ಬೆಂಗಳೂರು: ಏಪ್ರಿಲ್ 18 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಬೆಂಗಳೂರು ಜಿಲ್ಲಾ ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡುತ್ತಿದೆ. ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ಸರ್ಕಾರಿ ವಿವಿಧ ಇಲಾಖೆಗಳ 45,000 ಸಿಬ್ಬಂದಿ ಚುನಾವಣೆಗಾಗಿ ಕೆಲಸ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಮಾಹಿತಿ ನೀಡಿದರು.
ಚುನಾವಣಾ ಕೆಲಸ ಕಾರ್ಯಗಳಿಕೆ ಗೈರು ಹಾಜರಾಗುವ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ತುರ್ತು ಕಾರಣಗಳಿಲ್ಲದೆ ಗೈರಾದರೆ ಆಯೋಗದ ನಿಯಮಗಳ ಪ್ರಕಾರ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗ್ತಿದೆ. ತುರ್ತು ಕಾರ್ಯಗಳಿದ್ದಲ್ಲಿ ಮಾತ್ರ ರಜೆ. ಅದೂ ಕೂಡಾ ಪ್ರೂಫ್ ತೋರಿಸಿದ್ರೆ ರಜೆ ಅಪ್ರೂವ್ ಮಾಡಲಾಗುವುದು. ಇಲ್ಲದಿದ್ರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಒಂದು ಹಂತದ ತರಬೇತಿ ಮುಗಿದಿದೆ. ಪ್ರಿಸೈಡಿಂಗ್ ಆಫೀಸರ್ ಹಾಗೂ ಪೋಲಿಂಗ್ ಆಫೀಸರ್ಗಳಾದ ಒಟ್ಟು 27,000 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮುಂದಿನ ತರಬೇತಿ 11ನೇ ತಾರೀಕಿನಂದು ಪ್ರತೀ ಇಪ್ಪತ್ತೆಂಟು ವಿಧಾನಸಭಾ ಕ್ಷೇತ್ರಗಳ ಕೆಲ ಪ್ರಮುಖ ಕಾಲೇಜುಗಳಲ್ಲಿ 45 ಸಾವಿರ ಸಿಬ್ಬಂದಿಗೂ ತರಬೇತಿ ನೀಡಲಾಗುವುದು ಮತ್ತು ಇವಿಎಂ ಮಷಿನ್, ವಿವಿ ಪ್ಯಾಟ್ಗಳ ಬಳಕೆಯಿಂದ ಹಿಡಿದು ವೋಟಿಂಗ್ ಪ್ರಕ್ರಿಯೆಯ ಸಂಪೂರ್ಣ ತರಬೇತಿಯನ್ನು ಸಿಬ್ಬಂದಿಗೆ ನೀಡಲಾಗ್ತಿದೆ ಎಂದರು.