ತುಮಕೂರು: ತಮ್ಮ ಅನೈತಿಕ ಸಂಬಂಧ ಬಹಿರಂಗವಾದ ಹಿನ್ನೆಲೆಯಲ್ಲಿ ಮಹಿಳೆ, ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊರಟಗೆರೆ ತಾಲೂಕಿನ ಬಿಡಿಪುರ ಬಳಿಯ ಗಿರಚಿಕ್ಕನಹಳ್ಳಿಯಲ್ಲಿ ನಡೆದಿದೆ.
ವೆಂಕಟಲಕ್ಷ್ಮಮ್ಮ (25), ಆನಂದ್ ಕುಮಾರ್ (27) ಆತ್ಮಹತ್ಯೆ ಮಾಡಿಕೊಂಡವರು. ಮೃತ ವೆಂಕಟಲಕ್ಷ್ಮಮ್ಮ ಎರಡು ಮಕ್ಕಳ ತಾಯಿಯಾಗಿದ್ದು, ಈಕೆಯ ಪತಿ ತಿಮ್ಮರಾಜು ಟ್ರ್ಯಾಕ್ಟರ್ ಚಾಲಕನ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದನು.
ಈತ ಟ್ರ್ಯಾಕ್ಟರ್ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಆನಂದ್ ಈತನ ಪತ್ನಿ ಪುಸಲಾಯಿಸಿದ್ದು, ಅದು ಅನೈತಿಕ ಸಂಬಂಧಕ್ಕೆ ತಿರುಗಿದೆ. ಇದು ಗ್ರಾಮಸ್ಥರಿಗೆ ತಿಳಿಯಿತು ಎಂಬ ಕಾರಣಕ್ಕೆ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ವೆಂಕಟಲಕ್ಷ್ಮಮ್ಮ ಹಾಗೂ ಆನಂದ್ ಕುಮಾರ್ ಇಬ್ಬರು ಹೊಸ ಪಾಳ್ಯದ ಖಾಸಗಿ ಜಮೀನದಲ್ಲಿ ಸ್ವಲ್ಪ ಹೊತ್ತು ಮಾತನಾಡಿ ನಂತರ ಆಕೆ ವಿಷ ಸೇವಿಸಿದ ಪರಿಣಾಮ ಆನಂದ್ ಕುಮಾರ್ಗೆ ದಿಕ್ಕುತೋಚದಂತಾಗಿ ವೆಂಕಟಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿ, 6 ಮಂದಿಗೆ ಗಾಯ