ETV Bharat / crime

ಡ್ರಗ್ ಪೆಡ್ಲಿಂಗ್: ಮಂಗಳೂರಲ್ಲಿ ಮತ್ತಿಬ್ಬರು ನೈಜೀರಿಯಾ ಪ್ರಜೆಗಳು ಅರೆಸ್ಟ್​ - ಎಂಡಿಎಂಎ ಡ್ರಗ್ ಪೆಡ್ಲಿಂಗ್,

ಮಂಗಳೂರಲ್ಲಿ ಇಬ್ಬರು ಡ್ರಗ್ ಪೆಡ್ಲರ್​ಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರು ನೈಜೀರಿಯಾ​ ಪ್ರಜೆಗಳಾಗಿದ್ದಾರೆ.

drugs peddlers arrested
ಡ್ರಗ್​ ಪೆಡ್ಲರ್ಸ್​ ಬಂಧನ
author img

By

Published : Jun 29, 2021, 2:01 PM IST

ಮಂಗಳೂರು: ಡ್ರಗ್ ಪೆಡ್ಲಿಂಗ್ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿ, ಮತ್ತಿಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಈವರೆಗೆ ಒಂಬತ್ತು ಮಂದಿಯ ಬಂಧನವಾಗಿದೆ.

ಬೆಂಗಳೂರಿನಲ್ಲಿ ಟೀಶರ್ಟ್ ವ್ಯಾಪಾರ ಮಾಡಿಕೊಂಡಿದ್ದ ಈ ಇಬ್ಬರು ಆರೋಪಿಗಳು ಬೆಂಗಳೂರು ಬಿಡ್ರಲ್ಲಿ ಎಂಬಲ್ಲಿ‌ ವಾಸ್ತವ್ಯ ಹೂಡಿದ್ದರು. ಪಾಸ್ ಪೋರ್ಟ್ ಅವಧಿ ಮುಗಿದಿದ್ದರೂ, ಇವರು ಅಕ್ರಮವಾಗಿ ವಾಸಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾತನಾಡಿ, ಇವರು ಈ ಹಿಂದೆ ಬಂಧಿತನಾದ ಡ್ರಗ್ ಪೆಡ್ಲರ್ ಕಾಸರಗೋಡು ಮೂಲದ ವ್ಯಕ್ತಿಯ ಸಂಪರ್ಕದಲ್ಲಿದ್ದರು‌. ಈ ಆರೋಪದ ಮೇಲೆ ಇವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಬೇರೆ ಪ್ರಕರಣ ದಾಖಲಾಗಿದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಬಂಧಿತರ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.