ನವದೆಹಲಿ: ಇದೇ ಮೊದಲ ಬಾರಿಗೆ ಮತಗಟ್ಟೆ ಕೇಂದ್ರಗಳ ಸುತ್ತಮುತ್ತಲ ಜಾಗಗಳ ಮೇಲೆ ಹದ್ದಿನ ಕಣ್ಣಿಡಲು ಚುನಾವಣಾ ಆಯೋಗ ಡ್ರೋಣ್ ಬಳಕೆ ಮಾಡುತ್ತಿದೆ.
ನಕ್ಸಲ್ ಪೀಡಿತ ರಾಜ್ಯಗಳ ಮತಗಟ್ಟೆ ಕೇಂದ್ರಗಳ ಬಳಿ ಅನಾಹುತಗಳು ಸಂಭವಿಸುವ ಅಪಾಯ ಇರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಡ್ರೋಣ್ಗಳನ್ನು ಬಳಕೆ ಮಾಡಲಾಗುತ್ತಿದೆ.
ಪ್ರಕ್ಷುಬ್ದಪೀಡಿತ ರಾಜ್ಯಗಳಲ್ಲಿ ಒಟ್ಟು ಹತ್ತು ಸಾವಿರ ಯೋಧರು ಕಾರ್ಯ ನಿರ್ವಹಿಸುತ್ತಿದ್ದು, ಡ್ರೋಣ್ ಬಳಕೆ ಸಿಬ್ಬಂದಿಗೆ ನೆರವಾಗಲಿದೆ.
ಒಟ್ಟು 163 ಕೇಂದ್ರಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದ್ದು, ಹದಿಮೂರು ಡ್ರೋಣ್ಗಳನ್ನು ಬಳಸಿ ಕೇಂದ್ರಗಳ ಸುತ್ತಮುತ್ತ ನಡೆಯುವ ಚಲನವಲನಗಳ ಮೇಲೆ ಕಣ್ಣಿಡಲಾಗಿದೆ.