ETV Bharat / crime

ಇಷ್ಟ ಇಲ್ಲ ಅಂತ ಕೊಂದೇ ಬಿಟ್ಟಳು ಪತ್ನಿ: ಮದುವೆಯಾಗಿ 22 ದಿನಕ್ಕೇ ಪತಿ ಸ್ವರ್ಗವಾಸಿ

author img

By

Published : Nov 14, 2022, 11:49 AM IST

ಪ್ರಕರಣದಲ್ಲಿ 6 ದಿನಗಳ ಕಾಲ ಪೊಲೀಸರು ತನಿಖೆ ನಡೆಸಿದ ಬಳಿಕ ಮೃತ ಪಾಂಡುರಂಗನ ತಾಯಿ ನೀಲಾಬಾಯಿ ರಾಜಾಭಾವು ಚವ್ಹಾಣ (ವಯಸ್ಸು 45) ರವರ ದೂರಿನ ಮೇರೆಗೆ ಶೀತಲ್ ವಿರುದ್ಧ ಐಪಿಸಿ ಕಲಂ 302 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪತಿ ಇಷ್ಟ ಇಲ್ಲ ಅಂತ ಕೊಂದೇ ಬಿಟ್ಟ ಪತ್ನಿ: ಮದುವೆಯಾಗಿ 22 ದಿನದಲ್ಲಿ ಸ್ವರ್ಗ ಸೇರಿದ ಪತಿ
GROOM KILLED IN BEED BY THE BRIDE BECAUSE SHE DID NOT LIKE HIM

ಬೀಡ್ (ಮಹಾರಾಷ್ಟ್ರ): ಪತಿ ತನಗೆ ಇಷ್ಟವಿಲ್ಲವೆಂದು ಪತ್ನಿಯೇ ಆತನನ್ನು ಕೊಲೆಗೈದ ಘಟನೆ ಬೀಡ್​ ಜಿಲ್ಲೆಯ ನಿಪಾಣಿ ಎಂಬಲ್ಲಿ ನಡೆದಿದೆ. ಮದುವೆಯಾದ ಕೇವಲ 22 ದಿನಗಳಲ್ಲಿ ಪತಿ ಪತ್ನಿಯ ಕೈಯಿಂದಲೇ ಸಾವಿಗೀಡಾಗಿರುವ ದುರ್ದೈವದ ಘಟನೆ ಇದಾಗಿದೆ.

ಘಟನೆಯ ವಿವರ: ನಿಪಾಣಿ ತಾಂಡಾ ಬಳಿಯ ನಿವಾಸಿ 22 ವರ್ಷದ ಪಾಂಡುರಂಗ ರಾಜಾಭಾವು ಚವಾಣ್ ಈತನ ವಿವಾಹವು ಬೀಡ ಜಿಲ್ಲೆ ಪೌಳಾಚಿವಾಡಿ ಊರಿನ ಶೀತಲ್ ಎಂಬಾಕೆಯ ಜೊತೆ ಸಂಪ್ರದಾಯದಂತೆ 2022ರ ಅಕ್ಟೋಬರ್ 14 ರಂದು ನೆರವೇರಿತ್ತು. ಆದರೆ ಪತಿ ತನಗೆ ಇಷ್ವವಿಲ್ಲವೆಂದು ಶೀತಲ್ ಆಗಾಗ ಅವನ ಜೊತೆ ಜಗಳವಾಡುತ್ತಿದ್ದಳು.

ಪರಿಸ್ಥಿತಿ ಹೀಗಿರುವಾಗ 2022ರ ನವೆಂಬರ್ 7 ರಂದು ರಾತ್ರಿ 11 ರಿಂದ 11.30ರ ಸುಮಾರಿಗೆ ತಾವು ಮಲಗಿದ್ದ ಕೊಠಡಿಯಿಂದ ಹೊರಬಂದ ಶೀತಲ್, ಪಾಂಡುರಂಗ ಯಾಕೋ ಮಾತಾಡುತ್ತಿಲ್ಲ ಎಂದು ಅತ್ತೆ ಮಾವನಿಗೆ ಹೇಳಿದ್ದಾಳೆ. ಮನೆಯಲ್ಲಿದ್ದವರು ತಕ್ಷಣವೇ ಪಾಂಡುರಂಗನನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಆಸ್ಪತ್ರೆಗೆ ಬಂದಾಗಲೇ ಆತ ನಿಧನನಾಗಿದ್ದ ಎಂದು ವೈದ್ಯರು ಘೋಷಿಸಿದರು.

ಪಾಂಡುರಂಗನ ಕುತ್ತಿಗೆ ಬಳಿ ಗಾಯವಾಗಿದ್ದು, ರಕ್ತದ ಕಲೆಗಳಿರುವುದು ಕಂಡುಬಂದ ನಂತರ ಆತನ ಕೊಲೆಯಾಗಿರಬಹುದು ಎಂದು ಸಂಬಂಧಿಕರಿಗೆ ಸಂಶಯ ಬಂದಿದೆ. ಸೊಸೆಯೇ ತಮ್ಮ ಮಗನನ್ನು ಕೊಲೆ ಮಾಡಿದ್ದಾಳೆ ಎಂದು ಅತ್ತೆ ಮಾವ ಸಂಶಯ ವ್ಯಕ್ತಪಡಿಸಿದ್ದರು.

ಈ ಪ್ರಕರಣದಲ್ಲಿ 6 ದಿನಗಳ ಕಾಲ ಪೊಲೀಸರು ತನಿಖೆ ನಡೆಸಿದ ಬಳಿಕ ಮೃತ ಪಾಂಡುರಂಗನ ತಾಯಿ ನೀಲಾಬಾಯಿ ರಾಜಾಭಾವು ಚವ್ಹಾಣ (ವಯಸ್ಸು 45) ರವರ ದೂರಿನ ಮೇರೆಗೆ ಶೀತಲ್ ವಿರುದ್ಧ ಐಪಿಸಿ ಕಲಂ 302 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆಯನ್ನು ಸಹಾಯಕ ಪೊಲೀಸ್ ನಿರೀಕ್ಷಕ ಸಾಬಲೆ ಇವರು ಕೈಗೊಂಡಿದ್ದಾರೆ.

ಇದನ್ನೂ ಓದಿ: ಲೈಂಗಿಕ ನಿರಾಸಕ್ತಿ ಹೊಂದಿದ್ದ ಪತಿಗೆ ಮಸಣದ ಹಾದಿ.. ಗಂಡನ ಕೊಂದ ಪತ್ನಿ, ಸುಪಾರಿ ಪ್ರಿಯಕರ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.