ETV Bharat / crime

ಹಣ, ಮೊಬೈಲ್‌ಗಾಗಿ ಆಸ್ಪತ್ರೆಯಲ್ಲೇ ಕೋವಿಡ್‌ ರೋಗಿ ಹತ್ಯೆ ; ಮಹಿಳಾ ಗುತ್ತಿಗೆ ಸಿಬ್ಬಂದಿ ಬಂಧನ

ಗುತ್ತಿಗೆ ಮಹಿಳಾ ಸಿಬ್ಬಂದಿ ರತಿ ದೇವಿ ವ್ಹೀಲ್‌ ಚೇರ್‌ನಲ್ಲಿ ರೋಗಿಯನ್ನು ಸ್ಕ್ಯಾನಿಂಗ್‌ ಮಾಡಿಸಲು ಮೂರನೇ ಮಹಡಿಗೆ ಕರೆದೊಯ್ದಿದ್ದಾಳೆ. ಹಣ ಹಾಗೂ ಮೊಬೈಲ್‌ಗಾಗಿ ಸೋಂಕಿತ ಸುನೀತಾರನ್ನು ಹತ್ಯೆ ಮಾಡಿ ಸ್ಟೇರ್‌ಕೇಸ್‌ ಪಕ್ಕದ ಕಸದಲ್ಲಿ ಎಸೆದು ಅಲ್ಲಿಂದ ಕಾಲ್ಕಿತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Woman contract worker at Chennai GH held for murder of COVID patient
ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿ ಸಾವು; ಮಹಿಳಾ ಗುತ್ತಿಗೆ ಸಿಬ್ಬಂದಿ ಬಂಧನ
author img

By

Published : Jun 16, 2021, 8:14 PM IST

Updated : Jun 16, 2021, 9:18 PM IST

ಚೆನ್ನೈ : ಕೋವಿಡ್‌ ರೋಗಿ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮೇ 23 ರಂದು 41 ವರ್ಷದ ಸುನೀತಾ ಎಂಬುವರಲ್ಲಿ ಕೋವಿಡ್ ಲಕ್ಷಣ ಕಾಣಿಸಿದ ಹಿನ್ನೆಲೆ ರಾಜೀವ್‌ ಗಾಂಧಿ ಸರ್ಕಾರಿ ಜನರಲ್‌ ಆಸ್ಪತ್ರೆ (RGGGH)ಗೆ ದಾಖಲಾಗಿದ್ದರು. ಆದ್ರೆ, ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಿಂದ ಸುನೀತಾ ನಾಪತ್ತೆಯಾಗಿದ್ದರು. ಈ ಸಂಬಂಧ ರೋಗಿಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಜೂನ್‌ 8ರಂದು ರಾಜೀವ್‌ ಗಾಂಧಿ ಸರ್ಕಾರಿ ಆಸ್ಪತ್ರೆಯ 8ನೇ ಮಹಡಿಯಲ್ಲಿ ಕೊಳೆತಿರುವ ಶವದ ವಾಸನೆ ಬಂದಾಗ ನಾಪತ್ತೆಯಾಗಿದ್ದ ಕೋವಿಡ್‌ ರೋಗಿಯದ್ದೇ ಶವ ಎಂಬುದು ಖಾತ್ರಿಯಾಗಿತ್ತು. ಘಟನೆ ಬಗ್ಗೆ ತನಿಖೆಕೈಗೊಂಡಿದ್ದ ಪೊಲೀಸರು, ತಿರುವೊಟ್ಟಿಯೂರ್ ಮೂಲದ 40 ವರ್ಷದ ರತಿ ದೇವಿಯನ್ನು ಬಂಧಿಸಿದ್ದಾರೆ. ಸೋಂಕಿತೆಯ ಬಳಿ ಇದ್ದ ಹಣ ಹಾಗೂ ಮೊಬೈಲ್‌ಗಾಗಿ ಹತ್ಯೆ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿದೆ.

ಗುತ್ತಿಗೆ ಮಹಿಳಾ ಸಿಬ್ಬಂದಿ ರತಿ ದೇವಿ ವ್ಹೀಲ್‌ ಚೇರ್‌ನಲ್ಲಿ ರೋಗಿಯನ್ನು ಸ್ಕ್ಯಾನಿಂಗ್‌ ಮಾಡಿಸಲು ಮೂರನೇ ಮಹಡಿಗೆ ಕರೆದೊಯ್ದಿದ್ದಾಳೆ. ಅಲ್ಲಿ ಸುನೀತಾ ಮೃತ ಪಟ್ಟಿದ್ದಾಳೆ. ಸ್ಟೇರ್‌ಕೇಸ್‌ ಪಕ್ಕದ ಕಸದಲ್ಲಿ ಶವವನ್ನು ಸುರಿದು ಅಲ್ಲಿಂದ ಕಾಲ್ಕಿತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Jun 16, 2021, 9:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.