ETV Bharat / elections

ಮಧ್ಯಪ್ರದೇಶ ಸಿಎಂ ಪುತ್ರನ ಆಸ್ತಿ ಅಪ್ಪನಿಗಿಂತ ಬರೋಬ್ಬರಿ ಐದು ಪಟ್ಟು ಹೆಚ್ಚು..! - ಚಿಂದ್ವಾರ

ಅಫಿಡವಿಟ್​​ನಲ್ಲಿ ಉಲ್ಲೇಖಿಸಿರುವ ನಕುಲ್​ ನಾಥ್​ ಆಸ್ತಿ ತಂದೆ ಕಮಲ್​ನಾಥ್​ ಆಸ್ತಿಗಿಂತ ಬರೋಬ್ಬರಿ ಐದು ಪಟ್ಟು ಹೆಚ್ಚಳ ಎನ್ನುವುದು ಗಮನಾರ್ಹ ಸಂಗತಿ. ಕಮಲ್​ನಾಥ್​ ಆಸ್ತಿ ಕೇವಲ 124 ಕೋಟಿ ಎನ್ನುವುದನ್ನ ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದರು.

ನಕುಲ್​ ನಾಥ್
author img

By

Published : Apr 10, 2019, 8:07 AM IST

Updated : Apr 10, 2019, 8:15 AM IST

ಚಿಂದ್ವಾರ: ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ ಪುತ್ರ ನಕುಲ್​ ನಾಥ್ ಚಿಂದ್ವಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸುತ್ತಿದ್ದು ಮಂಗಳವಾರ ತಮ್ಮ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ ಬಹಿರಂಗವಾಗಿದೆ.

ನಾಮಪತ್ರ ಸಲ್ಲಿಕೆಯ ವೇಳೆ ನಕುಲ್​ ನಾಥ್​ ತಮ್ಮ ಆಸ್ತಿ ವಿವರ ಸಲ್ಲಿಸಿದ್ದು ಒಟ್ಟಾರೆ ಆಸ್ತಿ 660.01 ಕೋಟಿ ಎಂದು ಹೇಳಿಕೊಂಡಿದ್ದಾರೆ.

ಅಫಿಡವಿಟ್​​ನಲ್ಲಿ ಉಲ್ಲೇಖಿಸಿರುವ ನಕುಲ್​ ನಾಥ್​ ಆಸ್ತಿ ತಂದೆ ಕಮಲ್​ನಾಥ್​ ಆಸ್ತಿಗಿಂತ ಬರೋಬ್ಬರಿ ಐದು ಪಟ್ಟು ಹೆಚ್ಚಳ ಎನ್ನುವುದು ಗಮನಾರ್ಹ ಸಂಗತಿ. ಕಮಲ್​ನಾಥ್​ ಆಸ್ತಿ ಕೇವಲ 124 ಕೋಟಿ ಎನ್ನುವುದನ್ನ ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದರು.

Son
ತಂದೆಯೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ ನಕುಲ್​ ನಾಥ್​

ಉದ್ಯಮ ರಂಗದಿಂದ ರಾಜಕೀಯ ಅಖಾಡಕ್ಕೆ ಎಂಟ್ರಿ ನೀಡಿರುವ ನಕುಲ್​ ನಾಥ್​ 615.93 ಕೋಟಿ ಆಸ್ತಿ ಹೊಂದಿದ್ದರೆ ಪತ್ನಿ ಪ್ರಿಯಾ 2.30 ಕೋಟಿ ಆಸ್ತಿಗೆ ಒಡತಿಯಾಗಿದ್ದಾಳೆ. ಇಷ್ಟೆಲ್ಲಾ ಆಸ್ತಿ ಹೊಂದಿದ್ದರೂ ನಕುಲ್ ಹಾಗೂ ಪತ್ನಿ ಪ್ರಿಯಾ ಯಾವುದೇ ಸ್ವಂತ ವಾಹನವನ್ನು ಹೊಂದಿಲ್ಲ ಎನ್ನುವುದು ಅಚ್ಚರಿಯ ವಿಚಾರ.

ನಕುಲ್​ ನಾಥ್​ ಹಲವಾರು ಉದ್ಯಮಗಳಲ್ಲಿ ತಮ್ಮ ಷೇರುಗಳನ್ನು ಹೊಂದಿದ್ದಾರೆ. ಚಿಂದ್ವಾರ ಜಿಲ್ಲೆಯಲ್ಲಿ ನಕುಲ್ ಹಾಗೂ ಆತನ ಸಹೋದರ ಜಂಟಿಯಾಗಿ 7.82 ಎಕರೆಯ ಭೂಮಿಯನ್ನು ಹೊಂದಿದ್ದಾರೆ ಎನ್ನುವುದೂ ಅಫಿಡವಿಟ್​ನಲ್ಲಿ ಇದೆ.

ಮೊದಲ ಬಾರಿಗೆ ಚುನಾವಣೆ ಸ್ಪರ್ಧೆ ಮಾಡುತ್ತಿರುವ ನಕುಲ್​ ನಾಥ್, ಅಮೆರಿಕದ ಬೇ ಸ್ಟೇ ಕಾಲೇಜ್​​ನಿಂದ ವಾಣಿಜ್ಯ ಆಡಳಿತ(ಬ್ಯುಸಿನೆಸ್​ ಅಡ್ಮಿನಿಸ್ಟ್ರೇಷನ್​)ದಲ್ಲಿ ಪದವಿ ಪಡೆದಿದ್ದಾರೆ. ನಕುಲ್​ ನಾಥ್​​​ ವಿರುದ್ಧ ಚಿಂದ್ವಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬುಡಕಟ್ಟು ನಾಯಕ ನಥನ್ ಶಾ ಕಣಕ್ಕಿಳಿದಿದ್ದಾರೆ.​

Intro:Body:

ಮಧ್ಯಪ್ರದೇಶ ಸಿಎಂ ಪುತ್ರನ ಆಸ್ತಿ ಅಪ್ಪನಿಗಿಂದ ಬರೋಬ್ಬರಿ ಐದು ಪಟ್ಟು ಹೆಚ್ಚು..!

ಚಿಂದ್ವಾರ: ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ ಪುತ್ರ ನಕುಲ್​ ನಾಥ್ ಚಿಂದ್ವಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸುತ್ತಿದ್ದು ಮಂಗಳವಾರ ತಮ್ಮ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ ಬಹಿರಂಗವಾಗಿದೆ.

ನಾಮಪತ್ರ ಸಲ್ಲಿಕೆಯ ವೇಳೆ ನಕುಲ್​ ನಾಥ್​ ತಮ್ಮ ಆಸ್ತ ವಿವರ ಸಲ್ಲಿಸಿದ್ದು ಒಟ್ಟಾರೆ ಆಸ್ತಿ 660.001 ಕೋಟಿ ಎಂದು ಹೇಳಿಕೊಂಡಿದ್ದಾರೆ.

ಅಫಿಡವಿಟ್​​ನಲ್ಲಿ ಉಲ್ಲೇಖಿಸಿರುವ ನಕುಲ್​ ನಾಥ್​ ಆಸ್ತಿ ತಂದೆ ಕಮಲ್​ನಾಥ್​ ಆಸ್ತಿಗಿಂತ ಬರೋಬ್ಬರಿ ಐದು ಪಟ್ಟು ಹೆಚ್ಚಳ ಎನ್ನುವುದು ಗಮನಾರ್ಹ ಸಂಗತಿ. ಕಮಲ್​ನಾಥ್​ ಆಸ್ತಿ ಕೇವಲ 124 ಕೋಟಿ ಎನ್ನುದನ್ನ ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದರು.

ಉದ್ಯಮರಂಗದಿಂದ ರಾಜಕೀಯ ಅಖಾಡಕ್ಕೆ ಎಂಟ್ರಿ ನೀಡಿರುವ ನಕುಲ್​ ನಾಥ್​ 615.93 ಕೋಟಿ ಆಸ್ತಿ ಹೊಂದಿದ್ದರೆ ಪತ್ನಿ ಪ್ರಿಯಾ 2.30 ಕೋಟಿ ಆಸ್ತಿಗೆ ಒಡತಿಯಾಗಿದ್ದಾಳೆ. ಇಷ್ಟೆಲ್ಲಾ ಆಸ್ತಿ ಹೊಂದಿದ್ದರೂ ನಕುಲ್ ಹಾಗೂ ಪತ್ನಿ ಪ್ರಿಯಾ ಯಾವುದೇ ಸ್ವಂತ ವಾಹನವನ್ನು ಹೊಂದಿಲ್ಲ ಎನ್ನುವುದು ಅಚ್ಚರಿಯ ವಿಚಾರ.

ನಕುಲ್​ ನಾಥ್​ ಹಲವಾರು ಉದ್ಯಮಗಳಲ್ಲಿ ತಮ್ಮ ಷೇರುಗಳನ್ನು ಹೊಂದಿದ್ದಾರೆ. ಚಿಂದ್ವಾರ ಜಿಲ್ಲೆಯಲ್ಲಿ ನಕುಲ್ ಹಾಗೂ ಆತನ ಸಹೋದರ ಜಂಟಿಯಾಗಿ 7.82 ಎಕರೆಯ ಭೂಮಿಯನ್ನು ಹೊಂದಿದ್ದಾರೆ ಎನ್ನುವುದೂ ಅಫಿಡವಿಟ್​ನಲ್ಲಿ ಇದೆ.

ಮೊದಲ ಬಾರಿಗೆ ಚುನಾವಣೆ ಸ್ಪರ್ಧೆ ಮಾಡುತ್ತಿರುವ ನಕುಲ್​ ನಾಥ್, ಅಮೆರಿಕದ ಬೇ ಸ್ಟೇ ಕಾಲೇಜ್​​ನಿಂದ ವಾಣಿಜ್ಯ ಆಡಳಿತ(ಬ್ಯುಸಿನೆಸ್​ ಅಡ್ಮಿನಿಸ್ಟ್ರೇಷನ್​)ದಲ್ಲಿ ಪದವಿ ಪಡೆದಿದ್ದಾರೆ. ನಕುಲ್​ ನಾಥ್​​​ ವಿರುದ್ಧ ಚಿಂದ್ವಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬುಡಕಟ್ಟು ನಾಯಕ ನಥನ್ ಶಾ ಕಣಕ್ಕಿಳಿದಿದ್ದಾರೆ.​

Conclusion:
Last Updated : Apr 10, 2019, 8:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.