ETV Bharat / elections

ಬಾಬುರಾವ್ ಚಿಂಚನಸೂರ ಅಸಮರ್ಥ ನಾಯಕ: ಪ್ರಿಯಾಂಕ ಖರ್ಗೆ - kannada news

ಯಾವುದೇ ಅಭಿವೃದ್ಧಿ ಕೆಲಸ ಮಾಡದ ಬಾಬುರಾವ್ ಚಿಂಚನಸೂರ ಅವರನ್ನು ಜನರು ಹೀನಾಯವಾಗಿ ಸೋಲಿಸಿ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದರು.

ಸಮಾಜ ಕಲ್ಯಾಣ ಸಚಿವ ಪ್ರೀಯಾಂಕ ಖರ್ಗೆ
author img

By

Published : Apr 12, 2019, 10:16 PM IST

ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಒಬ್ಬ ಅಸಮರ್ಥ ನಾಯಕ ಎಂದು ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಅವರು ಮಾತನಾಡಿದರು.

ಲೋಕಸಭಾ ಚುನಾವಣೆ ಪ್ರಚಾರಕ್ಕೆ ಯಾದಗಿರಿಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಬಂದಳ್ಳಿಗೆ ಆಗಮಿಸಿದ ಖರ್ಗೆ, ಬಾಬುರಾವ್ ಚಿಂಚನಸೂರ ಗುರುಮಿಠಕಲ್ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕೆಲಸ ಮಾಡಲಿಲ್ಲ. ಪರಿಣಾಮ ಇಲ್ಲಿನ ಜನರು ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ

ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದ ಉಮೇಶ ಜಾಧವ, ಆಪರೇಶನ್ ಕಮಲಕ್ಕೆ ಬಲಿಯಾಗಿದ್ದಾರೆ. ಕುದುರೆ ವ್ಯಾಪಾರ ಮಾಡಿ ಜಾಧವ್‌ರನ್ನು ದುಡ್ಡು ಕೊಟ್ಟು ಬಿಜೆಪಿಯವರು ಖರೀದಿಸಿದ್ದಾರೆ. ಇವರು ದುಡ್ಡು ತೆಗೆದುಕೊಂಡಿಲ್ಲ ಎಂದು ಪ್ರಚಾರದ ವೇಳೆ ಹೇಳಿಕೊಂಡರೆ ಜನರಿಗೆ ಗೊತ್ತಾಗದೆ ಇರುತ್ತದೆಯೇ..? ಈ ಬಾರಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಈಗ ತಾನೆ ಬಿಜೆಪಿಗೆ ಸೇರ್ಪಡೆಯಾದ ಮಾಲಕ ರೆಡ್ಡಿಯವರು ಪ್ರಬುದ್ಧರು ಮಾತ್ರವಲ್ಲ, ಮಹಾಮುತ್ಸದ್ಧಿಗಳು. ಅವರು ಪಕ್ಷಬಿಟ್ಟು ಹೋಗಬಾರದಿತ್ತು. ಆದ್ರೆ ಅವರು ಬಿಜೆಪಿಗೆ ಹೋಗಿರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಾಗಿಲ್ಲ ಎಂದು ಪ್ರಿಯಾಂಕ ಖರ್ಗೆ ತಿಳಿಸಿದರು.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎವಿ
ಸ್ಲಗ್ : ಬಾಬುರಾವ ವಿರುದ್ದ ವಾಗ್ದಾಳಿ.

ನಿರೂಪಕ : ಯಾದಗಿರಿ ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಮಾಜಿ ಮಂತ್ರಿ ಬಾಬುರಾವ ಚಿಂಚನಸೂರ ವಿರುದ್ದ ಸಮಾಜ ಕಲ್ಯಾಣ ಸಚಿವ ಪ್ರೀಯಾಂಕ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

Body:ಲೋಕಸಭಾ ಚುನಾವಣೆ ಪ್ರಚಾರಕ್ಕೆಂದು ಯಾದಗಿರಿಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರವಾದ ಬಂದಳ್ಳಿಗೆ ಆಗಮಿಸಿದ ಪ್ರೀಯಾಂಕ ಖರ್ಗೆ ಬಾಬುರಾವ ಚಿಂಚನಸೂರ ಅಸಮರ್ಥ ನಾಯಕ. ಇವರು ಗುರುಮಿಠಕಲ್ ಕ್ಷೇತ್ರದಲ್ಲಿ ಯಾವುದೆ ಅಭಿವೃದ್ದಿ ಕೆಲಸ ಮಾಡದ ಪರಿಣಾಮ ಜನರು ಹೀನಾಯವಾಗಿ ಸೋಲಿಸಿದ್ದಾರೆ . ಅವರು ಅಸಮರ್ಥ ಮಂತ್ರಿಗಾಳಾಗಿದ್ದರು,, ಹೀಗಾಗಿ ಅವರನ್ನು ತೆಗೆದು ನಮ್ಮಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಸಮರ್ಥನೆ ನೀಡಿದರು.

Conclusion:
ಉಮೇಶ ಜಾಧವ ಅಮರೇಶನ ಕಮಲಕ್ಕೆ ಬಲಿಯಾಗಿದ್ದಾನೆ. ಕುದರೆ ವ್ಯಾಪಾರ ಮಾಡಿ ಉಮೇಶ ಜಾಧವನನ್ನು ದುಡ್ಡು ಕೊಟ್ಟು ಬಿಜೆಪಿಯವರು ಖರಿದಿಸಿದ್ದಾರೆ. ಇವರು ದುಡ್ಡು ತೆಗೆದುಕೊಂಡಿಲ್ಲ ಎಂದು ಸಮರ್ಥಿಸಿಕೊಂಡ್ರು ನಮ್ಮವ್ವಾಣೆ, ನಮ್ಮಪ್ಪಾಣೆ, ನನ್ನ ಹೆಂಡ್ತಿ ಆಣೆ ಎಂದು ಹೇಳಿಕೊಂಡು ಪ್ರಚಾರ ಮಾಡಿದ್ರೆ ಜನರಿಗೆ ಗೊತ್ತಗಲೇನು. ಜನರು ಒಳ್ಳೆಯ ತಕ್ಕ ಪಾಠ ಕಲಿಸುತ್ತಾರೆ ಎಂದು ವ್ಯಂಗವಾಡಿದರು.

ಈಗ ತಾನೆ ಬಿಜೆಪಿಗೆ ಸೇರ್ಪಡೆಯಾದ ಮಾಲಕ ರೆಡ್ಡಿಯವರು ಪ್ರಬುದ್ಧರು. ಹಿರಿಯ ಮುಖಂಡರು, ಮಹಾಮುತ್ಸದಿಗಳು ಪಕ್ಷಬಿಟ್ಟು ಹೋಗಬಾರದಿತ್ತು. ಆದ್ರೆ ಹೋಗಿರುವುದರಿಂದ ಯಾವುದೆ ನಷ್ಟ ಆಗಿಲ್ಲ ಎಂದು ಸಮಾಜ‌ಕಲ್ಯಾಣ ಸಚಿವ ಪ್ರೀಯಾಂಕ ಖರ್ಗೆ ತಿಳಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.