ಕುಷ್ಟಗಿ (ಕೊಪ್ಪಳ): ಕುರಿ ಸಾಕಾಣಿಕೆಗಾಗಿ ಕುಷ್ಟಗಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ರೈತ 3 ಲಕ್ಷ ಸಾಲದ ಚೆಕ್ ಡ್ರಾ ಮಾಡಿದ ಕೆಲವೇ ನಿಮಿಷಗಳಲ್ಲಿ ಚಾಲಕಿ ಕಳ್ಳರು ಹಣ ಎಗರಿಸಿದ ಪ್ರಕರಣದಲ್ಲಿ 6 ತಿಂಗಳ ಬಳಿಕ ಆರೋಪಿಗಳನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.
ತಮಿಳುನಾಡಿನ ಸೆಲ್ವಪುರಂ ಮೂಲದ ವಿಜಯ್, ಓ.ಜಿ.ಕುಪ್ಪಂ ಶ್ರೀನಿವಾಸಲು ವೆಂಕಟಸ್ವಾಮಿ, ನಾಗರಾಜ್, ಚಂದುಲು, ಬಾಲು,ತಿರುವಂಬೂರಿನ ಮಥನ್, ಶಿವಾ ಬಂಧಿತ ಆರೋಪಿಗಳು. ಬಂಧಿತರಿಂದ 1.5 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.
ಕುಷ್ಟಗಿ ಡಂಬರ್ ಓಣಿಯ ನಿವಾಸಿ ದೊಡ್ಡಬಸಯ್ಯ ಕಾಳಾಪೂರ ಮಠ ಕುಷ್ಟಗಿ ಪೀಕಾರ್ಡ ಬ್ಯಾಂಕಿನಲ್ಲಿ 3.06ಲಕ್ಷ ರೂ. ಸಾಲ ಮಾಡಿದ್ದರು. ಹಣವನ್ನು ರೈತ ದೊಡ್ಡಬಸಯ್ಯ ಹಾಗೂ ಪೀಕಾರ್ಡ ಬ್ಯಾಂಕ್ ಪರಿಚಾರಕ ಸಯ್ಯದ್ ಗೌಸ್ ಇಲ್ಲಿನ ಪ್ರಗತಿ ಕೃಷ್ಣ ಬ್ಯಾಂಕಿನಲ್ಲಿ ಚೆಕ್ ನಗದೀಕರಿಸಿ ಡ್ರಾ ಮಾಡಿದ್ದರು. 50ಸಾವಿರ ರೂ. ಸಯ್ಯದ್ ಗೌಸ್ ಜೇಬಿನಲ್ಲಿ, ಉಳಿದ 1.56 ಲಕ್ಷ ರೂ. ಸ್ಕೂಟಿ ಸೀಟ್ ಲಾಕ್‌ನಲ್ಲಿ ಇಟ್ಟು ಚಹಾ ಕುಡಿಯಲು ಹೋಗಿದ್ದರು. ನಂತರ ಬರುವಷ್ಟರಲ್ಲಿ ಸ್ಕೂಟಿ ಲಾಕ್‌ನಲ್ಲಿ ಇಟ್ಟಿದ್ದ ಹಣ ಕಳುವಾಗಿತ್ತು.
ಇದರಿಂದ ಗಾಬರಿಯಾದ ದೊಡ್ಡಬಸಯ್ಯ ಕಾಳಾಪೂರಮಠ ಹಾಗೂ ಸಯ್ಯದ್ ಗೌಸ್ ಎಷ್ಟು ಹುಡುಕಿದರೂ ಕಳ್ಳರ ಸುಳಿವು ಸಿಕ್ಕಿರಲಿಲ್ಲ. ಅಕ್ಕ ಪಕ್ಕ ಅಂಗಡಿಗಳ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳರ ಚಲನ ವಲನ ಸುಳಿವು ಸಿಕ್ಕಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕುಷ್ಟಗಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು.
ಸದ್ಯ ಬಂಧಿತರು ಎಟಿಎಂ ಹಾಗೂ ಬ್ಯಾಂಕುಗಳ ಗ್ರಾಹಕರ ಸೋಗಿನಲ್ಲಿ ಹೊಂಚು ಹಾಕಿ ಕಳವು ಮಾಡುತ್ತಿದ್ದರು. ಇತ್ತೀಚಿಗೆ ಇಳಕಲ್‌ನಲ್ಲಿ ಗ್ರಾಹಕನ ಗಮನ ಬೇರೆಡೆ ಸೆಳೆದು ಕಳವು ಮಾಡಲುವು ಯತ್ನಿಸಿದ ಪ್ರಕರಣದಲ್ಲಿ ಕೆಲವು ಕಳ್ಳರು ಸಿಕ್ಕಿ ಬಿದ್ದಿದ್ದರು. ಈ ವೇಳೆ ವಿಚಾರಣೆಯಲ್ಲಿ ಕುಷ್ಟಗಿಯಲ್ಲಿ ಕಳವು ಮಾಡಿರುವ ವಿಷಯಗೊತ್ತಾಗಿದ್ದು, ಸದರಿ ಪ್ರಕರದಲ್ಲಿ ತಮಿಳುನಾಡು ಮೂಲದ ಕಳವು ಪ್ರಕರಣದಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ರೈತ ಡ್ರಾ ಮಾಡಿದ ಸಾಲದ ಮೊತ್ತವನ್ನು ಕೆಲವೇ ಕ್ಷಣದಲ್ಲಿ ಎಗರಿಸಿದ ಚಾಲಕಿ ಕಳ್ಳರು!