ETV Bharat / crime

ಹಲ್ಲೆ ಮಾಡ್ತಾಳೆ ಹೆಂಡ್ತಿ, ಅಯ್ಯೋ ಕಾಪಾಡಿ ಸಾರ್.. ಪ್ರಧಾನಿ ಕಚೇರಿಗೆ ಬೆಂಗಳೂರು ವ್ಯಕ್ತಿ ದೂರು - ಪ್ರಧಾನಿ ಕಚೇರಿಗೆ ಬೆಂಗಳೂರು ವ್ಯಕ್ತಿ ದೂರು

ಬೆಂಗಳೂರಿನ ಯದುನಂದನ್ ಆಚಾರ್ಯ ಎಂಬುವರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ದೂರನ್ನು ಪಿಎಂಒಗೆ ಕಳುಹಿಸಿದ್ದಾರೆ. ಈ ಕುರಿತು ತಾವು ಮಾಡಿದ ಟ್ವೀಟ್ ಅನ್ನು ಬೆಂಗಳೂರು ನಗರ ಪೊಲೀಸರು ಮತ್ತು ಕೇಂದ್ರ ಕಾನೂನು ಸಚಿವರಿಗೆ ಟ್ಯಾಗ್ ಮಾಡಿದ್ದಾರೆ.

Ktaka man says wife beats him complains to PMs office
ಹೊಡೀತಾಳೆ ಬಡಿತಾಳೆ ನನ್ನ ಹೆಂಡ್ತಿ, ಅಯ್ಯೋ ಕಾಪಾಡಿ ಸಾರ್.. ಪ್ರಧಾನಿ ಕಚೇರಿಗೆ ಬೆಂಗಳೂರು ವ್ಯಕ್ತಿ ದೂರು
author img

By

Published : Nov 2, 2022, 1:49 PM IST

Updated : Nov 2, 2022, 3:58 PM IST

ಬೆಂಗಳೂರು: ಪ್ರತಿದಿನ ತನ್ನನ್ನು ಹೊಡೆಯುವ ಪತ್ನಿಯಿಂದ ರಕ್ಷಿಸಬೇಕೆಂದು ಸಹಾಯ ಕೋರಿ ಕರ್ನಾಟಕದ ವ್ಯಕ್ತಿಯೊಬ್ಬರು ಪ್ರಧಾನಿ (ಪಿಎಂಒ) ಕಚೇರಿಗೆ ದೂರು ನೀಡಿದ್ದಾರೆ. ತನಗೆ ಪತ್ನಿಯಿಂದ ಜೀವ ಬೆದರಿಕೆ ಇದೆ ಎಂದು ಪತಿ ಆರೋಪಿಸಿದ್ದಾರೆ.

ಬೆಂಗಳೂರಿನ ಯದುನಂದನ್ ಆಚಾರ್ಯ ಎಂಬುವರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ದೂರನ್ನು ಪಿಎಂಒಗೆ ಕಳುಹಿಸಿದ್ದಾರೆ. ಈ ಕುರಿತು ತಾವು ಮಾಡಿದ ಟ್ವೀಟ್ ಅನ್ನು ಬೆಂಗಳೂರು ಪೊಲೀಸ್​​ ಮತ್ತು ಕೇಂದ್ರ ಕಾನೂನು ಸಚಿವರ ಟ್ವಿಟರ್​ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ.

'ಯಾರಾದರೂ ನನಗೆ ಸಹಾಯ ಮಾಡುತ್ತಾರೆಯೇ? ಅಥವಾ ಇದು ಸಂಭವಿಸಿದಾಗ ಯಾರಾದರೂ ನನಗೆ ಸಹಾಯ ಮಾಡಿದ್ದಾರೆಯೇ? ಇಲ್ಲ, ಏಕೆಂದರೆ ನಾನು ಪುರುಷ! ನನ್ನ ಹೆಂಡತಿ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದಳು, ಇದೇ ನೀವು ಬೆಂಬಲಿಸುವ ನಾರಿ ಶಕ್ತಿಯೇ? ಇದಕ್ಕಾಗಿ ನಾನು ಅವಳ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಬಹುದೇ? ಇಲ್ಲ! ...' ಎಂದು ಪತ್ನಿ ಸಂತ್ರಸ್ತ ಯದುನಂದನ್ ಆಚಾರ್ಯ ಟ್ವೀಟ್​ನಲ್ಲಿ ಬರೆದಿದ್ದಾರೆ.

ಪತ್ನಿ ಇರಿದಿದ್ದರಿಂದ ಕೈಗೆ ಗಾಯವಾಗಿ ರಕ್ತಸ್ರಾವವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು, ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸುವಂತೆ ಸೂಚಿಸಿದ್ದಾರೆ.

ಯದುನಂದನ್ ಆಚಾರ್ಯರಿಗೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಿರುಕುಳಕ್ಕೊಳಗಾದ ಗಂಡಂದಿರ ಸಮಸ್ಯೆಯನ್ನು ಪರಿಹರಿಸುವ ಅಗತ್ಯತೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಚಳ್ಳಕೆರೆ ಠಾಣೆ ಸಿಪಿಐ ವಿರುದ್ಧ ರೇಪ್ ಕೇಸ್, ಸಸ್ಪೆಂಡ್‌; ಉಲ್ಟಾ ಹೊಡೆದ ಯುವತಿ!

Last Updated : Nov 2, 2022, 3:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.