ಭುವನೇಶ್ವರ್: ಭಾರತೀಯ ಹಾಕಿ ತಂಡದ ಮಾಜಿ ನಾಯಕ ಪ್ರಭೋದ್ ಟಿರ್ಕಿ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಮಾಜಿ ಹಾಕಿ ಆಟಗಾರರ ಮನೆಗೆ ನುಗ್ಗಿದ ಕಳ್ಳರು, ಎಲ್ಲಾ ಪದಕ ಸೇರಿದಂತೆ ಅನೇಕ ಮೌಲ್ಯಯುತ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಟಿರ್ಕಿ ಅವರ ಕ್ರೀಡಾ ಜೀವನದ ಎಲ್ಲಾ ಪದಕಗಳನ್ನು ಕದ್ದೊಯ್ಯಲಾಗಿದೆ. ಅಚ್ಚರಿ ಎಂದರೆ ರಾಜಧಾನಿಯಲ್ಲಿನ ಹೈ ಸೆಕ್ಯೂರಿಟಿ ವಲಯದಲ್ಲಿ ಈ ಕಳ್ಳತನ ನಡೆದಿದೆ. ಈ ಘಟನೆಯಲ್ಲಿ ಸ್ಥಳೀಯ ಜನರು ಇರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ಲಾಕ್ ಮುರಿದು ಒಳ ನುಗ್ಗಿದ ಕಳ್ಳರು, ಅಲ್ಲಿದ್ದ ಅನೇಕ ಮೌಲ್ಯಯುತ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಮಾಜಿ ಕ್ರೀಡಾಪಟು ಮತ್ತು ಅವರ ಹೆಂಡತಿ ಮನೆಯಲ್ಲಿಲ್ಲದಾಗ ಈ ಘಟನೆ ನಡೆದಿದೆ. ಘಟನೆ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದರು. ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.
ಪ್ರಭೋದ್ ಟಿರ್ಕಿ ಕುಟುಂಬ ಸದಸ್ಯರು ಮನೆಯಲ್ಲಿ ಇಲ್ಲ ಎಂಬುದನ್ನು ತಿಳಿದು ದುಷ್ಕರ್ಮಿಗಳು ಕಳ್ಳತನ ಮಾಡಿ, ಎಲ್ಲಾ ಪದಕ ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಇದನ್ನು ನೋಡಿದರೆ, ಇದನ್ನೆಲ್ಲಾ ತಿಳಿದ ಸ್ಥಳೀಯರೇ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗುತ್ತಿದೆ. ವಿಧಿವಿಜ್ಞಾನ ತಂಡ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಎಲ್ಲಾ ಪ್ರಯತ್ನ ನಡೆಸಲಾಗಿದೆ. ಎಲ್ಲಾ ಮಾಹಿತಿ ಪಡೆಯಲಾಗಿದ್ದು, ಶೀರ್ಘವೇ ಅವರನ್ನು ಬಂಧಿಸಲಾಗುವುದು ಎಂದು ಭುವನೇಶ್ವರ ಡಿಸಿಪಿ ಪ್ರತೀಕ್ ಸಿಂಗ್ ಮಾಹಿತಿ ನೀಡಿದ್ದಾರೆ.
ಯಾರು ಈ ಟಿರ್ಕಿ: ಅಕ್ಟೋಬರ್ 6, 1984 ರಂದು ಸುಂದರ್‌ಗಢ್ ಜಿಲ್ಲೆಯ ಲುಲ್ಕಿಡಿಹಿ ಗ್ರಾಮದಲ್ಲಿ ಜನಿಸಿದ ಟಿರ್ಕಿ ಜನಿಸಿದ್ದಾರೆ. 2000 ರಲ್ಲಿ ಜೂನಿಯರ್ ಏಷ್ಯಾ ಕಪ್‌ಗೆ ಮೂಲಕ ತಮ್ಮ ಕ್ರೀಡಾ ಜೀವನ ಶುರು ಮಾಡಿದರು. ಒಟ್ಟು 135 ಅಂತಾರಾಷ್ಟ್ರೀಯ ಕ್ಯಾಪ್ಗಳಲ್ಲಿ ಅವರು ಆಡಿದ್ದಾರೆ. ಟಿರ್ಕಿಯವರ ನಾಯಕತ್ವದಲ್ಲಿ ಭಾರತವು 2007 ರಲ್ಲಿ ಚೆನ್ನೈನಲ್ಲಿ ಏಷ್ಯಾಕಪ್ ಚಿನ್ನದ ಪದಕವನ್ನು ಗೆದ್ದಿದ್ದರು.
ಕದಿಯಲು ಹೋಗಿ ಬಾವಿಗೆ ಬಿದ್ದ.. ಮತ್ತೊಂದೆಡೆ ಇತ್ತೀಚೆಗೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಅನಂತಸಾಗರ್ದಲ್ಲಿನ ಎಸ್ಆರ್ ವಿಶ್ವವಿದ್ಯಾಲದ ಯುವತಿಯರ ಹಾಸ್ಟೆಲ್ನಲ್ಲಿ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ಕದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ತೋಟ ಚರಣ್ ಎಂಬ ಆರೋಪಿ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಟೆಕ್ ವಿದ್ಯಾಭ್ಯಾಸ ಮಾಡುತ್ತಿದ್ದ. ಕಳ್ಳತನ ಮಾಡಿ ಹೋಗುವಾಗ ಈತ ಎಡವಿ ಕೃಷಿ ಬಾವಿಯಲ್ಲಿ ಬಿದ್ದಿದ್ದ.
ಇಡೀ ರಾತ್ರಿ ಕೃಷಿ ಬಾವಿಯಲ್ಲಿ ದಿನ ಕಳೆದ ಈತನನ್ನು ಭಾನುವಾರ ರಕ್ಷಣೆ ಮಾಡಲಾಗಿತ್ತು. ಘಟನೆ ಕುರಿತು ಮಾತನಾಡಿರುವ ಹಸನ್ಪರ್ತಿ ಸಬ್ ಇನ್ಸ್ಪೆಕ್ಟರ್ ಎಂ ಭರತ್ ಕುಮಾರ್, ಚರಣ್ ಮತ್ತು ಮಧು ಎಂಬ ಆರೋಪಿಗಳು, ಯುವತಿಯರ ಹಾಸ್ಟೆಲ್ಗೆ ಪ್ರವೇಶಿಸಿ, ಮೂರು ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ ಕದ್ದಿದ್ದಾರೆ. ಈ ಘಟನೆ ಗಮನಿಸಿದ ಯುವತಿಯರು, ಎಚ್ಚರಿಕೆ ನೀಡಿದರು. ಇದರ ಬೆನ್ನಲ್ಲೇ ಹಾಸ್ಟೆಲ್ ಸಿಬ್ಬಂದಿ ಮತ್ತು ಸೆಕ್ಯೂರಿಟಿ ಅಧಿಕಾರಿಗಳು ಅವರನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಚರಣ್ ಬಾವಿಗೆ ಎಡವಿ ಬಿದ್ದಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೆದ್ದಾರಿ ದಾಟುತ್ತಿದ್ದಾಗ ಗುದ್ದಿದ ಟ್ರಕ್: ತಾಯಿ, ಮಗಳು ಸೇರಿ 6 ಮಂದಿ ದಾರುಣ ಸಾವು!