ಲಖನೌ (ಉತ್ತರ ಪ್ರದೇಶ): 51 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ಉತ್ತರ ಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 66 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಕೊನೆಗೂ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ಮೂವರು ಗಂಡು ಮಕ್ಕಳ ತಂದೆಯಾಗಿರುವ ವಿವಾಹಿತ ವ್ಯಕ್ತಿ ರಾಜೇಶ್ ಕುಮಾರ್ ಬಂಧಿತ ಆರೋಪಿ. ಉತ್ತರ ಪ್ರದೇಶದ ಔರಯ್ಯ ಜಿಲ್ಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯರು, ಯುವತಿಯರು, ಮಹಿಳೆಯರಿಗೆ ಆಮಿಷವೊಡ್ಡಲು ಮತ್ತು ಕಿರುಕುಳ ನೀಡಲು ಬಳಸಿದ ಎರಡು ಮೊಬೈಲ್ ಫೋನ್ಗಳು, ಅನೇಕ ಸಿಮ್ ಕಾರ್ಡ್ಗಳನ್ನು ಪೊಲೀಸರು ಈತನ ಬಳಿಯಿಂದ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳ ಮಾಸ್ಟರ್ಪ್ಲಾನ್: ರಾಬರ್ಟ್ ಚಿತ್ರ ಪೈರಸಿ ಮಾಡುತ್ತಿದ್ದ ಮತ್ತೋರ್ವ ಅರೆಸ್ಟ್
ಈತ ಮೊಬೈಲ್ ಮೂಲಕವೇ ಅಪರಿಚಿತ ಯುವತಿಯರನ್ನು ಸಂಪರ್ಕಿಸಿ, ಆಮಿಷವೊಡ್ಡಿ ಬಳಿಕ ಅವರಿಗೆ ಲೈಂಗಿಕ ಕಿರುಕುಳ ನೀಡಿ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು. 2018 ರಲ್ಲಿ ರಾಜೇಶ್ ವಿರುದ್ಧ ಮೊದಲ ಕೇಸ್ ದಾಖಲಾಗಿತ್ತು. ಅಂದಿನಿಂದ ಇಂತಹದೇ ಹಲವು ದೂರುಗಳು ಬಂದಿದ್ದು, ಈವರೆಗೆ 66 ಮಹಿಳೆಯರು ದೂರು ನೀಡಿದ್ದಾರೆ. ಪ್ರಕರಣ ಭೇದಿಸಲು ಹೊರಟ ಪೊಲೀಸರಿಗೆ ಇಲ್ಲಿರುವುದು ಒಬ್ಬನೇ ಖತರ್ನಾಕ್ ವ್ಯಕ್ತಿ ಎಂಬುದು ತಿಳಿದು ಬಂದಿದೆ.
ಔರಯ್ಯ ಜಿಲ್ಲೆಯ ಜೀವಾ ಸರ್ಸಾನಿ ಎಂಬ ಗ್ರಾಮದಲ್ಲಿ ಆರೋಪಿ ರಾಜೇಶ್ನನ್ನು ಹಿಡಿದಿರುವ ಬೇಲಾ ಠಾಣಾ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ.