ETV Bharat / crime

ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್ ಕೇಸ್: ಐವರು ಆಟಗಾರರಿಗೆ ಮೆಸೇಜ್​ ಕಳುಹಿಸಿ ಪ್ರಚೋದನೆಗೆ ಯತ್ನಿಸಿದ ಆರೋಪಿ ಬಂಧನ - try to spot fixing in tnipl one accused arrested in bangalore

ಟಿಎನ್‌ಪಿಎಲ್‌ನಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಮಾಡಿಕೊಳ್ಳುವಂತೆ ಆಟಗಾರರಿಗೆ ಇನ್‌ಸ್ಟಾದಲ್ಲಿ ಸಂದೇಶ ಕಳುಹಿಸಿ ಬಳಿಕ ಅವರನ್ನು ಬ್ಲ್ಯಾಕ್‌ ಮೇಲ್‌ ಮಾಡಲು ತಂತ್ರ ರೂಪಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಆರೋಪಿಯನ್ನು ಬೆಂಗಳೂರಿನ ಜಯನಗರ ಪೊಲೀಸರು ಬಂಧಿಸಿದ್ದಾರೆ.

try to spot fixing in tnipl; one accused arrested in bangalore
ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್ ಕೇಸ್: ಐವರು ಆಟಗಾರರಿಗೆ ಮೇಸೆಜ್ ಕಳುಹಿಸಿ ಪ್ರಚೋದನೆಗೆ ಯತ್ನಿಸಿದ ಆರೋಪಿ ಬಂಧನ
author img

By

Published : Jan 21, 2022, 12:09 PM IST

ಬೆಂಗಳೂರು: ತಮಿಳುನಾಡು ಕ್ರಿಕೆಟ್ ಲೀಗ್‌ನ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಐವರು ಕ್ರಿಕೆಟಿಗರಿಗೆ ಇನ್​​ಸ್ಟಾಗ್ರಾಮ್‌ನಲ್ಲಿ ಮೆಸೇಜ್​​ ಹಾಕಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ‌.

ಬಾಗೇಪಲ್ಲಿ‌ ಮೂಲದ ಆನಂದ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಸಾಲ ತೀರಿಸಲು ಕ್ರಿಕೆಟಿಗರಿಗೆ ಬ್ಲ್ಯಾಕ್ ಮೇಲ್ ಮಾಡಲು ತಂತ್ರ ರೂಪಿಸಿದ್ದ ಎಂಬುವುದು ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ತಮಿಳುನಾಡಿನ ಖ್ಯಾತ ಆಲ್ರೌಂಡರ್ ಸತೀಶ್ ರಾಜಗೋಪಾಲ್ ಎಂಬುವರಿಗೆ ಇದೇ ತಿಂಗಳು 3ರಂದು ಆರೋಪಿ ಇನ್ ಸ್ಟ್ರಾಗ್ರಾಮ್‌ ಮೂಲಕ ಮುಂಬರುವ ಟಿಎನ್‌ಪಿಲ್‌ನ ಫಿಕ್ಸಿಂಗ್‌ನಲ್ಲಿ‌ ಭಾಗಿಯಾಗಬೇಕು. ಈಗಾಗಲೇ ಇಬ್ಬರು ಆಟಗಾರರು ಫಿಕ್ಸಿಂಗ್‌ಗೆ ಒಪ್ಪಿದ್ದಾರೆ. ನೀವು ಭಾಗಿಯಾದರೆ ಪ್ರತಿ ಪಂದ್ಯಕ್ಕೆ 40 ಲಕ್ಷ ನೀಡುವುದಾಗಿ ಆಫರ್ ನೀಡಿದ್ದಾನೆ.

ಇದೇ ಮೆಸೇಜ್​​ ಅನ್ನು ತಮಿಳುನಾಡು ಆಟಗಾರರಾದ ಆ್ಯಂಟೋನಿ ದಾಸ್, ಸಂಜಯ್ ಯಾದವ್, ಅಶ್ವಿನ್ ಕ್ರಿಸ್ಟ್, ಎಂ ಸಿದ್ಧಾರ್ಥ್ ಎಂಬುವರಿಗೂ ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಪ್ರಚೋದನಾತ್ಮಕ ಸಂದೇಶ ಕಳುಹಿಸಿದ್ದ‌. ಐವರ ಪೈಕಿ ರಾಜಗೋಪಾಲ್ ಸತೀಶ್ ಮಾತ್ರ ಮೆಸೇಜ್​​ ರಿಫ್ಲೈ ಮಾಡಿದ್ದರು‌. ಆರೋಪಿ ಫಿಕ್ಸಿಂಗ್ ಆಮಿಷವೊಡ್ಡಿರುವುದನ್ನು ಈ ಆಟಗಾರರು ಬಿಸಿಸಿಐ ಗಮನಕ್ಕೆ ತಂದಿದ್ದರು‌. ಬಿಸಿಸಿಐನಿಂದ ಸೌತ್ ಜೋನ್ ಆ್ಯಂಟಿ ಕರೆಪ್ಷನ್ ಅಂಡ್ ಇಂಟಿಗ್ರಿಟಿ ಯೂನಿಟ್ ತಂಡ ದೂರಿನ ಮೇರೆಗೆ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ‌.

ಕ್ರಿಕೆಟಿಗರನ್ನ ವಂಚಿಸುವುದು ಹೇಗೆಂದು ಯೂಟ್ಯೂಬ್‌ನಲ್ಲಿ ಸರ್ಚಿಂಗ್‌..!
ಬಂಧಿತನಾಗಿರುವ ಆರೋಪಿ ಆನಂದ್ ಕುಮಾರ್ ಈ ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಲ್ಲಿ ಸಾಲ ತೀರಿಸಿಕೊಳ್ಳಲು ಅಡ್ಡ ದಾರಿ ಹಿಡಿದಿರುವುದು ಬೆಳಕಿಗೆ ಬಂದಿದೆ. ಆರೋಪಿ ಆನಂದ್ ಕುಮಾರ್‌ಗೆ 9 ವರ್ಷಗಳ ಹಿಂದೆ ತಂದೆ ತೀರಿಕೊಂಡಿದ್ದು ತಾಯಿ ಜೊತೆ ವಾಸವಿದ್ದ. ಕೊರಿಯರ್ ಡಿಲೆವರಿ ಬಾಯ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಅತಿಯಾಗಿ ಫ್ಯಾಂಟಸಿ ಕ್ರಿಕೆಟ್ ಆಡುವ ಶೋಕಿ ಹೊಂದಿದ್ದ ಈತ 4 ರಿಂದ 5 ಲಕ್ಷ ರೂ. ಸಾಲ ಮಾಡಿಕೊಂಡು ಹೈರಾಣಾಗಿದ್ದ. ಸಾಲ ತೀರಿಸಲು ಕ್ರಿಕೆಟಿಗರನ್ನ ಬ್ಲ್ಯಾಕ್ ಮೇಲ್ ಮಾಡಿ ವಂಚಿಸುವ ಯೋಚನೆ ಮಾಡಿದ್ದ ಆರೋಪಿ ಯೂಟ್ಯೂಬ್‌ನಲ್ಲಿ ಕ್ರಿಕೆಟಿಗರನ್ನ ವಂಚಿಸುವುದು ಹೇಗೆ ಎಂದು ತಡಕಾಡಿದ್ದ. ಕ್ರಿಕೆಟಿಗರಿಗೆ ಇನ್‌ಸ್ಟಾ ಮೂಲಕ ಫಿಕ್ಸಿಂಗ್ ಆಮಿಷವೊಡ್ಡಿ ಒಂದು ವೇಳೆ ಆಟಗಾರರು ಪ್ರತಿಕ್ರಿಯಿಸಿದರೆ ಸ್ಕ್ರೀನ್ ಶಾಟ್ ತೆಗೆದು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಲು ಪ್ಲ್ಯಾನ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಗೋಪಾಲ್ ಸತೀಶ್ ಮುಂಬೈ, ಪಂಜಾಬ್, ಕೊಲ್ಕತ್ತಾ ಪರ ಐಪಿಎಲ್‌ನಲ್ಲಿ ಆಡಿದ್ದು ಸದ್ಯ ತಮಿಳುನಾಡು ರಾಜ್ಯ ರಣಜಿ ತಂಡದ ಸದಸ್ಯನಾಗಿದ್ದಾರೆ. ಟಿಎನ್‌ಪಿಎಲ್‌ನಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ಪರ ಕಣಕ್ಕಿಳಿಯುವ ಆಟಗಾರರಾಗಿದ್ದಾರೆ‌.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.