ETV Bharat / crime

ಗಂಡನ ಬಿಟ್ಟು ಪ್ರೇಮಿ​ ಕೈ ಹಿಡಿದ್ಲು.. ಕೊನೆಗೆ ಕೈ ಕೊಟ್ಟ ಲವರ್: ಮೂರು ಮಕ್ಕಳಿಗೆ ವಿಷವುಣಿಸಿದ ತಾಯಿ... ಅತ್ತ ಪತಿಗಾಗಿದ್ದೇನು? -

ತ್ರಿಕೋನ ಪ್ರೇಮ ಪ್ರಕರಣವೊಂದು ದುರಂತ್ಯ ಕಂಡಿದೆ. ಆಕೆಗೆ 12 ವರ್ಷಗಳ ಹಿಂದೆ ಮದುವೆಯಾಗಿ ಮೂರು ಮಕ್ಕಳಿದ್ರೂ ಗಂಡನ ಬಿಟ್ಟು ಮತ್ತೊಬ್ಬನ ಜೊತೆ ಓಡಿ ಹೋಗಿ ಮೋಸ ಹೋದ ಘಟನೆ ತೆಲಂಗಾಣ ಜಿಲ್ಲೆಯ ನಿರ್ಮಲ್​ ಜಿಲ್ಲೆಯಲ್ಲಿ ನಡೆದಿದೆ.

women-suicide-attempt-with-baby-girl-at-nirmal-district
ತ್ರಿಕೋನ ಪ್ರೇಮ ಪ್ರಕರಣ
author img

By

Published : Aug 26, 2021, 7:57 PM IST

ನಿರ್ಮಲ್​( ತೆಲಂಗಾಣ): ಮಹಿಳೆಯೊಬ್ಬಳು ತನ್ನ ಮೂರು ಮಕ್ಕಳ ಜೊತೆ ಗಂಡನ ಬಿಟ್ಟು ಲವರ್​ ನಂಬಿ ಮನೆ ಬಿಟ್ಟು ಹೋಗಿದ್ದಾಳೆ. ಮತ್ತೆ ಮನೆಗೆ ವಾಪಸಾದ ಮಹಿಳೆ ತನ್ನ ಮೂರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಸಹಿತ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಾರಂಗಪೂರ್​ ತಾಲೂಕಿನ ಬೋರಿಗಾಂ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ..?

ಬೋರಿಗಾಂ ನಿವಾಸಿ ಪೋತನ್ನಗೆ ಮತ್ತು ಭೈಂಸಾ ತಾಲೂಕಿನ ಬೇಗಂ ಗ್ರಾಮದ ಮಹಿಳೆಯೊಬ್ಬಳ ಜೊತೆ 12 ವರ್ಷಗಳ ಹಿಂದೆ ಮದುವೆಯಾಗಿದೆ. ಇವರಿಗೆ ಮೂವರು ಮಕ್ಕಳು. ಸುಖವಾಗಿ ಸಾಗುತ್ತಿದ್ದ ಸಂಸಾರದಲ್ಲಿ ಬೋರಿಗಾಂ ನಿವಾಸಿ ಶ್ರೀನಿವಾಸ್​ ರೆಡ್ಡಿ ವಿಲನ್​ ಆಗಿದ್ದಾನೆ.

ಹೌದು, ಶ್ರೀಕಾಂತ್​​ ರೆಡ್ಡಿ ಜೊತೆ ಪೋತನ್ನನ ಪತ್ನಿ ವಿವಾಹೇತರ ಸಂಬಂಧ ನಡೆಸುತ್ತಿದ್ದಳು. ಈ ಸಂಗತಿ ಕುಟುಂಬಸ್ಥರಿಗೆ ತಿಳಿದಿದ್ದು, ಈ ವಿಷಯದ ಬಗ್ಗೆ ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದವು. ಈ ಬಗ್ಗೆ ಸ್ಥಳೀಯರು ಸಹ ಗಮನಿಸಿದ್ದಾರೆ.

ಈ ಭಾನುವಾರದಂದು ಆ ಮಹಿಳೆ ತನ್ನ ಮೂರು ಮಕ್ಕಳ ಮತ್ತು ಗಂಡನನ್ನು ಬಿಟ್ಟು ಲವರ್​ ಶ್ರೀಕಾಂತ್​​ ರೆಡ್ಡಿ ಜೊತೆ ಓಡಿ ಹೋಗಿದ್ದಾಳೆ. ಎರಡ್ಮೂರು ದಿನ ಬಳಿಕ ಶ್ರೀಕಾಂತ್​ ರೆಡ್ಡಿ ಆಕೆಯನ್ನು ಪೋತನ್ನನ ಮನೆ ಬಳಿ ಬಿಟ್ಟು ಹೋಗಿದ್ದಾನೆ. ನಾನು ಶ್ರೀಕಾಂತ್​ ರೆಡ್ಡಿಯಿಂದ ಮೋಸ ಹೋಗಿದ್ದೇನೆ ಎಂದು ತಿಳಿದು ತನ್ನ ಮೂರು ಮಕ್ಕಳಿಗೆ ವಿಷ ಕೊಟ್ಟು ಆಕೆಯೂ ವಿಷ ಸೇವಿಸಿದ್ದಾಳೆ.

ಕೂಡಲೇ ಸ್ಥಳೀಯರು ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಮೂರು ವರ್ಷದ ಮಗು ಮಾತ್ರ ಸಾವನ್ನಪ್ಪಿದ್ದು, ಉಳಿದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಂಡ್ತಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಮನಸ್ತಾಪಕ್ಕೆ ಗುರಿಯಾದ ಪೋತನ್ನ ನಾಪತ್ತೆಯಾಗಿದ್ದಾರೆ. ಕೆರೆಯೊಂದರ ಬಳಿ ಪೋತನ್ನನ ಬೈಕ್​ ಮತ್ತು ಚಪ್ಪಲಿ ಇರುವುದು ಸ್ಥಳೀಯರು ಗುರುತಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.