ETV Bharat / elections

ಚಾಮರಾಜನಗರ ಲೋಕಸಮರ: ಅಧಿಕಾರಿ ಸಾವು, ಇವಿಎಂ ಗೊಂದಲ ಹೊರತುಪಡಿಸಿ ಶಾಂತಿಯುತ ಮತದಾನ - kannada news

ಚಾಮರಾಜನಗರ ಕ್ಷೇತ್ರದಾದ್ಯಂತ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯಿತು. ಕೆಲವೊಂದು ಕಡೆ ಇ.ವಿ.ಎಂ ಮಷಿನ್​ನಲ್ಲಿ ದೋಷ ಕಂಡುಬಂದರೆ, ಇನ್ನೂ ಕೆಲವೆಡೆ ಮಳೆರಾಯ ಮತದಾನಕ್ಕೆ ಅಡ್ಡಿಪಡಿಸಿದ.

ಚಾಮರಾಜನಗರ ಲೋಕಸಭೆ ಚುನಾವಣೆ ಶಾಂತಿಯುತವಾಗಿ ನಡೆದ ಮತದಾನ
author img

By

Published : Apr 18, 2019, 10:05 PM IST

ಚಾಮರಾಜನಗರ: ಮೊದಲ ಹಂತದ ಚುನಾವಣೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮುಕ್ತಾಯವಾಗಿದ್ದು, ಅಂದಾಜು ಶೇ.73 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದ್ದಾರೆ.

2205 ಮತಗಟ್ಟೆ ಅಧಿಕಾರಿಗಳು, 2,205 ಸಹಾಯಕ ಅಧಿಕಾರಿಗಳು, 4410 ಮತದಾನ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ವಿಶೇಷವಾಗಿ 10 ಸಖಿ ಮತಗಟ್ಟೆಗಳು, 4 ಸಾಂಪ್ರದಾಯಿಕ ಮತಗಟ್ಟೆಯನ್ನು ತೆರೆಯಲಾಗಿತ್ತು.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ನಡೆದ ಮತದಾನ

ಸಾಂಪ್ರದಾಯಿಕ ಮತಗಟ್ಟೆ

ಗಿರಿಜನರು ತಮ್ಮ ಹಕ್ಕು ಚಲಾಯಿಸುವಂತೆ ಪ್ರೇರೇಪಿಸಲು 4 ಸಾಂಪ್ರದಾಯಿಕ ಮತಗಟ್ಟೆಗಳನ್ನ ತೆಯಲಾಗಿತ್ತು. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 36 ಸಾವಿರ ಸೋಲಿಗರು, ಕಾಡು ಕುರುಬ, ಜೇನುಕುರುಬ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ. ಇದರಲ್ಲಿ 23 ಸಾವಿರ ಮಂದಿ ಮತದಾರರಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಗಿರಿಜನ ಆಶ್ರಮ ಶಾಲೆಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು.

ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ತಳಿರು ತೋರಣಗಳಿಂದ ಮತಗಟ್ಟೆಯನ್ನು ಚಪ್ಪರದಿಂದ ಶೃಂಗರಿಸಿದ್ದರಲ್ಲದೇ, ಮತಗಟ್ಟೆಗೆ ತಮ್ಮದೇ ಆದ ಸಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ತೊಟ್ಟು, ಗೊರುಕನ ನೃತ್ಯದ ಮೂಲಕ ಮತದಾನ ಕೇಂದ್ರಕ್ಕೆ ತೆರಳಿ, ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಸಖಿ ಮತಗಟ್ಟೆಗಳಲ್ಲಿ ಮೊದಲ 100 ಮತದಾರರಿಗೆ ಗಿಡಗಳನ್ನು ನೀಡುವ ಮೂಲಕ ವಿಶಿಷ್ಟತೆ ಮೆರೆಯುವ ಜೊತೆಗೆ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು.

ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ಚಾಮರಾಜನಗರ ತಾಲೂಕಿನ ಆಲೂರು ಗ್ರಾಮ ಹಾಗೂ ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ ವ್ಯಾಪ್ತಿಯ ದೊಡ್ಡಾಣೆ, ತೋಕೆರೆ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಲಾಯಿತು. ಸುವರ್ಣಾವತಿ ಜಲಾಶಯದಿಂದ ನೀರು ಬಿಡದಿರುವುದರಿಂದ ಆಲೂರು ಗ್ರಾಮದ 800 ಕ್ಕೂ ಹೆಚ್ಚು ಮಂದಿ ಮತದಾನದಿಂದ ದೂರ ಉಳಿದರು. ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ. ವ್ಯಾಪ್ತಿಯ ದೊಡ್ಡಾಣೆ ಹಾಗೂ ತೋಕೆರೆ ಗ್ರಾಮಕ್ಕೆ ಮೂಲಸೌಕರ್ಯ ನೀಡಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಕಷ್ಟ ಕೇಳ್ತಿಲ್ಲವೆಂದು ಆರೋಪಿಸಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿದರು.

ವೈರಲ್ ಆದ ಮತದಾನದ ಫೋಟೋ

ಮತಗಟ್ಟೆಗೆ ಮೊಬೈಲ್ ನಿಷೇಧವಿದ್ದರೂ ಕದ್ದುಮುಚ್ಚಿ ತಮ್ಮಿಚ್ಛೆಯ ಅಭ್ಯರ್ಥಿಗೆ ಮತ ಹಾಕಿರುವ ಫೋಟೋಗಳನ್ನು ಮತದಾರರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆಯೂ ಈ ಬಾರಿ ನಡೆಯಿತು. ಕೈ ಅಭ್ಯರ್ಥಿ ಧ್ರುವನಾರಾಯಣಗೆ ಮತ ಹಾಕುತ್ತಿರುವ 4-5 ಫೋಟೋಗಳು ವಾಟ್ಸ್ಯಾಪ್​ ಗ್ರೂಪ್​ಗಳಲ್ಲಿ ಹರಿದಾಡಿದವು.

ಕೈಕೊಟ್ಟ ಇವಿಎಂ ಹಾಗೂ ಮಳೆ ಅಡ್ಡಿ

ಜಿಲ್ಲೆಯ ವಿವಿಧೆಡೆ ಮತಯಂತ್ರಗಳು ಕೈಕೊಟ್ಟು 15 ನಿಮಿಷದಿಂದ ಒಂದೂವರೆ ತಾಸಿನವರೆಗೂ ಮತದಾನ ತಡವಾಗಿತ್ತು. ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದ ಮತಗಟ್ಟೆ ಸಂಖ್ಯೆ 218ರಲ್ಲಿ ಮತಯಂತ್ರ ಕೈಕೊಟ್ಟಿತ್ತು. ಈ ವೇಳೆ ಬೆಳಗ್ಗೆ 7 ಕ್ಕೆ ಮತಗಟ್ಟೆಗೆ ಆಗಮಿಸಿದ್ದ ಸಚಿವ ಪುಟ್ಟರಂಗಶೆಟ್ಟಿ ಒಂದೂವರೆ ಗಂಟೆ ತಡವಾಗಿ ಮತದಾನ ಮಾಡುವಂತಾಯಿತು.

ತಡವಾಗಿ ಆರಂಭವಾದ ಮತದಾನ

ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರಿನ 2 ಮತಗಟ್ಟೆಗಳಲ್ಲಿ ಕೂಡ ಮತದಾನ ಒಂದು ತಾಸು ತಡವಾಗಿ ಆರಂಭವಾಗಿತ್ತು. ಸಖಿ ಮತಟ್ಟೆ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ಮತಯಂತ್ರದ ಗೊಂದಲ ಕಾಣಿಸಿಕೊಂಡಿದ್ದರಿಂದ ಒಂದು ತಾಸು ಮತದಾನ ವಿಳಂಬ ಆಯಿತು. ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು ಮತದಾನಕ್ಕೆ ಅರ್ಧ ತಾಸು ಅಡ್ಡಿಯಾಯಿತು. ಬೊಮ್ಮಲಾಪುರ, ಕೊಡಸೋಗೆ, ಯಾನಗಳ್ಳಿ, ಬೊಮ್ಮನಹಳ್ಳಿ, ಅರಕಲವಾಡಿ ಸುತ್ತಮುತ್ತ ಗುಡುಗು-ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಇನ್ನು, ಹನೂರಿನಲ್ಲಿ 5.30 ಕ್ಕೆ ಜಡಿ ಮಳೆ ಹಿಡಿದಿದ್ದರಿಂದ ಕಡೇ ಅರ್ಧ ತಾಸು ಮತದಾರದು ಮತದಾನದಿಂದ ದೂರವೇ ಉಳಿದರು.

ಜನತಂತ್ರದ ಹಬ್ಬದಲ್ಲಿ ಕಪ್ಪುಚುಕ್ಕೆಯಾಗಿ ಹೆಚ್ಚುವರಿ ಚುನಾವಣಾಧಿಕಾರಿ ಶಾಂತಮೂರ್ತಿ ಹೃದಯಾಘಾತದಿಂದ ಮೃತಪಟ್ಟರು. ಮಿಕ್ಕಂತೆ ಜಿಲ್ಲಾದ್ಯಂತ ಶಾಂತಿಯುತವಾಗಿ ಮತದಾನ ನಡೆಯಿತು.

Intro:ಚಾಮರಾಜನಗರ ಲೋಕಸಮರ: ಶಾಂತಿಯುತ ಮತದಾನ

ಚಾಮರಾಜನಗರ:೨ನೇ ಹಂತದಲ್ಲಿ ಒಳಪಟ್ಟಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆ ಮುಕ್ತಾಯವಾಗಿದ್ದು ಅಂದಾಜು ಶೇ.೭೩ ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

Body:2205 ಮತಗಟ್ಟೆ ಅಧಿಕಾರಿಗಳು, 2,205 ಸಹಾಯಕ ಅಧಿಕಾರಿಗಳು, 4410 ಮತದಾನ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.ವಿಶೇಚವಾಗಿ ೧೦ ಸಖಿ ಮತಗಟ್ಟೆಗಳು, ೪ ಸಾಂಪ್ರದಾಯಿಕ ಮತಗಟ್ಟೆಯನ್ನು ತೆರೆಯಲಾಗಿತ್ತು.

ಸಾಂಪ್ರದಾಯಿಕ ಮತಗಟ್ಟೆ:
ಗಿರಿಜನರು ತಮ್ಮ ಹಕ್ಕು ಚಲಾಯಿಸಲು ಪ್ರೇರೆಪಿಸಲು ೪ ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 36 ಸಾವಿರ ಸೋಲಿಗರು, ಕಾಡುಕುರುಬ, ಜೇನುಕುರುಬ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ. ಇದರಲ್ಲಿ 23 ಸಾವಿರ ಮಂದಿ ಮತದಾರರಿದ್ದಾರೆ. ಭಾರತ ಚುನಾವಣಾ ಆಯೋಗದ ಆದೇಶದಂತೆ ಈ ಬಾರಿ ಬುಡಕಟ್ಟು ಜನಾಂಗದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚು ಮಾಡುವ ದೃಷ್ಟಿಯಿಂದ ಜಿಲ್ಲಾ ಚುನಾವಣಾ ಆಯೋಗವು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಕೆ.ಗುಡಿ ಆಶ್ರಮಶಾಲೆ, ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಪುರಾಣೀ ಪೋಡು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮದ್ದೂರು ಕಾಲೋನಿ ಗಿರಿಜನ ಆಶ್ರಮ ಶಾಲೆ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಕೋಣನಕೆರೆ ಗಿರಿಜನ ಆಶ್ರಮ ಶಾಲೆಯಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ಎಂದಿನಂತೆ ಗಿರಿಜನರು ಸೋಲಿಗರು, ಕಾಡುಕುರುಬರು, ಜೇನುಕುರುಬರ ಸಂಸ್ಕೃತಿಯನ್ನು ಬಿಂಬಿಸುವ ತಳಿರು ತೋರಣಗಳಿಂದ ಮತಗಟ್ಟೆಯನ್ನು ಚಪ್ಪರದಿಂದ ಶೃಂಗರಿಸಿದ್ದರಲ್ಲದೇ, ಮತಗಟ್ಟೆಗೆ ತಮ್ಮದೇ ಆದ ಸಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ತೊಟ್ಟು, ಗೊರುಕನ ನೃತ್ಯದ ಮೂಲಕ ಮತದಾನ ಕೇಂದ್ರಕ್ಕೆ ತೆರಳಿ, ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಜಿಲ್ಲೆಯಲ್ಲಿ ಸ್ಥಾಪಿಸಿದ್ದ
ಸಖಿ ಮತಗಟ್ಟೆಗಳಲ್ಲಿ ಮೊದಲ ೧೦೦ ಮತದಾರರಿಗೆ ಗಿಡಗಳನ್ನು ನೀಡುವ ಮೂಲಕ ವಿಶಿಷ್ಟತೆ ಮೆರೆಯುವ ಜೊತೆಗೆ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು.

ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು:

ಚಾಮರಾಜನಗರ ತಾಲೂಕಿನ ಆಲೂರು ಗ್ರಾಮ ಹಾಗೂ ಮಲೆಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ದೊಡ್ಡಾಣೆ,ತೋಕೆರೆ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಲಾಯಿತು.

ಸುವರ್ಣಾವತಿ ಜಲಾಶಯದಿಂದ ನೀರು ಬಿಡದಿರುವುದರಿಂದ ಆಲೂರು ಗ್ರಾಮದ ೮೦೦ ಕ್ಕೂ ಹೆಚ್ಚು ಮಂದಿ ಮತದಾನದಿಂದ ದೂರ ಉಳಿದರು.

ಇನ್ನು, ಮಲೆಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ದೊಡ್ಡಾಣೆ ಹಾಗೂ ತೋಕೆರೆ ಗ್ರಾಮಕ್ಕೆ ಮೂಲಸೌಕರ್ಯ ನೀಡಿಲ್ಲ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮ್ಮ ಕಷ್ಟ ಕೇಳದಿದ್ದ ಮೇಲೆ ಮತದಾನ ಏಕೆ ಮಾಡಬೇಕು ಎಂದು ಮತದಾನ ಪ್ರಕ್ರಿಯೆಯಿಂದ ದೂರ ಉಳಿದರು.

ವೈರಲ್ ಆದ ಮತದಾನದ ಫೋಟೋ:

ಮತಗಟ್ಟೆಗೆ ಮೊಬೈಲ್ ನಿಷೇಧವಿದ್ದರೂ ಕದ್ದುಮುಚ್ಚಿ ತಮ್ಮಿಚ್ಛೆಯ ಅಭ್ಯರ್ಥಿಗೆ ಮತ ಹಾಕಿರುವ ಫೋಟೋಗಳನ್ನು ಮತದಾರರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆಯೂ ಈ ಬಾರಿ ನಡೆಯಿತು.

ಕೈ ಅಭ್ಯರ್ಥಿ ಧ್ರುವನಾರಾಯಣಗೆ ಮತ ಹಾಕುತ್ತಿರುವ ೪-೫ ಫೋಟೋಗಳು ಜಿಲ್ಲಾ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡಿದವು.

ಕೈಕೊಟ್ಟ ಇವಿಎಂ ಹಾಗೂ ಮಳೆ ಅಡ್ಡಿ:

ವಿವಿಧೆಡೆ ಮತಯಂತ್ರಗಳು ಕೈಕೊಟ್ಟು ೧೫ ನಿಮಿಷದಿಂದ ಒಂದೂವರೆ ತಾಸಿನವರೆಗೂ ಮತದಾನ ತಡವಾದ ಘಟನೆ ನಡೆಯಿತು.

ಸಚಿವ
ಪುಟ್ಟರಂಗಶೆಟ್ಟಿ ಅವರಿಗೆ ಮತಯಂತ್ರ ಕೈಕೊಟ್ಟ ಘಟನೆ ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದ ಮತಗಟ್ಟೆ ಸಂಖ್ಯೆ ೨೧೮ರಲ್ಲಿ ನಡೆಯಿತು.

ಉಳಿದಂತೆ,

ಬೆಳಗ್ಗೆ ೭ ಕ್ಕೆ ಆಗಮಿಸಿದ ಸಚಿವ ಪುಟ್ಟರಂಗಶೆಟ್ಟಿ ಮತದಾನ ಮಾಡಲು ಆಗಮಿಸಿದ್ದು ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡು ಒಂದೂವರೆ ತಾಸಿನ ಬಳಿಕ ಮತದಾನ ಆರಂಭವಾಗಿದೆ.

ಚಿಕ್ಕತುಪ್ಪೂರಿನಲ್ಲೂ ತಡ:

ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರಿನ ೨ ಮತಗಟ್ಟೆಗಳಲ್ಲಿ ಕೂಡ ಒಂದು ತಾಸು ತಡವಾಗಿ ಆರಂಭವಾಗಿದೆ.

ಸಖಿ ಮತಟ್ಟೆ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ಮತಯಂತ್ರದ ಗೊಂದಲ ಕಾಣಿಸಿಕೊಂಡಿದ್ದರಿಂದ ಒಂದು ತಾಸು ಮತದಾನ ತಡವಾಗಿ ಆರಂಭಗೊಂಡಿದೆ.

ಉಳಿದಂತೆ,
ಚಾಮರಾಜನಗರ ತಾಲೂಕಿನ
ಎಚ್‌.ಮೂಕಳ್ಳಿ,
ಯರಕನಗದ್ದೆ,ಸಂತೇಮರಹಳ್ಳಿ,
ಕೊಳ್ಳೇಗಾಲ ತಾಲೂಕಿನ ಗೀತಾ ಶಾಲೆ , ಆರ್ ಎಂಸಿ ( ಮತಗಟ್ಟೆ ಸಂಖ್ಯೆ ೧೩೧ ), ಬಿಎಂ ಎಚ್ ವಿ ( ಮತಗಟ್ಟೆ ಸಂಖ್ಯೆ ೧೬೦ ) ( ೧ ಮತದ ಬಳಿಕ ೧ ತಾಸು ತಡ) ,ಭೀಮನಗರ ( ಮತಗಟ್ಟೆ ಸಂಖ್ಯೆ ೧೨೦ ) , ನರೀಪುರ , ಮಧುವನಹಳ್ಳಿ ಯಳಂದೂರು ತಾಲೂಕಿನ ಗಣಿಗನೂರು, ವೈ‌ಕೆಮೋಳೆ, ದುಗ್ಗಟ್ಟಿ, ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು, ತೆರಕಣಾಂಬಿ
, ಕೆಲಸೀಪುರ , ಶೀಲವಂತಪುರ , ಕೂತನೂರು, ಶಿಂಡನಪುರದಲ್ಲಿ ಮತದಾನ ತಡವಾಗಿ ಆರಂಭವಾಯಿತು.

ಗುಂಡ್ಲುಪೇಟೆ ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು ಮತದಾನಕ್ಕೆ ಅರ್ಧ ತಾಸು ಅಡ್ಡಿಯಾಯಿತು. ಬೊಮ್ಮಲಾಪುರ, ಕೊಡಸೋಗೆ, ಯಾನಗಳ್ಳಿ, ಬೊಮ್ಮನಹಳ್ಳಿ, ಅರಕಲವಾಡಿ ಸುತ್ತಮುತ್ತ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಯಿತು. ಇನ್ನು, ಹನೂರಿನಲ್ಲಿ ೫.೩೦ ಕ್ಕೆಜಡಿ ಮಳೆ ಹಿಡಿದಿದ್ದರಿಂದ ಕಡೇ ಅರ್ಧ ತಾಸು ಮತದಾರದು ಮತದಾನದಿಂದ ದೂರವೇ ಉಳಿದರು.

ಜನತಂತ್ರದ ಹಬ್ಬದಲ್ಲಿ ಕಪ್ಪುಚುಕ್ಕೆಯಾಗಿ ಹೆಚ್ಚುವರಿ ಚುನಾವಣಾ ಅಧಿಕಾರಿ ಶಾಂತಮೂರ್ತಿ ಹೃದಯಾಘಾತದಿಂದ ಮೃತಪಟ್ಟರು. ಮಿಕ್ಕಂತೆ ಜಿಲ್ಲಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ.Conclusion:ಜನರು ತಮ್ಮ ತೀರ್ಪನ್ನು ಮತಯಂತ್ರದಲ್ಲಿ ಅಡಗಿಸಿದ್ದು ಇವಿಎಂಗಳನ್ನು ಸ್ಟ್ರಾಂಗ್ ರೂಂನಲ್ಲಿ ಭದ್ರಪಡಿಸಿಡಲಾಗಿದೆ.ಮೇ ೨೩ಕ್ಕೆ ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.