ಮಂಗಳೂರು: ನಗರದ ಬಂಟ್ವಾಳದಲ್ಲಿ ನವಜೋಡಿಯೊಂದು ಹಸೆಮಣೆ ಏರುವ ಮುನ್ನ ತಮ್ಮ ಹಕ್ಕು ಚಲಾಯಿಸಿ ನಾಗರಿಕ ಪ್ರಜ್ಞೆ ತೋರಿದರು.
ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಸುಭಾಸ್ ನಗರದ ನಿವಾಸಿ ಸುಮಿತ್ ಪೂಜಾರಿ ಅವರು ಪೊಳಲಿ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ವಧು ಪ್ರತಿಜ್ಞಾ ಬೇಂಕ್ಯೆ ಅವರು ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಮತದಾನ ಮಾಡಿದರು. ನವಜೋಡಿ ತಮ್ಮ ಮತ ಚಲಾಯಿಸಿದ ಬಳಿಕ ಪೊಳಲಿ ದೇವಸ್ಥಾನದಲ್ಲಿ ಮದುವೆ ಮಂಟಪಕ್ಕೆ ತೆರಳಿ ಹಸೆಮಣೆ ಏರಿದರು. ಅದೇ ರೀತಿ ಬಂಟ್ವಾಳದ ನಿತ್ಯಾನಂದ ನಗರ ನಿವಾಸಿ ರಮ್ಯಾ ಶೆಟ್ಟಿ ಎಂಬ ವಧುವೂ ಇಂದು ಮತ ಚಲಾವಣೆ ಮಾಡಿದರು.
ದಿಬ್ಬಣ ಹೊರಡುವ ಮೊದಲೇ ಮತದಾನ ಮಾಡಿದ ರಮ್ಯಾ ಬಳಿಕ ಗುರುವಾಯನಕೆರೆಯಲ್ಲಿ ನಡೆಯಲಿರುವ ಮದುವೆ ಮಂಟಪಕ್ಕೆ ತೆರಳಿದರು.