ಗಾಜಿಯಾಬಾದ್ (ಉತ್ತರ ಪ್ರದೇಶ): ಗಾಜಿಯಾಬಾದ್ನ ಲೋನಿ ಪ್ರದೇಶದಲ್ಲಿ ನಡೆದ ಘಟನೆಯೊಂದರ ವಿಡಿಯೋವನ್ನು ವೈರಲ್ ಆಗಲು ಬಿಟ್ಟಿದ್ದಕ್ಕೆ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರಿಗೆ ಉತ್ತರ ಪ್ರದೇಶ ಪೊಲೀಸರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಕೆಲವರು ತಮ್ಮ ಟ್ವಿಟ್ಟರ್ ಖಾತೆಯನ್ನ ಸಮಾಜದಲ್ಲಿ ದ್ವೇಷವನ್ನು ಹರಡಲು ಒಂದು ಸಾಧನವಾಗಿ ಬಳಸಿಕೊಂಡಿದ್ದಾರೆ. ಟ್ವಿಟರ್ ಕಮ್ಯುನಿಕೇಷನ್ ಇಂಡಿಯಾ ಇದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಸಮಾಜ ವಿರೋಧಿ ಸಂದೇಶಗಳನ್ನು ವೈರಲ್ ಮಾಡಲು ಬಿಡುತ್ತಿದೆ ಎಂದು ಯುಪಿ ಪೊಲೀಸರು ಆರೋಪಿಸಿದ್ದು, ಈ ಸಂಬಂಧ ಲೋನಿ ಪೊಲೀಸ್ ಠಾಣೆಗೆ ಬಂದು ತಮ್ಮ ಹೇಳಿಕೆ ದಾಖಲಿಸುವಂತೆ ಮನೀಶ್ ಮಹೇಶ್ವರಿ ಅವರಿಗೆ ಸೂಚಿಸಿದ್ದಾರೆ.
-
The incident of an elderly man assaulted in Loni, Ghaziabad is reported with communal angle by @thewire_in#PIBFactCheck:@ghaziabadpolice has clarified that the victim and the accused knew each other. The incident occurred due to personal dispute.
— PIB Fact Check (@PIBFactCheck) June 17, 2021 " class="align-text-top noRightClick twitterSection" data="
➡️https://t.co/9HYEIVbuRe pic.twitter.com/IHr7vItnx3
">The incident of an elderly man assaulted in Loni, Ghaziabad is reported with communal angle by @thewire_in#PIBFactCheck:@ghaziabadpolice has clarified that the victim and the accused knew each other. The incident occurred due to personal dispute.
— PIB Fact Check (@PIBFactCheck) June 17, 2021
➡️https://t.co/9HYEIVbuRe pic.twitter.com/IHr7vItnx3The incident of an elderly man assaulted in Loni, Ghaziabad is reported with communal angle by @thewire_in#PIBFactCheck:@ghaziabadpolice has clarified that the victim and the accused knew each other. The incident occurred due to personal dispute.
— PIB Fact Check (@PIBFactCheck) June 17, 2021
➡️https://t.co/9HYEIVbuRe pic.twitter.com/IHr7vItnx3
ಈಗಾಗಲೇ ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ ಹಾಗೂ ಕಾಂಗ್ರೆಸ್-ಬಿಜೆಪಿ ಟೂಲ್ಕಿಟ್ ವಿಚಾರದಲ್ಲಿ ಟ್ವಿಟರ್ ಭಾರತ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಟ್ವಿಟರ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಕಟವಾದ ಪೋಸ್ಟ್‌ಗಳಿಗೆ ನೇರವಾದ ಜವಾಬ್ದಾರಿ ಹೊರಬೇಕಾಗಿದೆ.
ಇದನ್ನೂ ಓದಿ: ಕೇಂದ್ರ V/S ಟ್ವಿಟರ್: ನಿಯಮ ಅನುಸರಿಸಲು ಕೊನೆಯ ನೋಟಿಸ್ ನೀಡಿದ ಸರ್ಕಾರ..!
ಕೇಂದ್ರ ಸರ್ಕಾರದ ಹೊಸ ಡಿಜಿಟಲ್ ನಿಯಮದಂತೆ ಕೆಲವು ಅಧಿಕಾರಿಗಳನ್ನು ನೇಮಿಸದ ಹಿನ್ನೆಲೆಯಲ್ಲಿ ಟ್ವಿಟರ್ ಭಾರತದಲ್ಲಿ ಕಾನೂನಾತ್ಮಕ ರಕ್ಷಣೆಯನ್ನು ಕಳೆದುಕೊಂಡಿದೆ. ಇದರ ಬೆನ್ನಲ್ಲೇ ತಾನು ಕೇಂದ್ರ ಸರ್ಕಾರದ ಕಾನೂನು ಪಾಲಿಸುವುದಾಗಿ ಟ್ವಿಟರ್ ಭರವಸೆ ನೀಡಿತ್ತು. ಆದರೆ ಇದಕ್ಕೆ ಸರ್ಕಾರ ಪ್ರತಿಕ್ರಿಯೆ ನೀಡಿರಲಿಲ್ಲ.