ಕೋಲಾರ: ಅನುಮಾನಸ್ಪಾದವಾಗಿ ನಗರದ ಶಾಂತಿನಗರ ಬಡಾವಣೆಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ಸ್ಥಳೀಯರಲ್ಲಿ ಕಾಡುತ್ತಿದೆ.
ಕಾಕಿನತ್ತ ಗ್ರಾಮದ ರಜನಿ (28) ಮೃತ ಮಹಿಳೆ. ಈಕೆ ಕೃಷ್ಣ ಎಂಬುವನ ಜೊತೆಗೆ ವಾಸವಿದ್ದಳು. ಬಾಡಿಗೆಗೆ ಬಂದು ವಾಸವಿದ್ದ ಈಕೆ, ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದರಂತೆ.
ಮಹಿಳೆ ಮೃತಪಟ್ಟಿರುವ ಕೊಠಡಿಗೆ ಹೊರಗಿನಿಂದ ಬೀಗ ಜಡಿದಿರುವ ಕಾರಣ ಹಲವು ಅನುಮಾನಗಳು ಕಾಡುತ್ತಿವೆ. ಈ ಹಿನ್ನೆಲೆ ಮೃತಳ ಪೋಷಕರು ನೀಡಿರುವ ದೂರಿನ ಮೇರೆಗೆ ಗಲ್ಪೇಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.