ಬಂಕುರಾ( ಪಶ್ಚಿಮ ಬಂಗಾಳ): ಬಂಕುರಾ ಜಿಲ್ಲೆಯಲ್ಲಿ 37 ವರ್ಷದ ವ್ಯಕ್ತಿಯೊಬ್ಬ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. 2ನೇ ಕ್ಲಾಸ್ಗೆ ಹೋಗುತ್ತಿರುವ ಎಳೆಯ ಕರುಳಬಳ್ಳಿಯ ಮೇಲೆ ಅತ್ಯಾಚಾರ ಎಸೆಗಿದ್ದರಿಂದ ಆ ಮಗುವಿನ ಗುಪ್ತಾಂಗದಲ್ಲಿ ರಕ್ತ ಬರುವಂತಾಗಿದೆ.
ಹೀಗೆ ಮಾಡುವುದರಿಂದ ತನಗೆ ಇದ್ದ ಮದುವೆ ಅಡೆತಡೆ ನಿವಾರಣೆ ಆಗುತ್ತದೆ ಎಂಬ ಕಾರಣಕ್ಕೆ ಮಾಂತ್ರಿಕನೊಬ್ಬ ನೀಡಿದ ಸಲಹೆ ಮೇಲೆ ಈ ಕಿರಾತಕ ಆ ಎಳೆಯ ಬಾಲಕಿ ಮೇಲೆ ಅತ್ಯಾಚಾರ ಎಸೆಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಖಾಸಗಿ ಬೋಧಕನಾಗಿ ಕೆಲಸ ಮಾಡುತ್ತಿದ್ದಾನೆ. ಇದೀಗ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಬೋಧಕ ಹಾಗೂ ಆತನ ಸಲಹೆಗಾರ ಮಾಂತ್ರಿಕನನ್ನು ಬಂಧಿಸಿದ್ದಾರೆ. ಬಿಷ್ಣುಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.
ಮದುವೆ ಅಡೆತಡೆ ನಿವಾರಣೆಗೆ ದುರುಳನಿಂದ ದುಷ್ಕೃತ್ಯ: ಬಾಲಕಿಯ ಖಾಸಗಿ ಅಂಗದಿಂದ ರಕ್ತದಲ್ಲಿ ತೊಯ್ದ ಬಟ್ಟೆಯನ್ನು ತಂದರೆ ಸಮಸ್ಯೆ ಬಗೆಹರಿಯಬಹುದು ಎಂದು ತಂತ್ರಿ ಈ ಖಾಸಗಿ ಬೋಧಕನಿಗೆ ಸಲಹೆ ನೀಡಿದ್ದನಂತೆ. ಈ ಬೋಧಕನಿಗೆ ವಯಸ್ಸಾಗಿದ್ದರೂ ಇನ್ನೂ ಮದುವೆಯ ಭಾಗ್ಯ ಕೂಡಿ ಬಂದಿರಲಿಲ್ಲ. ಹೀಗಾಗಿ ಈತ ಮಾಂತ್ರಿಕನ ಮೊರೆ ಹೋಗಿದ್ದನಂತೆ. ಆತನ ಸಲಹೆಯ ಮೇರೆಗೆ, ಈ ಅತ್ಯಾಚಾರ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಂತ್ರಿಕ ನೀಡಿದ ಆ ಸಲಹೆ ಏನು?: ಈ ಖಾಸಗಿ ಬೋಧಕ ತಂತ್ರಿಯ ಸಲಹೆ ಮೇರೆಗೆ ಬಾಲಕಿಯ ಗುಪ್ತಾಂಗದಿಂದ ಬರುವ ರಕ್ತದಿಂದ ತೊಯ್ದ ಬಟ್ಟೆ ತರಲು ಪ್ಲಾನ್ ರೂಪಿಸಿದ್ದಾನೆ. ಈ ಭಾಗವಾಗಿ 2 ನೇ ತರಗತಿಯಲ್ಲಿ ಓದುತ್ತಿರುವ ತನ್ನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆದರೆ ಬಾಲಕಿ ನೋವು ತಡೆಯಲಾರದೇ ನಡೆದ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ.
ಪೋಷಕರಿಗೆ ವಿಷಯ ತಿಳಿದಿದ್ದು ಹೇಗೆ?: ಬಾಲಕಿಯ ಹೇಳಿದ ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪೋಷಕರು ಅಲ್ಲಿ ವೈದ್ಯರ ಬಳಿ ತಪಾಸಣೆ ನಡೆಸಿದ್ದಾರೆ. ಆ ಬಳಿಕ ಬೋಧಕನ ವಿರುದ್ಧ ದೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೋಷಕರು ನೀಡಿದ ದೂರಿನ ಮೇರೆಗೆ ಶಿಕ್ಷಕನನ್ನು ಕಳೆದ ವಾರ ಬಂಧಿಸಲಾಗಿದ್ದು, ಭಾನುವಾರದಂದು ಮಾಂತ್ರಿಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ನಡುವೆ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಪತ್ನಿ ಸಾವು.. 5 ವರ್ಷದ ಕಂದನನ್ನು ಕೊಂದು ತಂದೆ ಆತ್ಮಹತ್ಯೆ!