ವಿಜಯಪುರ: ಅವಧಿ ಮೀರಿದ ಔಷಧಿ ದಿನ ಬದಲಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, ಅವರಿಂದ 4 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಔಷಧಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
![Vijayapura An expired drug sale, two arrested](https://etvbharatimages.akamaized.net/etvbharat/prod-images/kn-vjp-05-expired-drug-two-arrest-av-7202140_23022021203815_2302f_1614092895_233.jpg)
ಓದಿ: ಕೊನೆ ಬಾರಿ ತಮ್ಮನ ಮುಖ ನೋಡ್ಬೇಕು ಅಂದ್ರೂ ಅವಕಾಶ ಕೊಡದ ಅಧಿಕಾರಿಗಳು!
ಬಂಧಿತರನ್ನು ಪುಲಕೇಶಿನಗರದ ಮಹಮ್ಮದ ಸಾಧೀಕ ಭತಗುಣಕಿ (35) ಹಾಗೂ ಮಹಮ್ಮದ ಯುಸುಫ್ ಕೊತ್ತಲ (35) ಎಂದು ಗುರುತಿಸಲಾಗಿದೆ. ನಗರದ ಪುಲಕೇಶಿ ನಗರದ ಉದ್ಯಾನವನದ ಪ್ರದೇಶದಲ್ಲಿ ಅವಧಿ ಮೀರಿದ ಔಷಧಿ ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದ ವಿಶೇಷ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಾಟಲ್ನಲ್ಲಿ ಸ್ಯಾನಿಟೈಸರ್ ಬಳಸಿ ಅವಧಿ ಮೀರಿದ ಲೇಬಲ್ ಅಳಿಸಿ ಅಕ್ರಮವಾಗಿ ಯುವಕರಿಗೆ ಆರೋಪಿಗಳು ಮಾರಾಟ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಬಂಧಿತರಿಂದ ಅಕ್ರಮವಾಗಿ ಮಾರಾಟಕ್ಕೆ ಸಂಗ್ರಹಿಸಿದ್ದ 4,16,696 ರೂ. ಮೌಲ್ಯದ ಅವಧಿ ಮೀರಿದ ಕಾಫ್ ಸಿರಫ್ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಅಪರಾಧ ವಿಭಾಗದ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.