜೈಲು ಸೇರಿಬಂದಿದ್ದಾರೆ, ಇದೀಗ ಇವರು ಕೂಡ ತಮ್ಮ ಹೆಸರಿನ ಮುಂದೆ ಚೌಕಿದಾರ ಎಂಬ ಹೆಸರು ಸೇರಿಸಿಕೊಂಡಿದ್ದಾರೆಂದು ಬಿಜೆಪಿ ನಾಯಕರನ್ನು ಟೀಕಿಸಿದರು.

ಸಿದ್ದರಾಮಯ್ಯ

ತಾವು ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ರೈತರ ಪರವಾಗಿ ಸಾಲಮನ್ನಾ ಮಾಡಿಸಲು ಮೋದಿಯ ಬಳಿ ಹೋದರೆ, ಅವರು ಸಾಧ್ಯವಿಲ್ಲಾ ಎಂಬ ಮಾತನ್ನು ಹೇಳಿದ್ದರು. ಈ ವೇಳೆ ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶಟ್ಟರ್ ಸೇರಿದಂತೆ ದಿವಂಗತ ಅನಂತ ಕುಮಾರ್ ಆದರೆ ಬಗ್ಗೆ ತುಟಿಕ್​ ಪಿಟಿಕ್ ಅನ್ನದೇ ಮೂಲೆಯಲ್ಲಿ ಕುಳಿತಿದ್ದರು ಎಂದು ವಾಕ್ ಪ್ರಹಾರ ಮಾಡಿದರು.

ಬಚ್ಚೇಗೌಡ ಜಾತಿ ಲೆಕ್ಕಚಾರ ಮಾಡುತ್ತಿದ್ದಾರೆ.

ಬಚ್ಚೇಗೌಡರು ಏನು ಎಂಬುವುದು ದೇವೆಗೌಡ್ರಿಗೆ ಹಾಗೂ ನನಗೆ ಚೆನ್ನಾಗಿ ಗೋತ್ತಿದೆ. ಜಾತಿ ಲೆಕ್ಕಾಚಾರ ಮಾಡಿ ಮತವನ್ನು ಗಳಿಸಲು ಮುಂದಾಗುತ್ತಿದ್ದಾರೆ. ಆದರೆ ಈ ಕ್ಷೇತ್ರದ ಜನತೆಗೆ ಯಾವೊಂದು ಕೆಲಸವನ್ನು ಮಾಡಿಲ್ಲಾ. ನಮ್ಮನ್ನು ನೋಡಿ ಮತವನ್ನು ಹಾಕಬೇಡಿ, ಮೋದಿಯಯನ್ನು ನೋಡಿ ಮತ ಹಾಕಿ ಎಂದು ತಿಳಿಸುತ್ತಿದ್ದಾರೆ. ಯಾವ ಕಾರಣಕ್ಕೆ ಮೋದಿಗೆ ಮತವನ್ನು ನೋಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಬಾರೀ ವೀರಪ್ಪ ಮೊಯ್ಲಿಗೆ ಮತವನ್ನು ಚಲಾಯಿಸಿದರೆ ದೇವೆಗೌಡರಿಗೆ, ಸ್ಥಳೀಯ ಶಾಸಕ ಸುಧಾಕರ್​ಗೆ ಹಾಗೂ ನನಗೆ ಬಲ ಬರುತ್ತದೆ. ಈ ಬಾರೀ ವೀರಪ್ಪ ಮೋಯ್ಲಿಗೆ ಮತವನ್ನು ನೀಡಿ ಎಂದು ಪ್ರಚಾರ ನಡೆಸಿದರು

ಇದೇ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು ಮೈತ್ರಿ‌ಸರ್ಕಾರದಲ್ಲಿ ಕೆಲವು ಭಿನ್ನಾಭಿಪ್ರಾಯವಿದೆ, ಆದರೆ ಅದನ್ನು ಬದಿಗೊತ್ತಿ ಪ್ರಮಾಣಿಕವಾಗಿ ಎರಡು ಪಕ್ಷಗಳು ದುಡಿದರೆ ವೀರಪ್ಪ ಮೊಯ್ಲಿಯವರನ್ನು ಒಂದೂವರೆ ಲಕ್ಷ ಮತಗಳಿಂದ ಗೆಲ್ಲಿಸಿಕೊಳ್ಳಬಹುದು ಎಂದ ಅವರು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಆದ್ದರಿಂದ ದೇಶದಲ್ಲಿ ಜಾತ್ಯತೀತ ಶಕ್ತಿಗಳು ಒಂದಾದರೆ ಮಾತ್ರ ದೇಶವನ್ನು ಉಳಿಸಬಹುದು ಎಂದರು.

Intro:ಲೋಕಸಭಾ ವ್ಯಾಪ್ತಿಯಲ್ಲಿ ದೋಸ್ತಿ ಸರ್ಕಾರ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.

Body:ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ವೀರಪ್ಪ ಮೊಯ್ಲಿ ಸ್ಪರ್ಧೆಗಿಳಿದ್ದಾರೆ.ಇದರ ಸಲುವಾಗಿಯೇ ಇಂದು ಮಾಜಿ ಪ್ರಧಾನಿ,ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೆಗೌಡ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸ್ಥಳೀಯ ಶಾಸಕ ಸುಧಾಕರ್ ಚಿಕ್ಕಬಳ್ಳಾಪುರ ಲೋಕಸಭಾ ವ್ಯಪ್ತಿಯಲ್ಲಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.

ನಗರದ ಬಿಬಿ ರಸ್ತೆಯ ಬಳಿ ಪ್ರಚಾರ ಸಭೆಯನ್ನು ಏರ್ಪಡಿಸಿದ್ದು ನೂರಾರು ಸಂಖ್ಯೆಯಲ್ಲಿ ಮೈತ್ರಿ ಕಾರ್ಯಕರ್ತರು ಭಾಗಿಯಾಗಿದ್ದರು ಆದರೆ ಲೋಕಸಭಾ ಅಭ್ಯರ್ಥಿ ವೀರಪ್ಪ ಮೊಯ್ಲಿ ಗೈರಾಗಿದ್ದು ಮಗ ಹರ್ಷ ಮೊಯ್ಲಿ ಹಾಜರಿದ್ದರು.

ಜೆಡಿಎಸ್ ಕಾರ್ಯಕರ್ತರ ಭಿನ್ನಮತ...

ಸಧ್ಯ ಈ ಬಾರೀ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ದೋಸ್ತಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿಯ ಪರ ಜಿದ್ದಾಜಿದ್ದಿನಾ ಪೈಪೋಟಿ ನಡೆಯುವುದರಲ್ಲಿ ಬೇರೊಂದು ಮಾತಿಲ್ಲಾ.ಇದರ ನಡುವೆ ತಮ್ಮ ಕೇತ್ರಗಳನ್ನು ಉಳಿಸಿಕೊಳ್ಳಲು ಅಭ್ಯರ್ಥಿಗಳು ಸಾಕಷ್ಟು ಕಸರತ್ತು ನಡೆಸುತ್ತಿದ್ದರೆ.ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಶಾಸಕನ ವಿರುದ್ದ ಮತ್ತೇ ಭುಗೆಲೆದ್ದಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ದೇವೆಗೌಡರು ಹಾಗೂ ಸಿದ್ದರಾಮಯ್ಯ ಉಪಸ್ಥಿತಿ ಹೊಂದಿದ್ದು ಕೈ ಶಾಸಕ ಸುಧಾಕರ್ ಭಾಷಣಾ ಶುರುಮಾಡಿದ್ದರೆ ಮತ್ತೊಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ದಿಕ್ಕಾರಗಳನ್ನು ಕೂಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ರೈತರ ಕಷ್ಟ ಏನೆಂಬುವುದು ನನಗೆ ಗೋತ್ತು.- ಹೆಡಿಡಿ

ಯುವ ಜನತೆ ಮೋದಿ ಮೋದಿ ಎಂದು ಕರೆಯುವ ಆರ್ ಎಸ್ ಎಸ್ ಕಾರ್ತಕರ್ತರಿದ್ದಾರೆ.

ಮೈತ್ರಿ‌ಸರ್ಕಾರದಲ್ಲಿ ಕೆಲವು ಭಿನ್ನಾಭಿಪ್ರಾಯವಿದೆ ಆದರೆ ಅದನ್ನು ಬದಿಗೋತ್ತಿ ಪ್ರಮಾಣಿಕವಾಗಿ ಪಕ್ಕಗಳುಗೆ ದುಡಿದರೆ ವೀರಪ್ಪ ಮೊಯ್ಲಿಯವರನ್ನು ಒಂದೂವರೆ ಲಕ್ಷ ಮತಗಳಿಂದ ಗೆಲ್ಲಿಸಿಕೊಳ್ಳಬಹುದು.ದೇಶದಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಿಲ್ಲಾ ಈ ಬಾರೀ ಒಂದಾದರೆ ಮಾತ್ರ ದೇಶವನ್ನು ಉಳಿಸಬಹುದು.ಅದೇ ರೀತಿ ದೇಶದಲ್ಲಿ ಯುವ ಜನತೆ ಮೋದಿ ಮೋದಿ ಎಂದು ಕರೆಯುವ ಆರ್ ಎಸ್ ಎಸ್ ಕಾರ್ತಕರ್ತರಿದ್ದಾರೆ ಎಂದು ಮೋದಿ ಅಭಿಮಾನಿಗಳ ಕಾಲೆಳೆದರು.ಸದ್ಯ ರಾಜ್ಯದಲ್ಲಿ ಎರಡು ಮಾಧ್ಯಮಗಳು ಬಿಟ್ಟರೆ ಯಾವುದು ಜನರ ಪರ ಇಲ್ಲ.ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮೈತ್ರಿ ಸರ್ಕಾರ ಆಗಲು ಮುಖ್ಯ ಕಾರಣ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧೀ. ಅದರಲ್ಲೂ ಮೈತ್ರಿ ಮಾಡಿಕೊಳ್ಳಲು ಕಾರಣ ಬಿಜೆಪಿಯ 21 ಜನ ಮುಖಂಡರು ಇದರ ಸಲುವಾಗಿಯೇ ಒಂದು ವೇದಿಕೆಗೆ ಬರಲು ಕಾರಣವಾಯ್ತು ಎಂದು ಎಚ್ ಡಿ ದೇವೆಗೌಡರು ತಿಳಸಿದರು.

ಜೈಲಿಗೆ ಹೋಗಿ ಬಂದವರೆಲ್ಲಾ ಚೌಕಿದಾರರೇ- ಸಿದ್ದರಾಮಯ್ಯ

ಇನ್ನೂ ಬಾಷಣ ಶುರುಮಾಡುತ್ತಿದಂತೆ ಎಲ್ಲರನ್ನು ರಂಜಿಸಿದ ಸಿದ್ದರಾಮಯ್ಯ ಬಿಜೆಪಿ ಹಾಗೂ ಮೋದಿಯ ಕಾಲೇಳೆದರು. ಮುಖ್ಯಮಂತ್ರಿಯಾದ ಸಂಧರ್ಭದಲ್ಲಿ ರೈತರ ಪರವಾಗಿ ಸಾಲಮನ್ನಾ ಮಾಡಿಸಲು ಮೋದಿಯ ಬಳಿ ಹೋದರೆ ಸಾಧ್ಯವಿಲ್ಲಾ ಎಂಬ ಮಾತನ್ನು ಹೇಳಿದ್ದರು ಇದೇ ವೇಳೆ ಯಡಿಯೂರಪ್ಪ, ಸದಾನಂದ ಗೌಡ,ಜಗದೀಶ್ ಶಟ್ಟರ್ ಸೇರಿದಂತೆ ಅನಂತ ಕುಮಾರ್ ಆಗ ಬದುಕಿದ್ದರು ಆದರೆ ತುಟಿ ಪಿಟಿಕ್ ಅನ್ನದೇ ಮೂಲೆಯಲ್ಲಿದ್ದರು ಎಂದು ವಾಕ್ ಪ್ರಹಾರ ಮಾಡಿದರು.

ಇನ್ನೂ ಕಳೆದ ದಿನಗಳಲ್ಲಿ ಯಡಿಯೂರಪ್ಪ ಮುಖ್ಯಂತ್ರಿಯಾದ ಸಂಧರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿ ಎಂದರೆ ನಾವೇನು ನೋಟ್ ಪ್ರಿಂಟ್ ಮಾಡುತ್ತಿಲ್ಲಾ ಎಂದರು ಇಂತಹವರಿಗೆ ಮತವನ್ನು ನೀಡಬೇಕಾ ಎಂದು ಕಾರ್ಯಕರ್ತರಲ್ಲಿ ಪ್ರಶ್ನಿಸಿದರು. ಸದ್ಯ ದೇಶದಲ್ಲಿ ಚೌಕಿದಾರರಾಗಿದ್ದಾರೆ.ನರೇಂದ್ರ ಮೋದಿಗೆ ಯಾರು ಚೌಕಿದಾರ್ ಎಂಬ ಹೆಸರನ್ನು ಇಟ್ಟಿಲ್ಲಾ ಅವರಿಗೆ ಅವರೇ ಹೆಸರಿಟ್ಟುಕೊಂಡ್ರು.ಆದರೆ ಈಗ ಬಿಜೆಪಿಯ ಪ್ರತಿಯೊಬ್ಬರೂ ಚೌಕಿದಾರ ಆಗಿದ್ದಾರೆ. ಯಡಿಯೂರಪ್ಪ,ಅಮಿತ್ ಶಾ ಶ್ರೀರಾಮಲು,ಜನಾರ್ದನ ರೆಡ್ಡಿ,ಕಟ್ಟಾ ಸುಭ್ರಮಣ್ಯ ನಾಯ್ಡು ಜೈಲು ಸೇರಿಬಂದಿದ್ದಾರೆ ಇವರು ಕೂಡ ಚೌಕಿದಾರರೇ ಎಂದು ಟೀಕಿಸಿದರು. ನರೇಂದ್ರ ಮೋದಿ ಬಡವರಿಗೆ ವಿರುದ್ಧ ಕೆಲಸಗಳನ್ನು ಮಾಡಿ ಜನರ ಆಕ್ರೋಶಕ್ಕೆ ಒಳಗಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಚ್ಚೇಗೌಡ ಜಾತಿ ಲೆಕ್ಕಚಾರ ಮಾಡುತ್ತಿದ್ದಾರೆ.

ಬಚ್ಚೇಗೌಡರು ಏನು ಎಂಬುವುದು ದೃವೆಗೌಡ್ರಿಗೆ ಹಾಗೂ ನನಗೆ ಚೆನ್ನಾಗಿ ಗೋತ್ತಿದೆ. ಜಾತಿ ಲೆಕ್ಕಾಚಾರ ಮಾಡಿ ಮತವನ್ನು ಗಳಿಸಲು ಮುಂದಾಗುತ್ತಿದ್ದಾರೆ.ಆದರೆ ಈ ಕ್ಷೇತ್ರದ ಜನತೆಗೆ ಯಾವೊಂದು ಕೆಲಸವನ್ನು ಮಾಡಿಲ್ಲಾ.ನಮ್ಮನ್ನು ನೋಡಿ ಮತವನ್ನು ಹಾಕಬೇಡಿ ಮೋದಿಯಯನ್ನು ನೋಡಿ ಮತವನ್ನು ಹಾಕಿ ಎಂದು ತಿಳಿಸುತ್ತಿದ್ದಾರೆ ಯಾವ ಕಾರಣಕ್ಕೆ ಮೋದಿಗೆ ಮತವನ್ನು ನೋಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಈ ಬಾರೀ ವೀರಪ್ಪ ಮೊಯ್ಲಿಗೆ ಮತವನ್ನು ಚಲಾಯಿಸಿದರೆ ದೇವೆಗೌಡರಿಗೆ ,ಸ್ಥಳೀಯ ಶಾಸಕ ಸುಧಾಕರ್ಗೆ ಹಾಗೂ ನನಗೆ ಬಲ ಬರುತ್ತದೆ ಈ ಬಾರೀ ವೀರಪ್ಪ ಮೋಯ್ಲಿಗೆ ಮತವನ್ನು ನೀಡಿ ಎಂದು ಪ್ರಚಾರ ನಡೆಸಿ ಸಭೆ ಮುಕ್ತಾಯ ಗೊಳಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.