ETV Bharat / crime

ವಿಜಯಪುರ ಪ್ರೇಮಿಗಳ ಹತ್ಯೆ ಪ್ರಕರಣ... ತಂದೆಯೇ ವಿಲನ್!! - ಕಲಕೇರಿ ಠಾಣೆ ಪೊಲೀಸರು ಭೇಟಿ‌

ಜೂ. 22 ರಂದು ಇಬ್ಬರು ಪ್ರೇಮಿಗಳು ಸಲಾದಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ, ಸ್ಥಳಕ್ಕೆ ಬಂದ ಯುವತಿ ಅಜ್ಜ ಇಬ್ಬರನ್ನೂ ವಿಚಾರಣೆ ನಡೆಸಿ, ಯುವಕನನ್ನು ತಮ್ಮ ತೋಟಕ್ಕೆ ಕರೆದುಕೊಂಡು ಹೋಗಿ, ಕಟ್ಟಿಹಾಕಿದ್ದಾನೆ. ನಂತರ ಯುವತಿ ಸಂಬಂಧಿಕರೆಲ್ಲ ಸೇರಿ ಇಬ್ಬರನ್ನೂ ಕೊಲೆ ಮಾಡಿದ್ದಾರೆ.

vijayapura-couple-murder-case-update-news
ವಿಜಯಪುರ ಪ್ರೇಮಿಗಳ ಹತ್ಯೆ ಪ್ರಕರಣ
author img

By

Published : Jun 23, 2021, 7:21 PM IST

Updated : Jun 23, 2021, 8:25 PM IST

ವಿಜಯಪುರ: ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಯುವತಿಯ ತಂದೆಯೇ ಸ್ವಂತ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಗಡಿ ಗ್ರಾಮ ಸಲಾದಹಳ್ಳಿಯಲ್ಲಿ ನಡೆದಿದೆ. ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದ ಯುವಕ ಬಸವರಾಜ ಬಡಿಗೇರ (20 ವರ್ಷ) ಹಾಗೂ ಪಕ್ಕದ ಗ್ರಾಮ ಖಾನಾಪುರದ ಯುವತಿ ದಾವಲಬಿ ಬಂದಗಿಸಾಬ್‌ ತಂಬದ (19 ವರ್ಷ) ಕೊಲೆಯಾದವರು.

ವಿಜಯಪುರ ಪ್ರೇಮಿಗಳ ಹತ್ಯೆ ಪ್ರಕರಣ

ಓದಿ: ವಿಜಯಪುರದಲ್ಲಿ ನಡೆಯಿತಾ ಮರ್ಯಾದಾ ಹತ್ಯೆ? : ಜಮೀನಲ್ಲೇ ಉಸಿರು ಚೆಲ್ಲಿರುವ ಪ್ರೇಮಿಗಳು..!

ಯುವತಿ ದಾವಲಬಿ ತನ್ನ ಪ್ರಿಯಕರ ಬಸವರಾಜ ಬಡಿಗೇರ ಭೇಟಿಯಾಗಿದ್ದ ವೇಳೆ, ಇಬ್ಬರನ್ನೂ ಒಟ್ಟಿಗೆ ಕಂಡ ಯುವತಿಯ ಕುಟುಂಬಸ್ಥರು ಇಬ್ಬರನ್ನೂ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಯುವತಿಯ ತಂದೆ ಹಾಗೂ ಆತನ ಅಳಿಯಂದಿರು ಕಲ್ಲು ಹಾಗೂ ಚಾಕು ಬಳಸಿ ಇಬ್ಬರನ್ನೂ ಕೊಲೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕಲಕೇರಿ ಠಾಣೆ ಪೊಲೀಸರು ಯುವತಿಯ ತಂದೆ ಹಾಗೂ ಆತನ ಸಂಬಂಧಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕೊಲೆಯಾದ ಪ್ರಿಯಕರ ಬಸವರಾಜ ಹಾಗೂ ದಾವಲಬಿ ಅಕ್ಕಪಕ್ಕದ ಹಳ್ಳಿಯವರು. ಎರಡು ವರ್ಷಗಳ ಹಿಂದೆ ಯುವತಿ ದಾವಲಬಿ ಖಾನಾಪುರ ಗ್ರಾಮದಿಂದ ಸಲಾದಹಳ್ಳಿಯಲ್ಲಿರುವ ತನ್ನ ಅಜ್ಜನ ಮನೆಗೆ ಬಂದು, ಇಲ್ಲೆ ವಾಸವಾಗಿದ್ದಳು. ಇದೇ ಗ್ರಾಮದಲ್ಲಿ ಆಟೋ ಚಾಲಕನಾಗಿದ್ದ ಬಸವರಾಜನೊಂದಿಗೆ ಯುವತಿಯ ಪರಿಚಯ ವಾಗಿತ್ತು. ಅನ್ಯಕೋಮಿನವರಾದರೂ ಇಬ್ಬರ ಮಧ್ಯೆ ಈ ಹಿಂದೆ ಸ್ನೇಹ ಉಂಟಾಗಿ ಅದು ಪ್ರೇಮಾಂಕುರಕ್ಕೆ ಕಾರಣವಾಗಿತ್ತು.

ಆದರೆ, ಇವರಿಬ್ಬರ ಪ್ರೇಮಕ್ಕೆ ಯುವತಿ ಮನೆಯವರ ತೀವ್ರ ವಿರೋಧವಿತ್ತು. ಇಷ್ಟಾದರೂ ಆಟೋ ಡ್ರೈವರ್ ಬಸವರಾಜ ಹಾಗೂ ಯುವತಿ ದಾವಲಬಿ ನಡುವೆ ಪ್ರೀತಿ ಕಡಿಮೆಯಾಗಿರಲಿಲ್ಲ. ಆರು ತಿಂಗಳ ಹಿಂದೆ ಈ ವಿಚಾರ ಮನೆಯಲ್ಲಿ ತಿಳಿದ ಬಳಿಕ ಇಬ್ಬರಿಗೂ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರ ಪ್ರೇಮ ಪಯಣ ಮುಂದುವರೆದಿತ್ತು. ಆಗಾಗ ಇಬ್ಬರೂ ಒಬ್ಬರಿಗೊಬ್ಬರು ಭೇಟಿಯಾಗುತ್ತಿದ್ದರು.

ಭೇಟಿಯಾಗಲು ಹೋಗಿ ಹೆಣವಾದರು:

ಜೂ.22 ರಂದು ಇಬ್ಬರು ಪ್ರೇಮಿಗಳು ಸಲಾದಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಯುವತಿಯ ಅಜ್ಜ ಇಬ್ಬರನ್ನೂ ವಿಚಾರಣೆ ನಡೆಸಿದ್ದಾನೆ. ಯುವಕನನ್ನು ಗ್ರಾಮದಲ್ಲಿ ಸುತ್ತಾಡಿಸಿ ತಮ್ಮ ತೋಟಕ್ಕೆ ಕರೆದುಕೊಂಡು ಹೋಗಿ, ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ. ಈ ವಿಷಯ ತಿಳಿದ ಯುವಕನ ಕುಟುಂಬಸ್ಥರು ಸ್ಥಳಕ್ಕೆ ತೆರಳಿ ಮಗನನ್ನು ಬಿಡಲು ಮನವಿ ಮಾಡಿದ್ದಾರೆ.

ಆದರೆ, ಇದಕ್ಕೆ ಒಪ್ಪದ ಯುವತಿಯ ಅಜ್ಜ, ಆಕೆಯ ಸಹೋದರ ಹಾಗೂ ಮಾವಂದಿರು ಯುವಕನ ತಾಯಿ ಹಾಗೂ ಸಹೋದರನ ಮುಂದೆಯೇ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಯುವತಿಯ ತಂದೆ ಬಂದಗಿಸಾಬ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಇದರಿಂದ ಕುಪಿತನಾದ ಬಂದಗಿಸಾಬ್ ಮಾರಕಾಸ್ತ್ರಗಳೊಂದಿಗೆ ಸ್ಥಳಕ್ಕೆ ಬಂದಿದ್ದಾನೆ.

ಎಷ್ಟೇ ಮನವಿ ಮಾಡಿದರೂ ಕೇಳಲೇ ಇಲ್ಲ:

ಈ ವೇಳೆ ಬಸವರಾಜ ಕುಟುಂಬಸ್ಥರು ಎಷ್ಟೇ ಮನವಿ ಮಾಡಿದರೂ ಕೇಳದೆ ಅವರ ಮೇಲೂ ಹಲ್ಲೆ ಮಾಡಿದ್ದಾನೆ. ಬಳಿಕ ಬಸವರಾಜ ಮತ್ತು ದಾವಲಬಿ ಮೇಲೆ ಬಂದಗಿಸಾಬ್ ಹಾಗೂ ಆತನ ಅಳಿಯಂದಿರು ಸೇರಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ಎಲ್ಲ ಘಟನೆಗಳು ಬಸವರಾಜ ತಾಯಿ ಮಲ್ಲಮ್ಮ ಹಾಗೂ ಆತನ ಸಹೋದರ ಕಲ್ಯಾಣಕುಮಾರ್ ಮುಂದೆಯೇ ನಡೆದಿದೆ‌. ಘಟನೆ ಕುರಿತು ಯುವತಿ ತಂದೆ ಬಂದಗಿಸಾಬ್, ಸಹೋದರ ದಾವಲ್‌ ಪಟೇಲ್, ಅಳಿಯರಾದ ಲಾಳೆಸಾಬ್, ಅಲ್ಲಾಪಟೇಲ್ ರಫೀಕ್ ಸೇರಿದಂತೆ ಐದು ಜನರ ವಿರುದ್ಧ ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸದ್ಯ ಸ್ಥಳಕ್ಕೆ ಕಲಕೇರಿ ಠಾಣೆ ಪೊಲೀಸರು ಭೇಟಿ‌ ನೀಡಿ ತನಿಖೆ ನಡೆಸುತ್ತಿದ್ದಾರೆ. ಜೋಡಿ ಕೊಲೆ ಹಿನ್ನೆಲೆ ಸಲಾದಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಎಸ್​​ಪಿ ಅನುಪಮ ಅಗರವಾಲ್‌ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಸದ್ಯ ಡಿವೈಎಸ್​​ಪಿ ಶ್ರೀಧರ ದೊಡ್ಡಿ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Last Updated : Jun 23, 2021, 8:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.