ETV Bharat / crime

ಗಂಡನ ಕಿರುಕುಳಕ್ಕೆ ಬೇಸತ್ತು ಹೆಣ್ಣುಮಕ್ಕಳನ್ನ ಬಾವಿಗೆ ನೂಕಿದ ತಾಯಿ - palamu crime news

ಜಾರ್ಖಂಡ್​ನ ಪಾಲಮು ಜಿಲ್ಲೆಯಲ್ಲಿ ಪತಿಯ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು ತನ್ನಿಬ್ಬರು ಹೆಣ್ಣುಮಕ್ಕಳನ್ನ ಕೊಲೆ ಮಾಡಿದ್ದಾಳೆ.

palamu
ಗಂಡನ ಕಿರುಕುಳಕ್ಕೆ ಬೇಸತ್ತು ಹೆಣ್ಣುಮಕ್ಕಳನ್ನ ಬಾವಿಗೆ ನೂಕಿದ ತಾಯಿ
author img

By

Published : Jun 27, 2021, 2:29 PM IST

ಪಾಲಮು (ಜಾರ್ಖಂಡ್​): ಪರಿಸ್ಥಿತಿ ತುಂಬಾ ಕೆಟ್ಟದಾಗಿರುವಾಗ ತಾನು ಮಾಡುತ್ತಿರುವುದು ಸರಿಯೋ ಅಥವಾ ತಪ್ಪೋ ಎಂಬುದೇ ಕೆಲವರಿಗೆ ಅರ್ಥವಾಗುವುದಿಲ್ಲ. ಇಂತಹದ್ದೇ ಸ್ಥಿತಿ ಇಲ್ಲೊಬ್ಬ ಮಹಿಳೆಗೆ ಬಂದಿದೆ ಎಂದನಿಸುತ್ತದೆ. ಪತಿಯ ಕಿರುಕುಳಕ್ಕೆ ಬೇಸತ್ತ ಮಹಿಳೆ ತನ್ನಿಬ್ಬರು ಹೆಣ್ಣುಮಕ್ಕಳನ್ನ ಕೊಲೆ ಮಾಡಿರುವ ದಾರುಣ ಘಟನೆ ಜಾರ್ಖಂಡ್​ನ ಪಾಲಮು ಜಿಲ್ಲೆಯಲ್ಲಿ ನಡೆದಿದೆ.

2011ರಲ್ಲಿ ಪಾಲಮು ಜಿಲ್ಲೆಯ ಕಚನ್‌ಪುರ ಗ್ರಾಮದ ಅನಿತಾ ದೇವಿ ಎಂಬವರು ಅರ್ಜುನ್ ರಾಮ್​ನನ್ನು ಮದುವೆಯಾಗಿದ್ದರು. ಆದರೆ ಅಂದಿನಿಂದ ಅನಿತಾಗೆ ಆತ ಹಾಗೂ ಗಂಡನ ಮನೆಯವರು ನಿರಂತರವಾಗಿ ಕಿರುಕುಳ ನೀಡುತ್ತಾ ಬಂದಿದ್ದಾರೆ. ಕಷ್ಟದಲ್ಲೂ ಸಂಸಾರ ಸಾಗಿಸುತ್ತಿದ್ದ ಅನಿತಾಗೆ ಮೂವರು ಹೆಣ್ಣು ಮಕ್ಕಳು ಜನಿಸಿದ್ದರು. ದಿನದಿನಕ್ಕೂ ಹಿಂಸೆ ತಾಳಲಾರದೆ ಅನಿತಾ ಮಕ್ಕಳನ್ನು ಕರೆದುಕೊಂಡು ಹೋಗಿ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು.

ಇದನ್ನೂ ಓದಿ: ಅಪ್ರಾಪ್ತ ಮಗಳನ್ನು ಕತ್ತು ಹಿಸುಕಿ ಕೊಂದು ತಾಯಿ ಆತ್ಮಹತ್ಯೆ ಯತ್ನ

ಆದರೆ ತವರು ಮನೆಯಲ್ಲಿಯೂ ಬಡತನವಿದ್ದು, ಮೂವರು ಹೆಣ್ಣು ಮಕ್ಕಳನ್ನ ಸಾಕಲು ಅನಿತಾ ತುಂಬಾ ಕಷ್ಟಪಡುತ್ತಿದ್ದಳು. ಇದನ್ನು ನಿಭಾಯಿಸಲು ಸಾಧ್ಯವಾಗದ ಆಕೆ ತನ್ನ 5 ಹಾಗೂ 7 ವರ್ಷದ ಮಕ್ಕಳನ್ನು ಬಾವಿಗೆ ದೂಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅನಿತಾಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.