ಮೈಸೂರು: ಮನೆ ಮತ್ತು ಜಾತ್ರೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಹುಣಸೂರು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರ ನಿವಾಸಿಗಳಾದ ನಾಗರಾಜು ಮತ್ತು ಆತನ ಅತ್ತೆ ಆದಿಯಮ್ಮ ಬಂಧಿತ ಆರೋಪಿಗಳು. ಬಂಧಿತರಿಂದ 13 ಲಕ್ಷ ರೂ. ಮೌಲ್ಯದ 300 ಗ್ರಾಂ ಚಿನ್ನಾಭರಣಗಳು ಮತ್ತು 1 ಕೆಜಿ 250 ಗ್ರಾಂ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರು ಭಾಗಿಯಾಗಿದ್ದ ಹುಣಸೂರು ಪಟ್ಟಣ ಠಾಣೆಯಲ್ಲಿ 5 ಪ್ರಕರಣ, ಪಿರಿಯಾಪಟ್ಟಣ ಠಾಣೆ, ಸರಗೂರು ಠಾಣೆಯಲ್ಲಿ ತಲಾ ಎರಡೆರಡು ಪ್ರಕರಣ, ಕೆ.ಆರ್.ನಗರ ಠಾಣೆಯಲ್ಲಿ ಒಂದು ಪ್ರಕರಣ ಸೇರಿದಂತೆ ಒಟ್ಟಾರೆ ಹತ್ತು ಪ್ರಕರಣಗಳು ಪತ್ತೆಯಾಗಿವೆ.
ಪತ್ತೆ ಕಾರ್ಯದ ತಂಡದಲ್ಲಿದ್ದ ಪಿಐ ಸಿ.ವಿ.ರವಿ, ಪಿಎಸ್ಐ ಲತೇಶ್ ಕುಮಾರ್, ಎಎಸ್ಐ ಮಹದೇವಮ್ಮ ಹಾಗೂ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಪ್ರಶಂಸಿಸಿದ್ದಾರೆ.