ETV Bharat / crime

ಪ್ರಿಯಕರನ ಜೊತೆ ಸೇರಿ ಪುತ್ರನ ಹತ್ಯೆಗೈದ ತಾಯಿ; ಮೂವರು ಆರೋಪಿಗಳ ಬಂಧನ - ಕುಷ್ಟಗಿ ಕ್ರೈಮ್‌ ನ್ಯೂಸ್‌

ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ 22 ವರ್ಷದ ಪುತ್ರನನ್ನು ಪ್ರಿಯಕರನೊಂದಿಗೆ ಸೇರಿಕೊಂಡು ತಾಯಿಯೇ ಹತ್ಯೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿತ್ತು. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

young boy murder in kustagi, koppal district
ಕಾಮತೃಷೆಗೆ ಅಡ್ಡಿ ಅಂತ ಪ್ರಿಯಕರೊಂದಿಗೆ ಸೇರಿ ಪುತ್ರನನ್ನೇ ಹತ್ಯೆ ಮಾಡಿದ ಪಾಪಿ ತಾಯಿ; ಆರೋಪಿಗಳು ಬಂಧನ
author img

By

Published : Mar 2, 2022, 2:56 PM IST

Updated : Mar 2, 2022, 3:19 PM IST

ಕುಷ್ಟಗಿ: ಪ್ರಿಯಕರನೊಂದಿಗೆ ಸೇರಿಕೊಂಡು ಹೆತ್ತಾಕೆಯೇ ತನ್ನ ಮಗನನ್ನು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ‌ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಯಾದ ಯುವಕ ಬಸವರಾಜ ಶರಣಪ್ಪ ದೋಟಿಹಾಳ (22). ಕಳೆದ ಜ.16ರಂದು ಈತ ಕಾಣೆಯಾಗಿದ್ದ. ಈ ಬಗ್ಗೆ ಇತ್ತೀಚೆಗೆ ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ತನಿಖೆ ನಡೆದಿದ್ದು, ಕೊಲೆ ಎಂದು ತಿಳಿದುಬಂದಿತ್ತು.

ಅದೇ ಗ್ರಾಮದ ಗ್ರಾ.ಪಂ ಸದಸ್ಯ ಅಮರಪ್ಪ ಕಂದಗಲ್ ಕೊಲೆಯಾದ ಬಸವರಾಜ ಶರಣಪ್ಪ ಅವರ ತಾಯಿ ಅಮರಮ್ಮ ಜೊತೆ ಕಳೆದ 10 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದನಂತೆ. ಬಸವರಾಜ ಇದನ್ನು ವಿರೋಧಿಸುತ್ತಲೇ ಬಂದಿದ್ದ. ಆಗಾಗ ಇದೇ ವಿಚಾರವಾಗಿ ಜಗಳವೂ ಆಗುತ್ತಿತ್ತು.

ಬಸವರಾಜ ಜ.16ರಂದು ರಾತ್ರಿ 12ರ ಸುಮಾರಿಗೆ ಮನೆಗೆ ಬಂದಾಗ ಅಲ್ಲೇ ಇದ್ದ ಅಮರಪ್ಪ ಕಂದಗಲ್‌ನನ್ನು ನಮ್ಮ ಮನೆಗೇಕೆ ಬಂದಿದ್ದಿಯಾ ಎಂದು ಪ್ರಶ್ನಿಸಿದ್ದಕ್ಕೆ ಸಿಟ್ಟಾದ ತಾಯಿ ಅಮರಮ್ಮ, ಸಹೋದರ ಅಮರೇಶ ಹಾಗೂ ಅಮರಪ್ಪ ಮೂವರು ಸೇರಿ ಬಸವರಾಜ್‌ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು.

ನಂತರ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಪ್ರಿಯಕರ ಅಮರಪ್ಪ ಹಾಗೂ ಸಹೋದರ ಅಮರೇಶ ಬೈಕ್ ಮೂಲಕ ಹೊಲಕ್ಕೆ ಹೊತ್ತೊಯ್ದು ಹೂತು ಹಾಕಿದ್ದಾರೆಂದು ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಲಾಡ್ಜ್​ಗಳಲ್ಲಿ ಹೈಟೆಕ್​ ವೇಶ್ಯಾವಾಟಿಕೆ: ನಾಲ್ವರ ಬಂಧನ

Last Updated : Mar 2, 2022, 3:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.