ಪಶ್ಚಿಮ ಬಂಗಾಲ: ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬ ಮೃತಪಡ್ತಿದ್ದಂತೆ,ಕಿಡಿಗೇಡಿಗಳು ಮತಗಟ್ಟೆಯ ಸಮೀಪ ಬಾಂಬ್ ಎಸೆದು ಪರಾರಿಯಾಗಿದ್ದಾರೆ.
ಇಲ್ಲಿನ ಮುರ್ಷಿದಾಬಾದ್‌ನ ರಾಣಿನಗರದಲ್ಲಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ದೃಶ್ಯವಿದೆ. ಮತಗಟ್ಟೆ ಸಮೀಪ ಬಾಂಬ್ ಎಸೆದ ವ್ಯಕ್ತಿಯೊಬ್ಬನ ಜೊತೆ, ನಾಲ್ಕೈದು ಮಂದಿ ಓಡಿ ಹೋಗುತ್ತಿರುವುದು ಕಂಡುಬಂದಿದೆ.
ಇದಕ್ಕೂ ಮುನ್ನ, ಇದೇ ಮುರ್ಷಿದಾಬಾದ್‌ನ ಬಲಿಗ್ರಾಮ್‌ನಲ್ಲಿ ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ 'ಕೈ' ಮತ್ತು ಟಿಎಂಸಿ ಘರ್ಷಣೆಗೆ ಬಲಿಯಾಗಿದ್ದ.