ETV Bharat / crime

ಇಬ್ಬರು ಮನೆಗಳ್ಳರನ್ನು ಬಂಧಿಸಿದ ಪೊಲೀಸರು: ಚಿನ್ನಾಭರಣ ವಶ - ಹಾವೇರಿ ಯಲ್ಲಿ ಮನೆಗಳ್ಳತನ

ಮನೆಗಳ್ಳತನವಾಗಿದ್ದ ರವಿ ಜೈನ್ ಹಾವೇರಿಯ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ವಿಶೇಷ ತನಿಖಾ ತಂಡ ರಚಿಸಿದ್ದ ಹಾವೇರಿಯ ಪೊಲೀಸರು, ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Theft
Theft
author img

By

Published : Apr 13, 2021, 10:38 PM IST

ಹಾವೇರಿ: ಕಳೆದ ಮಾರ್ಚ್‌ 28ರಂದು ಹಾವೇರಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣ ಬೇಧಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಧಾರವಾಡದ 28 ವರ್ಷದ ಮಹ್ಮದ್ ಹುಸೇನ್ ಶೇಖ್, ಹುಬ್ಬಳ್ಳಿಯ 28 ವರ್ಷದ ಅಮೀದ್ ಬೇಪಾರಿ ಎಂದು ಗುರುತಿಸಲಾಗಿದೆ.

ಮತ್ತೊಬ್ಬ ಆರೋಪಿ 26 ವರ್ಷದ ಸಲೀಮ್ ಬೇಪಾರಿಯನ್ನ ಗೋವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ನಾಲ್ಕು ಲಕ್ಷ, 85 ಸಾವಿರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಹಾವೇರಿ ಏಲಕ್ಕಿ ಓಣಿಯಲ್ಲಿ ಕಳೆದ ತಿಂಗಳು 28ರಂದು ನಡೆದಿದ್ದ ಪ್ರಕರಣ 29ರಂದು ಬೆಳಕಿಗೆ ಬಂದಿತ್ತು. ಮನೆಗಳ್ಳತನವಾಗಿದ್ದ ರವಿ ಜೈನ್ ಹಾವೇರಿಯ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ವಿಶೇಷ ತನಿಖಾ ತಂಡ ರಚಿಸಿದ್ದ ಹಾವೇರಿಯ ಪೊಲೀಸರು, ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.